ಗೂಗಲ್‌ನಿಂದ ವಿಶ್ವದ ಮೊದಲ ಟ್ಯಾಬ್ಲೆಟ್ ಕೆಫೆ
ವಿಶ್ವದ ಪ್ರಪ್ರಥಮ ಟ್ಯಾಬ್ಲೆಟ್ ಕೆಫೆ ಆರಂಭಗೊಂಡಿದೆ. ಗೂಗಲ್ ಸಹಯೋಗದೊಂದಿಗೆ ದಕ್ಷಿಣ ಆಫ್ರಿಕಾದ ಸೆನೆಗಲ್‌ನಲ್ಲಿ ಈ ಕೆಫೆ ಆರಂಭಗೊಂಡಿದ್ದು, ಜನರು ಕಂಪ್ಯೂಟರ್ ಬದಲಾಗಿ ಟ್ಯಾಬ್ಲೆಟ್‌ನಲ್ಲೇ ಕಂಪ್ಯೂಟರ್‌ನಲ್ಲಿ ಮಾಡಬಹುದಾದ ಕೆಲಸವನ್ನುಮಾಡುತ್ತಿದ್ದಾರೆ.
ಆಫ್ರಿಕಾ ದೇಶದಲ್ಲಿ ಇಂಟರ್‌ನೆಟ್ ಬಳಸುವ ಬಳಕೆದಾರರ ಸಂಖ್ಯೆ ಕಡಿಮೆ ಇರುವುದರಿಂದ ಗೂಗಲ್ ಈ ಯೋಜನೆ ಕೈ ಗೆತ್ತಿಕೊಂಡಿದೆ., ಕಂಪ್ಯೂಟರ್ ಕೆಫೆಗೆ ಎಷ್ಟು ಒಂದು ಗಂಟೆಗೆ ಎಷ್ಟು ಬೆಲೆ ನಿಗದಿ ಪಡಿಸಿದ್ದರು ಅಷ್ಟೇ
ಬೆಲೆಯಲ್ಲಿ ಜನರು ಟ್ಯಾಬ್ಲೆಟ್ ಕೆಫೆಯಲ್ಲಿ ಇಂಟರ್‌ನೆಟ್ ಬಳಸಬಹುದಾಗಿದೆ.
ಡೆಸ್ಕ್‌ಟಾಪ್ ಕಂಪ್ಯೂಟರ್ ಬಳಸಬೇಕಿದ್ದರೆ ಅದಕ್ಕೆ ಪ್ರತ್ಯೇಕವಾದ ಆಸನ ಮತ್ತು ಕ್ಯಾಬಿನ್‌ಗಳನ್ನು ಮಾಡಬೇಕಾಗುತ್ತದೆ. ಆದರೆ ಟ್ಯಾಬ್ಲೆಟ್‌ಗೆ ಈ ರೀತಿ ವ್ಯವಸ್ಥೆ ಅಗತ್ಯವಿಲ್ಲ. ಕಂಪ್ಯೂಟರ್‌ಗೆ ಹೋಲಿಸಿದ್ದಲ್ಲಿ ಟ್ಯಾಬ್ಲೆಟ್‌ಗೆ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಸಾಕು. ಹಾಗಾಗಿ ಆಫ್ರಿಕಾ ದೇಶಗಳಲ್ಲಿ ಟ್ಯಾಬ್ಲೆಟ್ ಕೆಫೆ ತಯಾರಿಸಲು ಮುಂದಾಗಿದ್ದೇವೆ ಎಂದು ಗೂಗಲ್ ಹೇಳಿದೆ.
ಇದನ್ನೂ ಓದಿ : ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ಚಿತ್ರಗಳನ್ನು ಸೆರೆ ಹಿಡಿಯುವುದು ಹೇಗೆ ?

ಗೂಗಲ್ ಟ್ಯಾಬ್ಲೆಟ್ ಕೆಫೆ

ಗೂಗಲ್ ಟ್ಯಾಬ್ಲೆಟ್ ಕೆಫೆ

ಗೂಗಲ್ ಟ್ಯಾಬ್ಲೆಟ್ ಕೆಫೆ

ಗೂಗಲ್ ಟ್ಯಾಬ್ಲೆಟ್ ಕೆಫೆ

ಗೂಗಲ್ ಟ್ಯಾಬ್ಲೆಟ್ ಕೆಫೆ



Click it and Unblock the Notifications








