ಹೆಚ್‌ಸಿಎಲ್‌ ಮಿ ಜಿ1 : ಬಜೆಟ್‌ ಟ್ಯಾಬ್ಲೆಟ್‌ ಬಿಡುಗಡೆ

Posted By: Staff
ಹೆಚ್‌ಸಿಎಲ್‌ ಮಿ ಜಿ1 : ಬಜೆಟ್‌ ಟ್ಯಾಬ್ಲೆಟ್‌ ಬಿಡುಗಡೆ
ಭಾರತದ ಅಗ್ರಮಾನ್ಯ ತಾಂತ್ರಿಕ ಸರಕುಗಳ ತಯಾರಕರಾದಂತಹ ಹೆಚ್‌ಸಿಎಲ್‌ ಇನ್ಫೋಸಿಸ್ಟಂ ಲಿಮಿಟೆಡ್‌ ತನ್ನಯ "ಮಿ" ಸರಣಿಯ ಟ್ಯಾಬ್ಲೆಟ್‌ಗಳ ಯಶಸ್ಸಿನ ಬಳಿಕ ಕೈಗೆಟಕುವ ದರದಲ್ಲಿ ಮತ್ತೊಂದು 3ಜಿ-ಸಾಮರ್ತ್ಯದ 9.7 ಇಂಚಿನ ಹೆಚ್‌ಸಿಎಲ್‌ ಮಿ ಜಿ1 ಟ್ಯಾಬ್ಲೆಟ್‌ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.

ರೂ.14,999 ದರದಲ್ಲಿ ಮಾರುಕಟ್ಟೆಗೆ ಕಾಲಿರಿಸಿರುವ ನೂತನ ಹೆಚ್‌ಸಿಎಲ್‌ ಮಿ ಜಿ1 ಟ್ಯಾಬ್ಲೆಟ್‌ ಆಂಡ್ರಾಯ್ಡ್‌ 4.0.4 ಆಪರೇಟಿಂಗ್‌ ಸಿಸ್ಟಂ ಚಾಲಿತವಾಗಿದ್ದು, 1.2 GHz ಡ್ಯುಯೆಲ್‌ ಕೋರ್‌ ಕಾರ್ಟೆಕ್ಸ್‌ ಎ9 ಸಿಪಿಯು ಇದರಿಂದಸಾಗಿ ಬಳಕೆದಾರರು ಮಲ್ಟಿಟಾಸ್ಕ್‌ ಹಾಗೂ ಒಂದು ಅಪ್ಲಿಕೇಷನ್‌ನಿಂದ ಮತ್ತೊಂದಕ್ಕೆ ಸುಲಭವಾಗಿ ನ್ಯಾವಿಗೇಟ್‌ ಮಾಡಬಹುದಾಗಿದೆ.

ಬಳಕೆದಾರರು PDF ಡಾಕ್ಯುಮೆಂಟ್‌ಗಳನ್ನೂ ಕೂಡ ನೋಡ ಬಹುದಾಗಿದೆ. ಇದಲ್ಲದೆ ಮಿ ಜಿ1ನಲ್ಲಿ 1 ವಿಮಾನದ ಟಿಕೆಟ್‌ ಖರೀದಿಸಲು ನೆರವಾಗುವ, ಹಾಡುಗಳನ್ನು ಹಾಗೂ ವಿಡಿಯೋಗಳನ್ನು ನೋಡಲು ನೆರವಾಗುವ ಪ್ರೀ ಇನ್ಸಟಾಲ್ಡ್‌ ಅಪ್ಲಿಕೇಷನ್ಸ್‌ಗಳು ಲಭ್ಯವಿದೆ. ಅಲ್ಲದೆ ಮಿ ಆಪ್‌ಸ್ಟೋರ್‌ಗೆ ಉಚಿತ ಆಕ್ಸೆಸ್‌ ಕೂಡ ನೀಡಲಾಗಿದೆ, ಈಮೂಲಕ ಬಳಕೆದಾರರು 15 ಸಾವಿರಕ್ಕೂ ಹೆಚ್ಚು ಆಪ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳ ಬಹುದಾಗಿದೆ.

ಹೆಚ್‌ಸಿಎಲ್‌ ಮಿ ಜಿ1 ವಿಶೇಷತೆ ಹೀಗಿದೆ:

  • ಆಂಡ್ರಾಯ್ಡ್‌ 4.0.4 (ICS).

  • 9.7 ಇಂಚಿನ ಮಲ್ಟಿಟಚ್‌ ಸ್ಕ್ರೀನ್.

  • 1.2 GHz ಡ್ಯುಯಲ್ ಕೋರ್ ಕಾರ್ಟೆಕ್ಸ್ ಎ 9 ಸಿಪಿಯು, ಮೇಲ್‌-400 ಕ್ವಾಡ್ ಕೋರ್ ಜಿಪಿಯು.

  • 3G USB ಡಾಟಾ ಕಾರ್ಡ್ (WCDMA ಹಾಗೂ EVDO). ಬಿಟಿ-4.0, ಮಿನಿ HDMI ಮತ್ತು ಫೈ-ವೈ-ಎನ್‌.

  • 1 ಜಿಬಿ ಡಿಡಿಆರ್ 3 RAM, 16 GB ಆನ್ಬೋರ್ಡ್ ಮೆಮೊರಿ ಮತ್ತು ಬಾಹ್ಯ ಮೆಮೊರಿ, 32 ಜಿಬಿ ವರೆಗೆ ವಿಸ್ತರಿಸಿ ಕೊಳ್ಳಬಹುದು.

  • 2.0MP ಹಾಗೂ 0.3MP ಕ್ಯಾಮೆರಾ.

  • ಬ್ಲೂಟೂತ್ 4.0 + EDR.

  • ME ಆಪ್ ಸ್ಟೋರ್.

  • 7000 mAh Li-ಪಾಲಿಮರ್ ಬ್ಯಾಟರಿ.

Read In English...

15,000 ದರದಲ್ಲಿನ ಅತ್ಯುತ್ತಮ ಟ್ಯಾಬ್ಲೆಟ್‌ಗಳು

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot