Subscribe to Gizbot

ಶಾಪಿಂಗ್‌ಗಾಗಿ ಗೂಗಲ್ ಮಾಡಿದೆ ಹೊಸ ಪ್ರಯೋಗ

Posted By:

ಭಾನುವಾರದಂದು ರಜಾದಿನದ ಮಜವನ್ನು ಇನ್ನಷ್ಟು ಅತ್ಯುತ್ತಮವಾಗಿ ಅನುಭವಿಸುವುದಕ್ಕಾಗಿ ಗೂಗಲ್ ತನ್ನ ಸರ್ಚ್ ಎಂಜಿನ್ ಅನ್ನು ನವೀಕರಿಸಿದೆ. ಇದರಿಂದ ನಿಮ್ಮ ಶಾಪಿಂಗ್‌ಗೆ ಅನುಕೂಲಕರವಾಗಿದ್ದು ಯಾವ ಉತ್ಪನ್ನಗಳು ಎಲ್ಲಿ ಲಭ್ಯವಾಗಲಿದೆ ಎಂಬ ಮಾಹಿತಿಯನ್ನು ಗೂಗಲ್‌ನ ಇಂಟರ್ಫೇಸ್‌ನಲ್ಲಿ ನಿಮಗೆ ಕಾಣಬಹುದಾಗಿದೆ. 'ಗೂಗಲ್ ಶಾಪಿಂಗ್ ಟ್ಯಾಬ್' ಅನ್ನು ನೀವು ಇನ್ನು ಬಳಸಬೇಕಾಗಿಲ್ಲ. ನಿಮ್ಮ ದೈನಂದಿನ ಹುಡುಕಾಟದಲ್ಲಿ ವಿವರಗಳು ದೊರೆಯಲಿದೆ. ನಿಮಗೆ ಇದರಲ್ಲಿ 3ಡಿಯನ್ನು ಕೂಡ ಬಳಸಬಹುದಾಗಿದೆ.

ಇನ್ನು ಗೂಗಲ್ ಪ್ರಕಾರ, 25 ರಿಂದ 34 ವರ್ಷದ ಒಳಗಿನ ಜನರು ಶಾಪಿಂಗ್‌ಗಾಗಿ ತಮ್ಮ ಫೋನ್‌ಗಳನ್ನೇ ಬಳಸುತ್ತಾರೆ. ನೀವು ಎಲ್ಲಿದ್ದರೂ ನಿಮಗೆ ಅತ್ಯಗತ್ಯವಾಗಿರುವ ವಸ್ತುಗಳನ್ನು ಖರೀದಿಸಲು ಹೊಸ ಮೊಬೈಲ್ ಫೀಚರ್‌ಗಳು ನಿಮಗೆ ಸಹಾಯವನ್ನು ಒದಗಿಸಲಿವೆ.

ಇನ್ನಷ್ಟು ಉತ್ತಮ ರೀತಿಯಲ್ಲಿ ಮೊಬೈಲ್ ಶಾಪಿಂಗ್

ಇದನ್ನೂ ಓದಿ: ಕಂಪ್ಯೂಟರ್‌ಗೂ ಬೇಕು ವಾಟ್ಸಾಪ್ ಕರಾಮತ್ತು

ಈ ಫೀಚರ್‌ಗಳನ್ನು ಇನ್ನಷ್ಟು ವ್ಯವಸ್ಥಿತಗೊಳಿಸಲು ಅತ್ಯುತ್ತಮಗೊಳಿಸಲು ಗೂಗಲ್ ಮುಂದಾಗಿದ್ದು, ನೀವು ನಿರ್ದಿಷ್ಟ ಉತ್ಪನ್ನಕ್ಕಾಗಿ ಹುಡುಕಾಟವನ್ನು ಆರಂಭಿಸಿದಾಗ ಅಂದರೆ ಉದಾಹರಣೆಗೆ ಗೂಗಲ್‌ನ ನೆಕ್ಸಸ್ ಡಿವೈಸ್‌ಗಳಿಗಾಗಿ ಹುಡುಕುತ್ತಿದ್ದೀರಾ ಎಂದಾದಲ್ಲಿ ಅದು ನಿಮ್ಮ ಫೋನ್‌ನ ಪರದೆಯಲ್ಲಿ 360 ಡಿಗ್ರಿ ರೊಟೇಶನ್‌ನಲ್ಲಿ ದೊರೆಯುತ್ತದೆ. ಈ 3 ಡಿ ವ್ಯೂವರ್ ಡೆಸ್ಕ್‌ಟಾಪ್‌ನಲ್ಲಿ ಕೂಡ ಲಭ್ಯವಿದ್ದು, ಮೊಬೈಲ್‌ನಲ್ಲಿ ಇದು ಮೊದಲ ಬಾರಿಯಾಗಿದೆ.

English summary
This article tells about your shopping on mobile devices will yield some extra information, like where the product is available and user reviews, at the top of Google's interface.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot