ಗೂಗಲ್‌ ನೆಕ್ಸಸ್‌ 7 ಟ್ಯಾಬ್ಲೆಟ್‌ ಬಿಡುಗಡೆ

By Ashwath
|

ನೆಕ್ಸಸ್‌ 7 ಟ್ಯಾಬ್ಲೆಟ್‌ ಯಶಸ್ವಿಯಾದ ಬಳಿಕ ಈಗ ಇದೇ ಸರಣಿಯ ಎರಡನೇ ಆವೃತ್ತಿಯ ಟ್ಯಾಬ್ಲೆಟ್‌‌ನ್ನು ಗೂಗಲ್‌ ಬಿಡುಗಡೆ ಮಾಡಿದೆ. ಆದರೆ 2012 ಅಕ್ಟೋಬರ್‌ನಲ್ಲಿ ಮೊದಲ ನೆಕ್ಸಸ್‌ 7 ಟ್ಯಾಬ್ಲೆಟ್‌‌ನ್ನು ಬಿಡುಗಡೆ ಮಾಡಿತ್ತು. ಗೂಗಲ್‌ ನೆಕ್ಸಸ್‌ ಟ್ಯಾಬ್ಲೆಟ್‌ಗೆ ವಿಶ್ವದಲ್ಲಿ ಅಪಾರವಾದ ಜನಪ್ರಿಯತೆ ತಂದುಕೊಟ್ಟಿತ್ತು. ಮಾಹಿತಿಗಳ ಪ್ರಕಾರ ಇದುವರೆಗೆ ವಿಶ್ವದಲ್ಲಿ 45 ಲಕ್ಷಕ್ಕಿಂತಲೂ ಅಧಿಕ ನೆಕ್ಸಸ್‌ ಟ್ಯಾಬ್ಲೆಟ್‌ನ್ನು ಗೂಗಲ್‌ ಮಾರಾಟ ಮಾಡಿದೆ. ಇದೇ ಯಶಸ್ಸಿನಲ್ಲಿ ಗೂಗಲ್‌ ಈಗ ನೆಕ್ಸಸ್‌ 7 ಎರಡನೇ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ.

ಈ ಟ್ಯಾಬ್ಲೆಟ್‌ಗೆ ಅಮೆರಿಕದಲ್ಲಿ 229 ಡಾಲರ್‌(13,513 ರೂ) ನಿಗದಿ ಮಾಡಿದೆ. ಆದರೆ ಈ ಟ್ಯಾಬ್ಲೆಟ್‌ನ್ನು ಯಾವಾಗ ಯಾವೆಲ್ಲ ದೇಶಗಳಲ್ಲಿ ಮಾರುಕಟ್ಟೆಗೆ ಬಿಡುತ್ತದೆ ಎನ್ನುವ ಅಂಶವನ್ನು ಗೂಗಲ್‌ ಇನ್ನು ಪ್ರಕಟಿಸಿಲ್ಲ.ಗೂಗಲ್‌ ನೆಕ್ಸಸ್‌ 7 ಟ್ಯಾಬ್ಲೆಟ್‌ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ದರೂ ವಿಶ್ವದ ಬೇರೆ ರಾಷ್ಟ್ರಗಳಲ್ಲಿ ಬಿಡುಗಡೆಯಾದ ಬಳಿಕ ನಂತರ ಇದೇ ಮೇ ತಿಂಗಳಿನಲ್ಲಿ 15,999 ಬೆಲೆಯಲ್ಲಿ ಭಾರತದಲ್ಲಿ ಬಿಡುಗಡೆಯಾಗಿತ್ತು.ಹೀಗಾಗಿ ನಮ್ಮ ದೇಶದಲ್ಲಿ ಗೂಗಲ್‌ ಈ ಟ್ಯಾಬ್ಲೆಟ್‌ನ್ನು ಯಾವಾಗ ಮತ್ತು ಎಷ್ಟು ಬೆಲೆಯಲ್ಲಿ ಬಿಡುಗಡೆ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಈಗ ಹೊಸದಾಗಿ ಬಿಡುಗಡೆಯಾಗಿರುವ ಟ್ಯಾಬ್ಲೆಟ್‌ ಹಳೇ ಟ್ಯಾಬ್ಲೆಟ್‌ನಲ್ಲಿರುವ ವಿಶೇಷತೆಗಳಿಗಿಂತ ಮತ್ತಷ್ಟು ವಿಶೇಷತೆಗಳೊಂದಿಗೆ ಬಿಡುಗಡೆಯಾಗಿದೆ. ಹೀಗಾಗಿ ಇಲ್ಲಿ ಹಳೇ ಟ್ಯಾಬ್ಲೆಟ್‌ಗಿಂತ ಹೊಸ ಟ್ಯಾಬ್ಲೆಟ್‌ ಏನೆಲ್ಲ ಹೊಸ ವಿಶೇಷತೆಗಳನ್ನು ನೀಡಿದ್ದಾರೆ ಎನ್ನುವ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಗೂಗಲ್‌ ನೆಕ್ಸಸ್‌ 7 ಟ್ಯಾಬ್ಲೆಟ್‌ ಬಿಡುಗಡೆ

ಗೂಗಲ್‌ ನೆಕ್ಸಸ್‌ 7 ಟ್ಯಾಬ್ಲೆಟ್‌ ಬಿಡುಗಡೆ


ಈಗ ಹೊಸದಾಗಿ ಬಂದಿರುವ ನೆಕ್ಸಸ್‌ 7 ಟ್ಯಾಬ್ಲೆಟ್‌ ಸ್ಕ್ರೀನ್‌‌ ಪರದೆ ರೆಸುಲೂಶನ್‌ 1,920 x 1,200 ಪಿಕ್ಸೆಲ್‌ ಇದ್ದರೆ ಈ ಹಿಂದಿನ ನೆಕ್ಸಸ್‌ ಟ್ಯಾಬ್ಲೆಟ್‌ ಪರದೆ ರೆಸುಲೂಶನ್‌ 1,280 x 800 ಪಿಕ್ಸೆಲ್‌ನೊಂದಿಗೆ ಮಾರುಕಟ್ಟೆಗೆ ಬಂದಿತ್ತು. ಹೀಗಾಗಿ ನೀವು ಈ ಟ್ಯಾಬ್ಲೆಟ್‌ನಲ್ಲಿ ಗುಣಮಟ್ಟದ ವೀಡಿಯೋ,ಚಿತ್ರಗಳನ್ನು ವೀಕ್ಷಿಸಬಹುದು.

ಗೂಗಲ್‌ ನೆಕ್ಸಸ್‌ 7 ಟ್ಯಾಬ್ಲೆಟ್‌ ಬಿಡುಗಡೆ

ಗೂಗಲ್‌ ನೆಕ್ಸಸ್‌ 7 ಟ್ಯಾಬ್ಲೆಟ್‌ ಬಿಡುಗಡೆ

ಈ ಹಿಂದೆ ಬಿಡುಗಡೆಯಾಗಿದ್ದ ಟ್ಯಾಬ್ಲೆಟ್‌ ಮುಂದುಗಡೆ 1.3ಎಂಪಿ ಕ್ಯಾಮೆರಾ ಮಾತ್ರ ಹೊಂದಿತ್ತು.ಆದರೆ ಈಗ ಬಿಡುಗಡೆಯಾಗಿರುವ ಟ್ಯಾಬ್ಲೆಟ್‌ 1.2ಎಂಪಿ ಮುಂದುಗಡೆ ಕ್ಯಾಮೆರಾ ಮತ್ತು 5 ಎಂಪಿ ಹಿಂದುಗಡೆ ಕ್ಯಾಮೆರಾದೊಂದಿಗೆ ಬಂದಿದೆ.

ಗೂಗಲ್‌ ನೆಕ್ಸಸ್‌ 7 ಟ್ಯಾಬ್ಲೆಟ್‌ ಬಿಡುಗಡೆ

ಗೂಗಲ್‌ ನೆಕ್ಸಸ್‌ 7 ಟ್ಯಾಬ್ಲೆಟ್‌ ಬಿಡುಗಡೆ

ಹೊಸ ಟ್ಯಾಬ್ಲೆಟ್‌ನಲ್ಲಿ ಕನೆಕ್ಟ್‌ವಿಟಿ ವಿಶೇಷತೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ದಾರೆ. 4ಜಿ ಎಲ್‌ಟಿಇ ಸಪೋರ್ಟ್‌, ವೈರ್‌ಲೆಸ್‌ ಚಾರ್ಜಿಂಗ್‌,ಎಚ್‌ಡಿಎಂ ಸ್ಲಿಮ್‌ ಪೋರ್ಟ್‌ನೊಂದಿಗೆ ಹೊಸ ನೆಕ್ಸಾಸ್‌ ಟ್ಯಾಬ್ಲೆಟ್‌ ಬಿಡುಗಡೆಯಾಗಿದೆ.

ಗೂಗಲ್‌ ನೆಕ್ಸಸ್‌ 7 ಟ್ಯಾಬ್ಲೆಟ್‌ ಬಿಡುಗಡೆ

ಗೂಗಲ್‌ ನೆಕ್ಸಸ್‌ 7 ಟ್ಯಾಬ್ಲೆಟ್‌ ಬಿಡುಗಡೆ


ಮೊದಲನೆಯದಾಗಿ ಈ ಟ್ಯಾಬ್ಲೆಟ್‌ ಹೊಸ ಆಂಡ್ರಾಯ್ಡ್‌ 4.3 ಜೆಲ್ಲಿಬೀನ್‌ ಓಎಸ್‌ನೊಂದಿಗೆ ಬಂದಿದೆ. ಇನ್ನು 1.5GHz ಕ್ವಾಡ್‌ಕೋರ್‌ Qualcomm Snapdragon S4 ಪ್ರೊಸೆಸರ್‌, 1GB RAM ನೊಂದಿಗೆ ಬಂದಿತ್ತು. ಆದರೆ ಈ ಹಿಂದೆ ಬಂದಿದ್ದ ಟ್ಯಾಬ್ಲೆಟ್‌ ಜೆಲ್ಲಿ ಬೀನ್‌ 4.2 ಓಎಸ್‌, 1.2GHz ಕ್ವಾಡ್‌ಕೋರ್‌ NVIDIA Tegra 3 ಪ್ರೊಸೆಸರ್‌ 1GB RAMನೊಂದಿಗೆ ಬಂದಿತ್ತು.

ಗೂಗಲ್‌ ನೆಕ್ಸಸ್‌ 7 ಟ್ಯಾಬ್ಲೆಟ್‌ ಬಿಡುಗಡೆ

ಗೂಗಲ್‌ ನೆಕ್ಸಸ್‌ 7 ಟ್ಯಾಬ್ಲೆಟ್‌ ಬಿಡುಗಡೆ


ಬ್ಯಾಟರಿ ವಿಚಾರದಲ್ಲಿ ಈ ಟ್ಯಾಬ್ಲೆಟ್‌ಗಿಂತ ಮೊದಲಿನ ಟ್ಯಾಬ್ಲೆಟ್‌ ಹಚ್ಚು ಪವರ್‌ಫುಲ್‌ ಆಗಿತ್ತು. ಮೊದಲು ಬಿಡುಗಡೆಯಾಗಿದ್ದ ಟ್ಯಾಬ್ಲೆಟ್‌ Li-Ion 4325 mAh ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬಂದಿತ್ತು. ಆದರೆ ಈಗ ಬಿಡುಗಡೆಯಾಗಿರುವ ಟ್ಯಾಬ್ಲೆಟ್‌ Li-Ion3950 mAh ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬಂದಿದೆ.

ಗೂಗಲ್‌ ನೆಕ್ಸಸ್‌ 7 ಟ್ಯಾಬ್ಲೆಟ್‌ ಬಿಡುಗಡೆ

ಗೂಗಲ್‌ ನೆಕ್ಸಸ್‌ 7 ಟ್ಯಾಬ್ಲೆಟ್‌ ಬಿಡುಗಡೆ


ವಿಶೇಷತೆ:
7 ಇಂಚಿನ ಎಚ್‌ಡಿ ಐಪಿಎಸ್‌ಸ್ಕ್ರೀನ್‌(1920x1200 ಪಿಕ್ಸೆಲ್)
ಆಂಡ್ರಾಯ್ಡ್‌ 4.3 ಜೆಲ್ಲಿಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‌ ಪ್ರೊಸೆಸರ್‍
16/32GB ಆಂತರಿಕ ಮೆಮೋರಿ
2GB RAM
1.2 ಎಂಪಿ ಮುಂದುಗಡೆ ಕ್ಯಾಮೆರಾ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮೈಕ್ರೋ ಯುಎಸ್‌ಬಿ,ಬ್ಲೂಟೂತ್‌,ವೈಫೈ,ಎನ್‌ಎಫ್‌ಸಿ,ಜಿಪಿಎಸ್‌
3950 mAh ಬ್ಯಾಟರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X