Subscribe to Gizbot

ಹಳೇ ಮ್ಯಾಕ್‌ಬುಕ್‌ ನೀಡಿ ಹೊಸ ಮ್ಯಾಕ್‌ಬುಕ್‌ ಪಡೆಯಿರಿ

Written By:

ಆಪಲ್‌ ಮ್ಯಾಕ್‌ಬುಕ್‌‌ ಲ್ಯಾಪ್‌ಟಾಪ್‌ ಹೊಂದಿದ ಬಳಕೆದಾರರಿಗೆ ಗುಡ್‌ನ್ಯೂಸ್‌. ಈ ಹಿಂದೆ ಹಳೇ ಐಫೋನ್‌ ನೀಡಿ ಹೊಸ ಐಫೋನ್‌5ಸಿ ಪಡೆಯಿರಿ ಆಫರ್‌ ಪರಿಚಯಿಸಿದ್ದ ಆಪಲ್‌ ಈಗ ಹಳೇಯ ಮ್ಯಾಕ್‌ಬುಕ್‌ ಲ್ಯಾಪ್‌ಟಾಪ್‌ ನೀಡಿ ಕಡಿಮೆ ಬೆಲೆಯಲ್ಲಿ ಹೊಸ ಮ್ಯಾಕ್‌ಬುಕ್‌ ಪಡೆಯಿರಿ ಎನ್ನುವ ಹೊಸ ಆಫರ್‌ ಪ್ರಕಟಿಸಿದೆ.

ಎರಡು ವರ್ಷ‌ ಒಳಗಿನ ಮ್ಯಾಕ್‌ಬುಕ್‌ ನೀಡಿದ ಗ್ರಾಹಕರಿಗೆ 40 ಸಾವಿರ, ಎರಡು ವರ್ಷ ಹಳೇಯದಾದ ಮ್ಯಾಕ್‌ಬುಕ್‌ ನೀಡಿದವರಿಗೆ 30 ಸಾವಿರ, 3-4 ವರ್ಷದೊಳಗಿರುವ ಮ್ಯಾಕ್‌ಬುಕ್‌‌ಗೆ 20 ಸಾವಿರ ರೂಪಾಯಿ ಡಿಸ್ಕೌಂಟ್‌ ಆಫರ್‌ ಪ್ರಕಟಿಸಿದೆ.

 ಹಳೇ ಮ್ಯಾಕ್‌ಬುಕ್‌ ನೀಡಿ ಹೊಸ ಮ್ಯಾಕ್‌ಬುಕ್‌ ಪಡೆಯಿರಿ

ಈ ಆಫರ್‌ ಆಪಲ್‌ ಮ್ಯಾಕ್‌ಬುಕ್‌ ಲ್ಯಾಪ್‌ಟಾಪ್‌ಗೆ ಮಾತ್ರ ಅನ್ವಯವಾಗುತ್ತದೆ. ಆಪಲ್‌ ಮ್ಯಾಕ್‌ ಮಿನಿ,ಐಮ್ಯಾಕ್‌‌,ಮ್ಯಾಕ್‌ ಪ್ರೊಗಳಿಗೆ ಈ ಆಫರ್‌ ಅನ್ವಯವಾಗುದಿಲ್ಲ. ಆಪಲ್‌ ಅಧಿಕೃತ ವಿತರಕ ಮಳಿಗೆಗಳಾದ ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌‌,ಕ್ರೋಮಾ,ವಿಜಯ್‌ ಸೇಲ್ಸ್‌ನಲ್ಲಿ ಹಳೇಯ ಮ್ಯಾಕ್‌ಬುಕ್‌ ನೀಡಿ ಹೊಸ ‌ಮ್ಯಾಕ್‌ಬುಕ್‌ ಲ್ಯಾಪ್‌ಟಾಪ್‌ ಪಡೆಯಬಹುದು.

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಪೋಕ್‌ ಪದದ ಅರ್ಥ‌ವೇನು?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot