ನಿಮ್ಮ ಸ್ಮಾರ್ಟ್‌ಫೋನ್ ಫೋಟೋಗ್ರಾಫಿ ಹೀಗಿರಲಿ

By Shwetha
|

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಗುಣಮಟ್ಟದ ಕ್ಯಾಮೆರಾಗಳೊಂದಿಗೆ ಬರುತ್ತಿದ್ದು, ಗ್ರಾಹಕರ ಮನದಲ್ಲಿ ಫೋಟೋ ತೆಗೆಯುವ ಹವ್ಯಾಸವನ್ನು ಇದು ಹೆಚ್ಚಿಸಿದೆ. ಫೋನ್ ಖರೀದಿಸುವ ಬಳಕೆದಾರರು ಕ್ಯಾಮೆರಾ ಗುಣಮಟ್ಟಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಿರುವುದು ಇದೇ ಕಾರಣಕ್ಕಾಗಿದೆ.

ಇದನ್ನೂ ಓದಿ: ಟಾಪ್ 20 ಆಂಡ್ರಾಯ್ಡ್ ಫೋನ್‌ಗಳ ಮೋಹಕ ಜಾಲ

ನಿಮ್ಮ ಫೋನ್‌ನಲ್ಲಿ ಹೆಚ್ಚು ಗುಣಮಟ್ಟದ ಕ್ಯಾಮೆರಾ ಇದ್ದರೆ ಸಾಕು ನೀವು ಕ್ಯಾಮೆರಾ ಅಥವಾ ಹ್ಯಾಂಡಿಕ್ಯಾಮ್ ಅನ್ನು ನಿಮ್ಮೊಂದಿಗೆ ಕೊಂಡೊಯ್ಯಬೇಕಾದ ಅಗತ್ಯವೇ ಇರುವುದಿಲ್ಲ. ಆದರೆ ನಿಮ್ಮ ಫೋನ್‌ನಲ್ಲಿರುವ ಕ್ಯಾಮೆರಾ ತಂತ್ರಜ್ಞಾನವನ್ನು ಹೇಗೆ ಬಳಸಬೇಕು ಎಂಬುದನ್ನು ನೀವು ಅರಿಯುವುದು ಅತೀ ಅವಶ್ಯಕವಾಗಿದೆ.

ಇದನ್ನೂ ಓದಿ: ದೋಷಿಗಳ ವಾಟ್ಸಾಪ್ ಖಾತೆ ಜಾಲಾಡಬೇಕೇ?

ಹಾಗಿದ್ದರೆ ಇಂದಿನ ಲೇಖನದಲ್ಲಿ ನಿಮ್ಮ ಫೋನ್‌ನಲ್ಲಿ ಫೋಟೋ ತೆಗೆಯುವ ಸುಂದರ ಕಲೆಯನ್ನು ತಂತ್ರವನ್ನು ಅರಿತುಕೊಳ್ಳಿ. ಈ ಸಲಹೆಗಳು ನಿಮ್ಮ ಫೊಟೋ ಗುಣಮಟ್ಟವನ್ನು ಉತ್ತಮಗೊಳಿಸುವಲ್ಲಿ ಹೆಚ್ಚು ಸಹಕಾರಿಯಾಗಿದ್ದು ನಿಮ್ಮ ಫೋಟೋ ಕಲೆಯನ್ನು ನಿಪುಣಗೊಳಿಸಲಿದೆ.

#1

#1

ಸುಂದರವಾದ ಚಿತ್ರವನ್ನು ನೀವು ತೆಗೆಯಬೇಕು ಎಂಬ ಬಯಕೆ ನಿಮ್ಮದಾಗಿದ್ದಲ್ಲಿ ಟ್ರೈಪೋಡ್ ಅನ್ನು ಬಳಸಿ. ಅಲ್ಲದಿದ್ದರೆ ಎರಡೂ ಕೈಗಳಲ್ಲಿ ಫೋನ್ ಅನ್ನು ಹಿಡಿದುಕೊಂಡು ನಿಮ್ಮ ಭುಜವನ್ನು ಎದೆಯ ಸಮೀಪ ಎಳೆಯಿರಿ.

#2

#2

ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನೀವು ಉತ್ತಮ ಗುಣಮಟ್ಟದ ಫೋಟೋ ತೆಗೆಯುತ್ತೀರಿ ಎಂದಾದಲ್ಲಿ, ವಿಭಿನ್ನ ಏಂಗಲ್ ಬಳಸಿ. ನಿಜಕ್ಕೂ ನಮ್ಮಲ್ಲಿ ಹೆಚ್ಚಿನವರು ಫೋಟೋಗಳನ್ನು ತೆಗೆಯುವಾಗ ವಿಭಿನ್ನ ಆಂಗಲ್‌ಗಳನ್ನು ಬಳಸುವುದಿಲ್ಲ. ವೀಡಿಯೊವನ್ನು ದಾಖಲಿಸುತ್ತಿರುವಾಗ, ಬ್ಲರ್ ಅನ್ನು ನಿವಾರಿಸಲು ನಿಮ್ಮ ಫೋನ್ ಅನ್ನು ನಿಧಾನವಾಗಿ ಮೂವ್ ಮಾಡಿ.

#3

#3

ನಿಮ್ಮ ಸ್ಮಾರ್ಟ್‌ಫೋನ್ ಲೆನ್ಸ್ ಸ್ಪಷ್ಟವಾಗಿರುವುದು ಅತೀ ಅವಶ್ಯಕವಾಗಿದೆ. ಆದ್ದರಿಂದ ಫೋಟೋಗಳನ್ನು ತೆಗೆಯುವ ಮುನ್ನ ಲೆನ್ಸ್ ಅನ್ನು ಸ್ವಚ್ಛಗೊಳಿಸಿ.

#4

#4

ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇದೀಗ ನೂರಾರು ಅಪ್ಲಿಕೇಶನ್‌ಗಳು ಲಭ್ಯವಿದೆ. ವೀಡಿಯೊ ಅಥವಾ ಚಿತ್ರಗಳನ್ನ ಸಂಪಾದಿಸುವಾಗ ಈ ಅಪ್ಲಿಕೇಶನ್‌ಗಳು ನಿಮ್ಮ ಸಹಾಯಕ್ಕೆ ಬರಬಹುದು.

#5

#5

ನೀವು ಯಾವ ವಿಷಯದ ಫೋಟೋವನ್ನು ತೆಗೆಯುತ್ತೀರೋ ಅದರ ಸಮೀಪಕ್ಕೆ ಆದಷ್ಟು ಇರಿ. ಆದಷ್ಟು ಜೂಮ್ ಬಳಸುವುದನ್ನು ಕಡಿಮೆ ಮಾಡಿ. ಇದರಿಂದ ನೀವು ತೆಗೆಯುವ ಫೋಟೋ ಸ್ಪಷ್ಟವಾಗಿರುತ್ತದೆ.

Best Mobiles in India

English summary
This article tells about 5 Tips for Taking Better Photos With Your Smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X