Subscribe to Gizbot

HCL ನಿಂದ ಮೊದಲ ಅಲ್ಟ್ರಾಬುಕ್‌ ಬಿಡುಗಡೆ

Posted By: Super
HCL ನಿಂದ ಮೊದಲ ಅಲ್ಟ್ರಾಬುಕ್‌ ಬಿಡುಗಡೆ
ಅಲ್ಟ್ರಾಬುಕ್‌ ತಯಾರಿಕೆಗೆ ಕೈ ಹಾಕಿರುವ ಭಾರತೀಯ ಮೂಲದ ಕಂಪ್ಯೂಟರ್‌ ತಯಾರಿಕಾ ಸಂಸ್ಥೆಯಾದ HCL ಮಾರುಕಟ್ಟೆಯಲ್ಲಿನ ಹೆಚ್ಚುತ್ತಿರು ಬೇಡಿಕೆಗಳನ್ನು ಸದುಪಯೋಗ ಪಡಿಸಿಕೊಳ್ಳುವ ಸಲುವಾಗಿ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಮೂರು ನೂತನ ಮಾದರಿಯ ಸಾದನಗಳನ್ನು ಹೊರತರಲಿದೆ.

"ಅಲ್ಟ್ರಾಬುಕ್‌ ಮಾರುಕಟ್ಟೆಗೆ ಬಂದಿರುವ ಹೊಸ ಮಾದರಿಯ ಸಾಧನವಾಗಿದ್ದರು ಗಣನೀಯ ಬೆಳವಣಿಗೆ ಕಂಡಿದೆ. ನೋಟ್‌ಬುಕ್‌ ಮಾರಾಟದಲ್ಲಿ ಶೇ.1 ರಷ್ಟು ಷೇರ್ಸ್‌ ಪಡೆದಿರುವ ಅಲ್ಟ್ರಾಬುಕ್‌ ಮುಂದಿ ಆರು ತಿಂಗಳುಗಳಲ್ಲಿ ಶೇ.10 ಕ್ಕೆ ಏರಿಯಾಗುತ್ತದೆ ಎಂದು ನಿರೀಕ್ಷಿಸಿದ್ದೇವೆ" ಎಂದು ನೂತನ ಅಲ್ಟ್ರಾಬುಕ್‌ ಬಿಡುಗಡೆ ಮಾಡಿದ ಬಳಿಕ HCL ಇನ್ಫೋಸ್ಟೀಮ್‌ನ ಉಪಾಧ್ಯಕ್ಷ ಹಾಗೂ ಕನ್ಸ್ಯೂಮರ್‌ ಕಂಪ್ಯೂಟಿಂಗ್‌ನ ಮುಖ್ಯಸ್ಥ ಪ್ರಿನ್ಸಿ ಭಟ್ನಾಗರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಂದಿನ ಮೂರು ತಿಂಗಳುಗಳ ಅವಧಿಯಲ್ಲಿ HCL ಅಲ್ಟ್ರಾಬುಕ್‌ ಶ್ರೇಣಿಯಲ್ಲಿನ ನೂತನ ಮೂರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ. ಇಂಟೆಲ್‌ ವರ್ಣಿಸಿರುವಂತೆ ಅಲ್ಟ್ರಾಬುಕ್‌ಗಳು ಲ್ಯಾಪಟಾಪ್‌ಗಳಲ್ಲಿನ ಮೇಲ್ದರ್ಜೆಯ ಮಾದರಿಗಳಾಗಿದ್ದು, ಕಾರ್ಯಕ್ಷಮತೆ ಹಾಗೂ ಬ್ಯಾಟರಿ ಬಾಳಿಕೆಗೆ ಯಾವುದೇ ಧಕ್ಕೆಯುಂಟಾಗದಂತೆ ಕಡಿಮೆ ತೂಕ ಹೋಮದಿರುವಂತೆ ವಿನ್ಯಾಸ ಗೊಳಿಸಲಾಗಿದೆ.

ಏಸರ್‌, ಆಸುಸ್‌, ಹೆಚ್‌ಪಿ, ಸ್ಯಾಮ್ಸಂಗ್‌ ಹಾಗೂ ತೊಷಿಬಾ ದಂತಹ ತಯಾರಕರುಗಳು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಅಲ್ಟ್ರಾಬುಕ್‌ ಪರಿಚಯಿಸಿದ್ದಾರೆ.

ಇದೇ ಸಂದರ್ಭ HCL ತನ್ನಯ ಮೊದಲ ಅಲ್ಟ್ರಾಬುಕ್‌ ಆದಂತಹ "ಅಲ್ಟ್ರಾಸ್ಮಾರ್ಟ್‌ ಮಿ ಶ್ರೇಣಿಯ 3074" ಅನ್ನು ಸುಮಾರು 51,990 ರೂ.ಗಳಿಗೆ ಬಿಡುಗಡೆ ಮಾಡಿದ್ದು ಮುಂದಿನ ವಾರದಲ್ಲಿ ಶೋರೂಂ ಗಳಿಗೆ ಲಗ್ಗೆ ಹಾಕಲಿದೆ ಎಂದು ಸಂಸ್ಥೆತಿಳಿಸಿದೆ.

3074 ಶ್ರೇಣಿಯ ಅಲ್ಟ್ರಾಬುಕ್‌ ಇಂಟೆಲ್‌ ಐ3 ಪ್ರೊಸೆಸರ್‌, 18mm ಮೆಟಲ್‌ ಕೇಸಿಂಗ್‌ ಹೊಂದಿದ್ದು 39 ತಿಂಗಳ ವ್ಯಾರಂಟಿಯೊಂದಿಗೆ ಬರಲಿದೆ. ಅಲ್ಲದೆ 4 GB RAM (8 GB ವರೆಗೂ ವಿಸ್ತರಿಸಬಹುದು), 32 GB ಇಂಟರ್‌ನಲ್‌ ಡಿಸ್ಕ್‌ಸ್ಟೋರೇಜ್‌, 1.3 MP VGA ಕ್ಯಾಮೆರಾ, ಬ್ಲೂಟೂತ್‌ ಹಾಗೂ ಇಂಟಿಗ್ರೇಟೆಡ್‌ Wi-fi ಹೊಂದಿದೆ.

ಅಲ್ಲದೆ ಸಂಸ್ಥೆಯು ತನ್ನಯ ಪ್ರಿಂಟ್‌ ಹಾಗೂ ಡಿಜಿಟಲ್‌ ಉತ್ಪನ್ನಗಳಿಗೆ ನೂತನ ರಾಯಭಾರಿಯಾಗಿ ಬಾಲಿವುಡ್‌ ನಟಿ ನರ್ಗೀಸ್‌ ಫರ್ಕೀ ಅವರನ್ನು ಆಯ್ಕೆ ಮಾಡಿದೆ.

85 ಸಾವಿರಕ್ಕೆ ಲೆನೊವೊ ಥಿಂಕ್‌ಪ್ಯಾಡ್‌ X1 ಅಲ್ಟ್ರಾಬುಕ್‌

Read In English

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot