ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಪಿಸಿಯಲ್ಲಿ ಬಳಸುವುದು ಹೇಗೆ

Posted By:

ಆಂಡ್ರಾಯ್ಡ್ ಈಗ ಎಲ್ಲೆಡೆ ತನ್ನ ಅಧಿಪತ್ಯವನ್ನು ಸ್ಥಾಪಿಸಿಕೊಂಡಿದೆ. ನೀವು ಆಂಡ್ರಾಯ್ಡ್ ಅನ್ನು ಇದೀಗ ಫೋನ್, ಟ್ಯಾಬ್ಲೆಟ್‌ಗಳು, ಹೈಬ್ರೀಡ್ ಡಿವೈಸ್‌ಗಳಲ್ಲಿ ಬಳಸಬಹುದಾಗಿದೆ. ಇನ್ನು ವಾಚ್‌ಗಳು, ಹೋಮ್ ಅಪ್ಲಿಯನ್ಸ್‌ಗಳು ಹಾಗೂ ಮುಂದಿನ ದಿನಗಳಲ್ಲಿ ಕಾರಿನಲ್ಲಿ ಕೂಡ ಓಎಸ್ ವಿರಾಜಮಾನವಾಗಲಿದೆ. ಆದರೆ ನಿಮ್ಮ ಕಂಪ್ಯೂಟರ್‌ನಲ್ಲೂ ಚಾಲನೆಯಾಗುವ ಒಂದು ಅಪ್ಲಿಕೇಶನ್ ಇದ್ದು ಅದರ ಹೆಸರು ಬ್ಲ್ಯೂಸ್ಟಾಕ್ಸ್ ಎಂದಾಗಿದೆ.

ಇದನ್ನೂ ಓದಿ: ನಿಮ್ಮ ಸ್ಮಾರ್ಟ್‌ಫೋನ್ ಫೋಟೋಗ್ರಾಫಿ ಹೀಗಿರಲಿ

ನಿಜಕ್ಕೂ ಬ್ಲೂಸ್ಟಾಕ್ಸ್ ಅಪ್ಲಿಕೇಶನ್ ಬಳಸಲು ಅತಿ ಸರಳವಾಗಿರುವ ವೇಗವಾಗಿರುವ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಅನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಹೇಗೆ ಬಳಸುವುದು ಎಂಬುದನ್ನು ಕುರಿತ ಮಾಹಿತಿ ಇದೋ ನಿಮಗಾಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1

1

#1

ಬ್ಲ್ಯೂಸ್ಟಾಕ್ಸ್‌ಗೆ ಹೋಗಿ ಮತ್ತು ಅಲ್ಲಿ ಪ್ಲೇಯರ್ ಹೆಸರಿನ ಡೌನ್‌ಲೋಡ್ ಅಪ್ಲಿಕೇಶನ್ ಅನ್ನು ಕ್ಲಿಕ್ ಮಾಡಿ. ವಿಂಡೋಸ್‌ಗಾಗಿ ಡೌನ್‌ಲೋಡ್ ಬಟನ್ ಅನ್ನು ಎಡಕ್ಕೂ ಅಥವಾ ಮ್ಯಾಕ್‌ಗಾಗಿ ಬಲಕ್ಕೂ ಕ್ಲಿಕ್ ಮಾಡಿ.

2

2

#2

ಇದೀಗ ಸೆಟಪ್ ಫೈಲ್ ಅನ್ನು ತೆರೆಯಿರಿ ಮತ್ತು ಬ್ಲ್ಯೂಸ್ಟಾಕ್ ಅನ್ನು ಇನ್‌ಸ್ಟಾಲ್ ಮಾಡಲು ಪರದೆಯಲ್ಲಿರುವ ಸೂಚನೆಗಳನ್ನು ಅನುಸರಿಸಿ. ನಿಮ್ಮ ಕಂಪ್ಯೂಟರ್‌ನಲ್ಲಿ ಪ್ರೊಗ್ರಾಮ್ ಅನ್ನು ಇನ್‌ಸ್ಟಾಲ್ ಮಾಡಿದಂತೆಯೇ ಇದನ್ನು ಇನ್‌ಸ್ಟಾಲ್ ಮಾಡಬಹುದಾಗಿದೆ.

3

3

#3

ಇನ್‌ಸ್ಟಾಲೇಶನ್ ಪೂರ್ಣಗೊಂಡ ನಂತರ ಬ್ಲ್ಯೂಸ್ಟಾಕ್ ಅನ್ನು ಚಾಲನೆ ಮಾಡಿ. ನಿಮ್ಮ ಗ್ರಾಫಿಕ್ ಡ್ರೈವರ್ ಅಪ್‌ಡೇಟ್ ಆಗಬೇಕು ಎಂದು ಹೇಳುವ ಅಧಿಸೂಚನೆಯನ್ನು ನೀವು ಪಡೆಯುತ್ತೀರಿ. ಬ್ಲ್ಯೂಸ್ಟಾಕ್ ಅನ್ನು ಪ್ರಾರಂಭಿಸುವ ಪಾಪ್ - ಅಪ್ ಅನ್ನು ನೀವು ನೋಡಿದಾಗ "ಕ್ಲೋಸ್" ಬಟನ್ ಅನ್ನು ಕ್ಲಿಕ್ ಮಾಡಿ.

4

4

#4

ಆಂಡ್ರಾಯ್ಡ್ ಇರುವ ಮತ್ತು ಚಾಲನೆಯಾಗುತ್ತಿರುವ ವಿಂಡೋವನ್ನು ನೀವು ಇದೀಗ ಕಾಣಬಹುದು. ಮೇಲ್ಭಾಗದಲ್ಲಿ ಸರ್ಚ್ ಐಕಾನ್ ಅನ್ನು ಕ್ಲಿಕ್ ಮಾಡಿ ಇಲ್ಲಿ ಅಪ್ಲಿಕೇಶನ್ ಹೆಸರು ಟೈಪ್ ಮಾಡಿ ಗೂಗಲ್ ಪ್ಲೇಯಿಂದ ಅಪ್ಲಿಕೇಶನ್ ಅನ್ನು ಪಡೆದುಕೊಳ್ಳಲು "ಸರ್ಚ್ ಪ್ಲೇ ಫಾರ್" ಆಯ್ಕೆ ಮಾಡಿ.

5

5

#5

ಅಪ್ಲಿಕೇಶನ್‌ಗಳಿಗಾಗಿ ನೀವು ಒಮ್ಮೆ ಗೂಗಲ್ ಪ್ಲೇ ಅನ್ನು ಹುಡುಕಾಡಿದಾಗ ನಿಮ್ಮ ಗೂಗಲ್ ಖಾತೆಯನ್ನು ಬಳಸಿಕೊಂಡು ನೀವು ಲಾಗಿನ್ ಮಾಡಬೇಕಾಗುತ್ತದೆ. ಇದನ್ನು ಇನ್‌ಸ್ಟಾಲ್ ಮಾಡಿದ ನಂತರ ನಿಮಗೆ ಗೇಮ್ ಮತ್ತು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬಹುದು.

6

6

#6

ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡುವುದು ತುಂಬಾ ಸುಲಭವಾಗಿದೆ. ಮುಖ್ಯ ಪರದೆಯಲ್ಲಿ ಹುಡುಕಾಟ ಬಟನ್ ಅನ್ನು ಬಳಸಿ ಮತ್ತು ಹಂತ 4 ರಲ್ಲಿ ತಿಳಿಸಿದಂತೆ ಪ್ಲೇ ಫಾರ್ ಎಂಬುದಕ್ಕಾಗಿ ಹುಡುಕಿ. ಅಪ್ಲಿಕೇಶನ್ ಅನ್ನು ಪಡೆದುಕೊಳ್ಳಲು ನೀವು "ಇನ್‌ಸ್ಟಾಲ್" ಅನ್ನು ಕ್ಲಿಕ್ ಮಾಡುವಲ್ಲಿ ಇದು ಗೂಗಲ್ ಪ್ಲೇಯನ್ನು ತೆರೆಯುತ್ತದೆ.

7

7

#7

ಬ್ಲ್ಯೂಸ್ಟಾಕ್ಸ್ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಹೊಂದಿದೆ. ಇದರಿಂದ ನೀವು ಇನ್‌ಸ್ಟಾಲ್ ಮಾಡಿದ ಅಪ್ಲಿಕೇಶನ್‌ಗಳನ್ನು ನಿಮ್ಮ ಪಿಸಿ ಮತ್ತು ಆಂಡ್ರಾಯ್ಡ್ ಡಿವೈಸ್ ನಡುವೆ ಸಿಂಕ್ ಮಾಡಬಹುದು.

8

8

#8

ಟೆಂಪಲ್ ರನ್‌ನಂತಹ ಕೆಲವೊಂದು ಗೇಮ್‌ಗಳನ್ನು ಬೆಂಬಲಿಸುವ ಬ್ಲ್ಯೂಸ್ಟಾಕ್ಸ್ ಹಾರ್ಡ್‌ವೇರ್ ಕೀಬೋರ್ಡ್‌ಗೂ ಬೆಂಬಲವನ್ನು ಒದಗಿಸುತ್ತದೆ.

9

9

#9

ಬ್ಲ್ಯೂಸ್ಟಾಕ್ಸ್‌ಗಾಗಿ ನೀವು ರೂ 120 ಅನ್ನು ಪಾವತಿಸುವುದು ಅಗತ್ಯವಾಗಿದೆ. ಅಥವಾ ಪ್ರಾಯೊಜಿತ ಅಪ್ಲಿಕೇಶನ್‌ಗಳನ್ನು ಕೂಡ ನೀವು ದಿನವೂ ಬಳಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How to Run Android Apps on Your PC or Mac.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot