Subscribe to Gizbot

ಮೊಬೈಲ್ ಸಂಖ್ಯೆ ಬಳಸದೇ ವಾಟ್ಸಾಪ್ ಖಾತೆ ತೆರೆಯಬೇಕೇ?

Posted By:

ಮೊಬೈಲ್ ಪ್ಲಾಟ್‌ಫಾರ್ಮ್‌ಗಾಗಿ ಮೆಸೆಂಜರ್ ಅಪ್ಲಿಕೇಶನ್‌ ಆಗಿ ವಾಟ್ಸಾಪ್ ಹೆಸರು ಮಾಡಿದೆ. ಆಂಡ್ರಾಯ್ಡ್, ಬ್ಲ್ಯಾಕ್‌ಬೆರ್ರಿ, ಸಿಂಬಿಯನ್, ನೋಕಿಯಾ, ಜಾವಾ ಮುಂತಾದ ಎಲ್ಲಾ ಮೊಬೈಲ್ ಪ್ಲಾಟ್‌ಫಾರ್ಮ್‌ಗಳಿಗೆ ಮಾತ್ರವೇ ಇದು ಲಭ್ಯವಾಗದೇ ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚು ನಿರತವಾಗಿರುವ ಅಪ್ಲಿಕೇಶನ್ ಆಗಿ ಹೆಸರು ಮಾಡಿದೆ. ನಿಮ್ಮ ಫೋನ್‌ನಲ್ಲಿ ನೀವು ಇಂಟರ್ನೆಟ್ ಅನ್ನು ಹೊಂದಿದ್ದರೆ ಸಾಕು, ನೀವು ಯಾರಿಗೆ ಬೇಕಾದರೂ ಅನಿಯಮಿತ ಸಂದೇಶಗಳನ್ನು ವಾಟ್ಸಾಪ್ ಬಳಸಿಕೊಂಡು ಕಳುಹಿಸಬಹುದು. ಈ ಸಂದೇಶಗಳು ದೀರ್ಘ ಅಥವಾ ಸಣ್ಣದಾಗಿರಬಹುದು, ವೀಡಿಯೊ, ಆಡಿಯೊ, ಚಿತ್ರಗಳು, ಸಂದೇಶಗಳು ಹೀಗೆ ಯಾವ ಸ್ವರೂಪದಲ್ಲಿ ಬೇಕಾದರೂ ಇರಬಹುದು. ಮತ್ತು ನಾವು ಇದರಲ್ಲಿ ನೋಡಬಹುದಾದ ಅತಿ ಉನ್ನತ ಆಯ್ಕೆ ಎಂದರೆ ಇದು ಉಚಿತ ಎಂಬುದಾಗಿದೆ.

ಇದನ್ನೂ ಓದಿ: ಮೈಕ್ರೋಮ್ಯಾಕ್ಸ್ 4 ಪ್ಲಸ್ ದೊರೆಯುವ ಟಾಪ್ ತಾಣಗಳು

ಮೊಬೈಲ್ ಸಂಖ್ಯೆ ಇಲ್ಲದೆ ವಾಟ್ಸಾಪ್ ಅನ್ನು ಬಳಸುವುದು ಹೇಗೆ ಎಂಬುದನ್ನು ಕುರಿತು ಇಂದಿನ ಲೇಖನದಲ್ಲಿ ಸಲಹೆಗಳನ್ನು ನೋಡೋಣ.

ಇದನ್ನೂ ಓದಿ: ದೋಷಿಗಳ ವಾಟ್ಸಾಪ್ ಖಾತೆ ಜಾಲಾಡಬೇಕೇ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1

#1

ವಾಟ್ಸಾಪ್‌ನಲ್ಲಿ ನೀವು ಖಾತೆಯನ್ನು ರಚಿಸಬೇಕು ಎಂದಾದಲ್ಲಿ ಮೊಬೈಲ್ ಸಂಖ್ಯೆಯನ್ನು ಹೊಂದಿರುವುದು ಅತ್ಯವಶ್ಯಕವಾಗಿದೆ. ಆದರೆ ನಿಮಗೆ ಮೊಬೈಲ್ ಸಂಖ್ಯೆಯನ್ನು ಬಳಸುವುದು ಇಷ್ಟವಿಲ್ಲ ಎಂದಾದಲ್ಲಿ ಕೂಡ ನಿಮಗೆ ವಾಟ್ಸಾಪ್ ಅನ್ನು ಬಳಸಬಹುದು. ಅದರಿಂದ ಸಂದೇಶಗಳನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಹಾಗಿದ್ದರೆ ಅದು ಹೇಗೆ ಎಂಬುದನ್ನು ಈ ಕೆಳಗಿನ ವಿಧಾನದ ಮೂಲಕ ಅರಿತುಕೊಳ್ಳೋಣ.

2

#2

ನಿಮ್ಮ ಮೊಬೈಲ್ ಫೋನ್‌ನಲ್ಲಿ ವಾಟ್ಸಾಪ್ ಅನ್ನು ನೀವು ಈಗಾಗಲೇ ಇನ್‌ಸ್ಟಾಲ್ ಮಾಡಿಕೊಂಡಿದ್ದರೆ ಅದನ್ನು ಅನ್‌ಇನ್‌ಸ್ಟಾಲ್ ಮಾಡಿಕೊಳ್ಳಿ. ಇಮೇಜ್ ಫೈಲ್‌ಗಳು/ವೀಡಿಯೊಗಳನ್ನು ವಾಟ್ಸಾಪ್‌ನಲ್ಲಿ ನಿಮಗೆ ಉಳಿಸಬಹುದು.

3

#3

ಹೊಸ ವಾಟ್ಸಾಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ಇನ್‌ಸ್ಟಾಲ್ ಮಾಡಿ

4

#4

ಫ್ಲೈಟ್ ಮೋಡ್‌ನಲ್ಲಿ ಬದಲಾಯಿಸುವ ಮೂಲಕ ನಿಮ್ಮ ಸಂದೇಶ ಸೇವೆಯನ್ನು ಲಾಕ್ ಮಾಡಿ. ಇದೀಗ ವಾಟ್ಸಾಪ್ ಅನ್ನು ತೆರೆಯಿರಿ ಮತ್ತು ನಿಮ್ಮ ಸಂಖ್ಯೆಯನ್ನು ಅದಕ್ಕೆ ಸೇರಿಸಿ. ಇದರಿಂದ ಸರ್ವರ್‌ಗೆ ಸಂದೇಶವನ್ನು ಕಳುಹಿಸಲು ಸಾಧ್ಯವಿಲ್ಲ ಮತ್ತು ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ.

5

#5

ಪರಿಶೀಲನೆ ಇನ್ನೂ ಅಪೂರ್ಣವಾಗಿದ್ದಲ್ಲಿ ಮತ್ತು ಸಂದೇಶಗಳು ಬ್ಲಾಕ್ ಆಗಿದ್ದಲ್ಲಿ, ಪರಿಶೀಲನೆಗೆ ಪರ್ಯಾಯ ವಿಧಾನವನ್ನು ಅನುಸರಿಸಲು ವಾಟ್ಸಾಪ್ ನಿಮ್ಮನ್ನು ಕೇಳುತ್ತದೆ. ಆಗ 'ಚೆಕ್ ತ್ರೂ ಎಸ್‌ಎಮ್‌ಎಸ್' ಇದನ್ನು ಆರಿಸಿ. ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ. 'ಸಬ್‌ಮಿಟ್' ಕ್ಲಿಕ್ ಮಾಡಿ ಮತ್ತು ಕೂಡಲೇ 'ಕ್ಯಾನ್ಸಲ್' ಕ್ಲಿಕ್ ಮಾಡಿ. ಇದು ಪರಿಶೀಲನೆ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸುತ್ತದೆ.

6

#6

ಇದೀಗ, ಸಂದೇಶಗಳನ್ನು ರಚಿಸಬೇಕಾಗುತ್ತದೆ. ಆಂಡ್ರಾಯ್ಡ್‌ಗಾಗಿ ಸ್ಪೂಫ್ ಟೆಕ್ಸ್ಟ್ ಮೆಸೇಜ್ ಇನ್‌ಸ್ಟಾಲ್ ಮಾಡಿ ಮತ್ತು ಐಫೋನ್‌ಗಾಗಿ ಫೇಕ್-ಎ-ಮೆಸೇಜ್ ಇನ್‌ಸ್ಟಾಲ್ ಮಾಡಿ.

7

#7

ಔಟ್‌ಬಾಕ್ಸ್‌ಗೆ ಹೋಗಿ > ಸ್ಪೂಫರ್ ಅಪ್ಲಿಕೇಶನ್ ಸಂದೇಶ ವಿವರಗಳನ್ನು ನಕಲಿಸಿ > ಫೇಕ್ ಪರಿಶೀಲನೆಗಾಗಿ ಇದನ್ನು ಕಳುಹಿಸಿ.

8

#8

ಅವರ ಫೇಕ್ ಸಂದೇಶಗಳಲ್ಲಿ ಈ ವಿವರಗಳನ್ನು ಬಳಸಿ: ಇವರಿಗೆ: +447900347295 ಇವರಿಂದ: + (ದೇಶದ ಕೋಡ್) (ಮೊಬೈಲ್ ಸಂಖ್ಯೆ)
ಸಂದೇಶ: ನಿಮ್ಮ ಇಮೇಲ್ ವಿಳಾಸ

9

#9

ನಿಮ್ಮ ಫೇಕ್ ಸಂಖ್ಯೆಗೆ ಸಂದೇಶವನ್ನು ಕಳುಹಿಸಲಾಗುತ್ತದೆ ಮತ್ತು ನಿಮ್ಮ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಈ ಸಂಖ್ಯೆಯನ್ನು ಬಳಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about how to use whatsapp without any mobile phone number. Moving forword to the eight easy steps we can easily use whatsapp without phone number.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot