Subscribe to Gizbot

ಡಿಜಿಟಲ್ ಇಂಡಿಯಾ: ಪ್ರಧಾನಿ ಮೋದಿಯಿಂದ ಪ್ರತಿಯೊಬ್ಬರಿಗೂ ಉಚಿತ ಲಾಪ್‌ಟಾಪ್ ಆಫರ್: ಹೌದಾ..?

Written By:

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ಫೇಸ್‌ಬುಕ್ ಮತ್ತು ವಾಟ್ಸ್‌ಆಪ್ ಗಳಲ್ಲಿ ವದಂತಿಗಳು ಹರಡುವುದು ಹೆಚ್ಚಾಗುತ್ತಿದೆ. ಇದೇ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಗ್ರೂಪ್‌ಗಳು, ಫೇಸ್‌ಬುಕ್ ಗ್ರೂಪ್‌ಗಳಲ್ಲಿ ಸುಳ್ಳು ಸುದ್ದಿ ಹರಡುವವರು ಹಾಗೂ ಪ್ರಚೋದನೆ ಮಾಡುವುದನ್ನು ಮಾಡಿದರೆ ಗ್ರೂಪ್ ಆಡ್ಮಿನ್‌ಗಳನ್ನು ಶಿಕ್ಷಿಸುವ ಹೊಸ ಕಾನೂನು ಜಾರಿಗೆ ತರಲಾಗಿದೆ.

ಡಿಜಿಟಲ್ ಇಂಡಿಯಾ: ಪ್ರಧಾನಿ ಮೋದಿಯಿಂದ ಪ್ರತಿಯೊಬ್ಬರಿಗೂ ಉಚಿತ ಲಾಪ್‌ಟಾಪ್ ಆಫರ್

ಓದಿರಿ: ಜಿಯೋ ಆರಂಭದ ನಂತರ ಭಾರತದಲ್ಲಿ 1 GB ಡೇಟಾ ಬೆಲೆ ಎಷ್ಟಾಗಿದೆ ಗೊತ್ತಾ..? ಕೇಳಿದ್ರೆ ಆಶ್ಚರ್ಯಪಡುತ್ತೀರಾ..!!!

ಮೊನ್ನೆ ತಾನೆ 9 ಅಂಕಿಗಳ ಸಂಖ್ಯೆಯಿಂದ ಕರೆ ಬಂದರೆ ಸ್ವೀಕರಿಸ ಬೇಡಿ. ಇದು ನಿಮ್ಮ ಸಾವಿಗೆ ಕಾರಣವಾಗಬಹುದು ಎಂಬ ವದಂತಿಯನ್ನು ಹರಡಲಾಗುತ್ತಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾ ಯೋಜನೆಯ ಅನ್ವಯ ದೇಶದ ಜನರಿಗೆಲ್ಲರಿಗೂ ಉಚಿತ ಲಾಪ್‌ಟಾಪ್ ನೀಡಲಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.

ಸದ್ಯ ಪ್ರತಿಯೊಬ್ಬರ ವಾಟ್ಸ್ಆಪ್‌ನಲ್ಲಿಯೂ ಈ ಮೇಸೆಜ್ ನೋಡಬಹುದಾಗಿದೆ. ಪ್ರಧಾನಿ ಮೋದಿ ನೀಡುವ ಲಾಪ್‌ಟಾಪ್ ಪಡೆದುಕೊಳ್ಳಲು ನೀವು ರಿಜಿಸ್ಟರ್ ಆಗಬೇಕಾಗಿದೆ, ಇದಕ್ಕಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಿರಿ ಎನ್ನುವ ಅಪ್ಲಿಕೇಷನ್ ವೊಂದು ಬರಲಿದೆ. ಇದೊಂದು ವಂಚನೆಯ ಜಾಲವಾಗಿದೆ.

ಡಿಜಿಟಲ್ ಇಂಡಿಯಾ: ಪ್ರಧಾನಿ ಮೋದಿಯಿಂದ ಪ್ರತಿಯೊಬ್ಬರಿಗೂ ಉಚಿತ ಲಾಪ್‌ಟಾಪ್ ಆಫರ್

ಓದಿರಿ: ರೆಡಿಮಿ 4ಗೆ ನೇರಾ ಸ್ಪರ್ಧೆಯನ್ನು ನೀಡಲು ಬಂದಿದೆ ಯು ಯುರೇಕಾ: ಇಲ್ಲಿದೇ ಈ ಕುರಿತ ಸಂಪೂರ್ಣ ವಿವರ

ಇಲ್ಲಿ ನಿಮ್ಮ ಮಾಹಿತಿಗಳನ್ನು ನೀಡಿದರೆ ಇಲ್ಲವೇ ಆ ಲೀಂಕ್ ಓಪನ್ ಮಾಡಿದರು ನಿಮ್ಮ ಸ್ಮಾರ್ಟ್‌ಫೋನಿಗೆ ವೈರಸ್ ದಾಳಿ ಮಾಡುವ ಸಾಧ್ಯತೆ ಇದೆ. ಇದಲ್ಲದೇ ಹ್ಯಾಕರ್ಸ್ ನೀವು ನೀಡುವ ಮಾಹಿತಿಯನ್ನು ಬಳಸಿಕೊಂಡು ನಿಮಗೆ ತೊಂದರೆ ಕೊಡಬಹುದು.

ವಾಟ್ಸ್ಆಪ್‌ಗಳಲ್ಲಿ ಬರುವ ಇಂತಹ ಮಾಹಿತಿಗಳಿಂದ ನೀವು ಎಚ್ಚರ ವಹಿಸುವುದು ತೀರಾ ಅಗತ್ಯ. ಇಂದಿನ ಡಿಜಿಟಲ್ ಯುಗದಲ್ಲಿ ಚೂರು ಎಚ್ಚರ ತಪ್ಪಿದರು ಕಷ್ಟ, ಇಂತಹ ಮೇಜೆಸ್‌ಗಳು ಬಂದರೆ ಅವುಗಳನ್ನು ನಂಬದೆ, ಇನ್ನೊಬ್ಬರಿಗೂ ಫಾರ್ವರ್ಡ್ ಮಾಡುವ ಕಾರ್ಯವನ್ನು ಮಾಡಬೇಡಿರಿ.

 

Read more about:
English summary
The new message which is now going viral on WhatsApp is about getting a free Laptop. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot