ನಿಮ್ಮ ಗಣಕಯಂತ್ರಕ್ಕೆ ಮದರ್‍ಬೊರ್ಡ್ ಆಯ್ಕೆ ಮಾಡುವ ಮುನ್ನ
ಗಣಕಯಂತ್ರವನ್ನು ಖರೀದಿಸಬೇಕೆಂದು ನಿರ್ಧರಿಸಿದ್ದರೆ ಅದರಲ್ಲಿನ ಮದರ್‍ಬೊರ್ಡ್ ಎಲ್ಲಕ್ಕಿಂತ ಹೆಚ್ಚಿನ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಅದನ್ನು ಆಯ್ಕೆ ಮಾಡುವಾಗ ಕೆಲವೊಂದು ಅಂಶಗಳನ್ನು ಗಮನಿಸಬೇಕಾಗುತ್ತದೆ.
ಯಾವುದೇ ಯಂತ್ರ ಇರಲಿ ಕೆಲಸ ಮಾಡಲು ಅದರಲ್ಲಿ ಮದರ್ ಬೊರ್ಡ್ ಅತಿ ಮುಖ್ಯ. ಎಲ್ಲಾ ಭಾಗಗಳ ಮಧ್ಯೆ ಸಂಪರ್ಕ ಕಲ್ಪಿಸುವ ಜವಬ್ದಾರಿ ಮದರ್‍ಬೊರ್ಡ್ ನದು.

ನಿಮ್ಮ ಗಣಕಯಂತ್ರ ಚೆನ್ನಾಗಿ ಕೆಲಸ ಮಾಡಬೇಕೆಂದರೆ ಸರಿಯಾದ ಮದರ್ ಬೊರ್ಡ್ ತುಂಬಾ ಮುಖ್ಯ. ನೀವು ಈಗಾಗಲೇ ನಿಮಗೇನು ಬೇಕೆಂದು ಸರಿಯಾಗಿ ಯೋಚಿಸಿದ್ದರೆ ನೀವು ಸುಲಭವಾಗಿ ಮದರ್‍ಬೊರ್ಡ್ ಆಯ್ಕೆ ಮಾಡಬಹುದು. ಇಲ್ಲವಾದಲ್ಲಿ ಮದರ್‍ಬೊರ್ಡ್ ಆಯ್ಕೆ ಮಾಡಲು ಏನೆಲ್ಲಾ ಅವಶ್ಯಕ ಎಂದು ಒಮ್ಮೆ ಓದಿ.
ಆಕಾರ :
ಸಾಮಾನ್ಯವಾಗಿ, ಗಣಕಯಂತ್ರ ತಯಾರಿಸುವವರು ತಮ್ಮ ಪೆಟ್ಟಿಗೆಯಲ್ಲಿ ಸರಿಯಾಗಿ ಕೂಡುವ ಮದರ್‍ಬೊರ್ಡ್ ಅನ್ನೇ ಆರಿಸುತ್ತಾರೆ. ನೀವು ನೆನಪಿಡಬೇಕಾಗಿರುವುದು ಏನೆಂದರೆ ನೀವು ದೊಡ್ಡ ಪೆಟ್ಟಿಗೆಯಲ್ಲಿ ಚಿಕ್ಕ ಮದರ್‍ಬೊರ್ಡ್ ಅನ್ನು ಕೂಡ ಉಪಯೋಗಿಸಬಹುದು.
ಸೊಕೆಟ್ ವಿಧ:
ನಿಮ್ಮ ಸಿಪಿಯು ಉಪಯೋಗಿಸುವ ಸೊಕೆಟ್ ಮತ್ತು ಮದರ್‍ಬೊರ್ಡ್ ಸೊಕೆಟ್ ಒಂದಕ್ಕೊಂದು ಹೊಂದಿಕೆಯಾಗಬೇಕು.
ಮದರ್‍ಬೊರ್ಡ್ ಕೆಲಸ ಮಾಡಲು ಒಪ್ಪಬೇಕು :
ಪ್ರೊಸೆಸರ್ ಗಳಲ್ಲಿ ಹಲವಾರು ಪೀಳಿಗೆಗಳಿವೆ, ಒಂದೇ ಸೊಕೆಟ್ ಎಲ್ಲಾ ಮಾಡೆಲ್ ಗಳಿಗೆ ಉಪಯೋಗಿಸಲಾಗುವುದು ಮತ್ತು ಹಳೇ ಬೊರ್ಡ್ ಗಳಿಗೆ ಕೂಡ. ಬೊರ್ಡ್ ಗಳಿಗೆ ಬೈಯೊಸ್ ಅಪ್‍ಡೇಟ್ ಮಾಡಬೇಕು ಹೊಸ ಪ್ರೊಸೆಸರ್ ನೊಂದಿಗೆ ಕೆಲಸ ಮಾಡಲು . ಉತ್ತಮ ವಿಧಿಯೆಂದರೆ ಉತ್ಪಾದಕರ ಜಾಲತಾಣದಲ್ಲಿ ಸರಿಹೊಂದುವ ಸಂಪನ್ಮೂಲಗಳನ್ನು ಹುಡುಕುವುದು. ಪ್ರತಿ ಮದರ್‍ಬೊರ್ಡ್ ಗೆ ಸರಿಹೊಂದುವ ಪ್ರೊಸೆಸರ್ ಗಳ ಪಟ್ಟಿ ಸಿಗುವುದು.
ಚಿಪ್‍ಸೆಟ್ ಉಪಯೋಗ:
ಮದರ್‍ಬೊರ್ಡ್ ನಲ್ಲಿ ಚಿಪ್‍ಸೆಟ್ ಗಳಿದ್ದು ವಿವಿಧ ಗುಣವಿಶೇಷ ಹೊಂದಿವೆ ಬೊರ್ಡ್‍ಗೆ ಕಾರ್ಯಕ್ಷಮತೆ ನೀಡಲು. ಸಿಪಿಯು ಗೆ ಒವರ್‍ಕ್ಲೊಕಿಂಗ್ ಕ್ಷಮತೆ ಬೇಕಿದ್ದರೆ ಮದರ್‍ಬೊರ್ಡ್ ನಲ್ಲಿ ಆ ಕಾರ್ಯ ಮಾಡುವ ಚಿಪ್‍ಸೆಟ್ ಇರಬೇಕು.
ಗ್ರಾಫಿಕ್ ಕಾರ್ಡ್‍ಗಳ ಸಂಖ್ಯೆ:
ನಿಮಗೆ ಎಷ್ಟು ಗ್ರಾಫಿಕ್ ಕಾರ್ಡ್ ಗಳು ಬೇಕೆಂದು ನಿರ್ಧರಿಸಬೇಕು. ಬಹಳಷ್ಟು ಬೊರ್ಡ್‍ಗಳು ಕನಿಷ್ಟ 2 ಹೊಂದಿರುತ್ತವೆ.
ಪಿಸಿಐಇ ಲೇನ್ಸ್ ಗಳ ಸಂಖ್ಯೆ:
ಮದರ್‍ಬೊರ್ಡ್ ಬಹಳಷ್ಟು ಪಿಸಿಐಇ ಲೇನ್ಸ್ ನೀಡುತ್ತದೆ , ಇವು ಚಿಪ್‍ಸೆಟ್ ಮತ್ತು ಸಿಪಿಯು ಗಳು ಬಳಸಬಹುದುದಾದ ಎಲೆಕ್ಟ್ರಿಕಲ್ ಸಂಪರ್ಕವಾಹಿನಿಗಳಾಗಿವೆ. ಬೇರೆ ಬೇರೆ ಜಿಪಿಯು ಗಳು ಬೇರೆ ಬೇರೆ ಸಂಖ್ಯೆಯ ಲೇನ್ಸ್ ನೀಡುತ್ತವೆ, ಪ್ರತಿ ಲೇನ್ ಕೂಡ ಗರಿಷ್ಟ ವೇಗವನ್ನು ಹೊಂದಿರುತ್ತವೆ.
ಫಲಿತಾಂಶ ತೋರುವ ಪರದೆ:
ನೀವು ಒನ್‍ಬೊರ್ಡ್ ಗ್ರಾಫಿಕ್ಸ್ ಉಪಯೋಗಿಸುವವರಾಗಿದ್ದರೆ, ನಿಮಗೆ ಎಷ್ಟು ಡಿಸ್ಪ್ಲೆ ಔಟ್‍ಪುಟ್ ಬೇಕೆಂದು ತಿಳಿದಿರಬೇಕು. ಕೇಲ ಬೊರ್ಡ್ ತಯಾರಕರು ವಿಜಿಎ ಪೊರ್ಟ್ ತೆಗೆಯುತ್ತಿದ್ದಾರೆ ಹೊಸ ಬೊರ್ಡ್ ನಿಂದ. ಬಹಳಷ್ಟು ಬೊರ್ಡ್ ಕೇವಲ 2 ಅಥವಾ 3 ಡಿಸ್ಪ್ಲೆ ಸಪೊರ್ಟ್ ಮಾಡುತ್ತವೆ.
ಆಡಿಯೊ ಕನೆಕ್ಷನ್ಸ್ :
ನೀವು ಆನ್‍ಬೊರ್ಡ್ ಸೌಂಡ್ ಉಪಯೋಗಿಸುತ್ತಿದ್ದರೆ ಎಷ್ಟು ಆಡಿಯೊ ಕನೆಕ್ಷನ್ ಬೇಕೆಂದು ಯೋಚಿಸಬೇಕು. ಎಚ್‍ಡಿಎಮ್‍ಐ ಮೇಲಿನ ಆಡಿಯೊ ಎಲ್ಲೆಡೆ ಇರುವುದು, ಆದರೆ ಸ್ಟ್ಯಾಂಡ್‍ಅಲೊನ್ ಸರೌಂಡ್ ಸೌಂಡ್ ಸಿಸ್ಟಮ್ ಗಳಿಗೆ ಒಪ್ಟಿಕಲ್ ಮತ್ತು ಕೊಆಕ್ಸಿಕಲ್ ಕನೆಕ್ಷನ್ ಬೇಕಾಗುವುದು.
ಫ್ಯಾನ್ ಗಳ ಸಂಖ್ಯೆ:
ಬಹಳಷ್ಟು ಬೊರ್ಡ್‍ಗಳು ಸಿಪಿಯು ಫ್ಯಾನ್ ಕನೆಕ್ಟರ್ ಗಳನ್ನು ಹೊಂದಿರುತ್ತವೆ ಜೊತೆಗೆ ಎರಡರಿಂದ ನಾಲ್ಕು ಕೇಸ್ ಫ್ಯಾನ್ ಕನೆಕ್ಟರ್‍ಗಳನ್ನು ಹೊಂದಿರುತ್ತವೆ. ಆ ನಂತರ ಸ್ಟ್ಯಾಂಡ್ ಅಲೊನ್ ಫ್ಯಾನ್ ಕಂಟ್ರೊಲರ್ ಅಥವಾ ಸ್ಪ್ಲಿಟ್ಟರ್ ಕೇಬಲ್ ಬೇಕಾಗುವುದು.
ಕನೆಕ್ಟಿವಿಟಿ:
ಎಷ್ಟು ನೆಟ್‍ವರ್ಕ್ ಕನೆಕ್ಷನ್ಸ್, ಎಷ್ಟು ಸೀರಿಯಲ್ ಎಟಿಎ, ಸಾಟಾ ಎಕ್ಸ್‍ಪ್ರೆಸ್,ಎಮ್‍ಸಾಟಾ ಅಥವಾ ಎಮ್.2 ಡ್ರೈವ್ಸ್ ಅವಶ್ಯಕತೆಯಿದೆ ಎಂದು ತಿಳಿದಿರಬೇಕು.
ಇದೆಲ್ಲವೂ ತಿಳಿದಿದ್ದರೆ ಮದರ್‍ಬೊರ್ಡ್ ನ ಬಗೆಗಿನ ಗ್ರಾಹಕರ ಅಭಿಪ್ರಾಯವನ್ನು ಅಂತರ್ಜಾಲದಲ್ಲಿ ಹುಡುಕಬಹುದು ಕೊನೆಯದಾಗಿ ನಿರ್ಧರಿಸಲು.
ಡಿಜಿಟಲ್ ಇಂಡಿಯಾ: ಪ್ರಧಾನಿ ಮೋದಿಯಿಂದ ಪ್ರತಿಯೊಬ್ಬರಿಗೂ ಉಚಿತ ಲಾಪ್‌ಟಾಪ್ ಆಫರ್: ಹೌದಾ..?


Click it and Unblock the Notifications