ಜಿಮೇಲ್‌ನ ಹೊಸ ಆಂಡ್ರಾಯ್ಡ್ ಅಪ್ಲಿಕೇಶನ್ ವಿಶೇಷತೆ ಗೊತ್ತೇ?

By Shwetha
|

ನಿಮ್ಮ ಇಮೇಲ್ ಅನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಜಿಮೇಲ್ ಮುಂದಾಗಿದೆ. ಆಂಡ್ರಾಯ್ಡ್ ಆವೃತ್ತಿಯ ಅಪ್ಲಿಕೇಶನ್ ಇನ್ನೇನು ವಾರಗಳಲ್ಲಿ ಹೊರಬರಲಿದ್ದು, ಇದು ಔಟ್‌ಲುಕ್‌, ಯಾಹೂ ಮತ್ತು ಇತರ ಜಿಮೇಲ್ ಅಲ್ಲದ ಖಾತೆಗಳಿಗಾಗಿ ಬೆಂಬಲವನ್ನು ಒದಗಿಸಲಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಆಂಡ್ರಾಯ್ಡ್ ಲಾಲಿಪಪ್‌ಗೆ ಇದು ಸಹಕಾರವನ್ನು ಒದಗಿಸಲಿದೆ ಎಂಬ ಮಾಹಿತಿಯನ್ನು ಕೂಡ ಒದಗಿಸಲಾಗಿದೆ. ಈ ಅಪ್ಲಿಕೇಶನ್‌ನೊಂದಿಗೆ ನೀವು ಜಿಮೇಲ್ ಅಲ್ಲದ ಖಾತೆಗಳನ್ನು ಸಿಂಕ್ ಮಾಡಬಹುದಾಗಿದೆ. ಜಿಮೇಲ್‌ನೊಳಗೆನೇ ಯಾಹೂ, ಔಟ್‌ಲುಕ್ ಸೇರಿದಂತೆ, ಬಳಕೆದಾರರು ಬಹು ಖಾತೆಗಳನ್ನು ಪ್ರವೇಶಿಸುವ ವೀಡಿಯೊವಂದನ್ನು ತೋರಿಸಲಾಗಿದೆ.

ಜಿಮೇಲ್‌ನ ಹೊಸ ಆಂಡ್ರಾಯ್ಡ್ ಅಪ್ಲಿಕೇಶನ್ ಮಾಡಲಿದೆ ಮೋಡಿ

ಜಿಮೇಲ್ ಮತ್ತು ಜಿಮೇಲ್ ಅಲ್ಲದ ಖಾತೆಗಳ ನಡುವೆ ಬದಲಾಯಿಸುವುದು ವಿಭಿನ್ನ ಗೂಗಲ್ ಖಾತೆಗಳ ನಡುವೆ ನ್ಯಾವಿಗೇಟ್ ಮಾಡುವಂತೆಯೇ ಒಂದೇ ವಿಧಾನವನ್ನು ಹೊಂದಿದೆ. ಇದು ಹೊಸ ಐಕಾನ್‌ಗಳು ಮತ್ತು ಮೆನು ಶೈಲಿಗಳೊಂದಿಗೆ ಬಂದಿದೆ. ಗೂಗಲ್‌ನ ಹೊಸ ವಿನ್ಯಾಸ ಭಾಷೆಯಾಗಿರುವ ಮೆಟೀರಿಯಲ್ ಡಿಸೈನ್ ಅನ್ನು ಆಂಡ್ರಾಯ್ಡ್ ಲಾಲಿಪಪ್ ಜೊತೆಗೆ ಗೂಗಲ್‌ನ ಐಓನಲ್ಲಿ ಈ ವರ್ಷ ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ: ಹೊಸ ವರ್ಷವನ್ನು ಸ್ವಾಗತಿಸುತ್ತಿರುವ ಹೊಸ ಫೋನ್ಸ್

ಗೂಗಲ್‌ಗಾಗಿ ಇದು ಆಸಕ್ತಿಕರ ನಡೆಯಾಗಿದ್ದು, ತನ್ನದೇ ಇಮೇಲ್ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರ ಮೇಲೆ ಹೆಚ್ಚು ಕೇಂದ್ರೀಕರಿಸಿದೆ. ಇತರ ಪ್ರಕಾರದ ಇಮೇಲ್ ಖಾತೆಗಳಿಗೆ ಜಿಮೇಲ್ ಅಪ್ಲಿಕೇಶನ್ ಅನ್ನು ತೆರೆಯುವುದು ಸಾವಿರಾರು ಆಂಡ್ರಾಯ್ಡ್ ಬಳಕೆದಾರರ ಗಮನವನ್ನು ಸೆಳೆಯಲಿದೆ.

ಜಿಮೇಲ್‌ಗೆ ಈ ಹೊಸ ಆವೃತ್ತಿಯನ್ನು ಗೂಗಲ್ ಯಾವಾಗ ತರಲಿದೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ, ಆದರೆ ಐಓಎಸ್‌ಗಿಂತಲೂ ಮೊದಲು ತನ್ನ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಿಗೆ ಮುಖ್ಯ ನವೀಕರಣಗಳನ್ನು ತರಲಿದೆ.

Best Mobiles in India

English summary
This article tells about Gmail's new Android app to support Yahoo, Outlook, report says.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X