ಹುವಾಯಿ 'ಮೇಟ್‌ಬುಕ್ E 'ಲಾಂಚ್!.ಅಚ್ಚರಿಯ ಫೀಚರ್ಸ್ ಮತ್ತು ಬೆಲೆ!
ಜನಪ್ರಿಯ ಹುವಾಯಿ ಸಂಸ್ಥೆಯು ವಿವಿಧ ಶ್ರೇಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಗ್ರಾಹಕರ ಗಮನ ಸೆಳೆದಿರುವ ಜೊತೆಗೆ ಮೇಟ್‌ಬುಕ್ ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ಕಂಪನಿಯು ಮತ್ತೆ ಹೊಸ ಮಾದರಿ ಮೇಟ್‌ಬುಕ್ ಒಂದನ್ನು ರಿಲೀಸ್ ಮಾಡಿದ್ದು, ಈ ಮೇಟ್‌ಬುಕ್ ಹೈ ಎಂಡ್ ಮಾದರಿಯ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಹೌದು, ಹುವಾಯಿ ಕಂಪನಿಯು ನೂತನ 'ಮೇಟ್‌ಬುಕ್ E' ಹೆಸರಿನ ಲ್ಯಾಪ್‌ಟಾಪ್ ಅನ್ನು ಚೀನಾದಲ್ಲಿಂದು ಬಿಡುಗಡೆ ಮಾಡಿದ್ದು, 2 ಇನ್ 1 ನೋಟ್‌ಬುಕ್ ಮಾದರಿಯಲ್ಲಿದೆ. 8GB RAM ಜೊತೆಗೆ 256GB ಅಥವಾ 512GB ಆಂತರಿಕ ಸ್ಟೋರೆಜ್ ಅನ್ನು ಹೊಂದಿದ್ದು, ಸ್ನ್ಯಾಪ್‌ಡ್ರಾಗನ್ 850 ಪ್ರೊಸೆಸರ್ ಅಳವಡಿಸಿದ್ದು, ಮೇಟ್‌ಬುಕ್‌ನ ಕಾರ್ಯವೈಖರಿ ಚೂರುಕಾಗಿರಲಿದೆ.

160 ಡಿಗ್ರಿ ವೀಕ್ಷಣೆ ನೋಟವನ್ನು ಹೊಂದಿರುವ ಮೇಟ್‌ಬುಕ್ E ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಒಳಗೊಂಡಿದ್ದು, ಹೆಚ್ಚಿನ ಸೆಕ್ಯುರಿಟಿ ಒದಗಿಸಲಿದೆ. 10ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ಹೊಂದಿರುವ ಜೊತೆಗೆ ಎರಡು ಡಾಲ್ಬಿ ಸ್ಪೀಕರ್ಸ್‌ಗಳನ್ನು ನೀಡಲಾಗಿದೆ. ಹಾಗಾದರೇ ಹುವಾಯಿ ಮೇಟ್‌ಬುಕ್ E ಲ್ಯಾಪ್‌ಟಾಪ್ ಇತರೆ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ರಚನೆ
ಮೇಟ್‌ಬುಕ್ ತಿಳುವಾದ ರಚನೆಯನ್ನು ಹೊಂದಿದ್ದು, ಕೀ ಬೋರ್ಡ್ ಹೊರತುಪಡಿಸಿ 8.5mm ನಷ್ಟು ತಿಳುವಾಗಿದೆ. 278.2ಎಂಎಂ ಅಗಲ ಮತ್ತು 194.22ಎಂಎಂ ನಷ್ಟು ಎತ್ತರದ ಗಾತ್ರವನ್ನು ಹೊಂದಿದೆ. ಇನ್ನು ಇದರ ತೂಕವು 698ಗ್ರಾಂ ಆಗಿದ್ದು, ಕೀಬೋರ್ಡ್ ಜೊತೆಗೆ 1.173ಕಿ.ಗ್ರಾಂ ಆಗುತ್ತದೆ.

ಡಿಸ್‌ಪ್ಲೇ
ಹುವಾಯಿ ಮೇಟ್‌ಬುಕ್ E 2160 x 1440 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದ್ದು, 12 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. 160° ಡಿಗ್ರಿ ವೀಕ್ಷಣೆಯ ನೋಟವು ಇದರಲ್ಲಿದ್ದು, 3:2 ಅನುಪಾತದ ರಚನೆಯನ್ನು ಹೊಂದಿದೆ. ಇದರ ಸ್ಕ್ರೀನ್ oleophobic ಕೋಟಿಂಗಿನ್ ರಕ್ಷಣೆ ಪಡೆದಿದೆ.

ಕ್ಯಾಮೆರಾ
ಈ ಮೇಟ್‌ಬುಕ್‌ನಲ್ಲಿ ಎರಡು ಕ್ಯಾಮೆರಾಗಳನ್ನು ನೀಡಲಾಗಿದ್ದು, ಹಿಂಬದಿಯಲ್ಲಿ 13 ಮೆಗಾಪಿಕ್ಸಲ್ ರೇರ್ ಕ್ಯಾಮೆರಾ ಮತ್ತು ವಿಡಿಯೊ ಕಾಲಿಂಗ್‌ಗಾಗಿ ಮುಂಬದಿಯಲ್ಲಿ 5 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ಒದಗಿಸಲಾಗಿದೆ. ಕ್ಯಾಮೆರಾ ಗುಣಮಟ್ಟವು ಉತ್ತಮವಾಗಿದೆ.

ಕನೆಕ್ಟಿವಿಟಿ
4×4 MIMO ಅಣಟೆನಾ ಟೆಕ್ನಾಲಜಿಯನ್ನು ಒಳಗೊಂಡಿದ್ದು, ಇನ್‌ಡೋರ್ ಅಥವಾ ಔಟ್‌ಡೋರ್ ಎಲ್ಲೆ ಇದ್ದರೂ ನೆಟವರ್ಕ್ ಕನೆಕ್ಷನ್ ಅತ್ಯುತ್ತಮವಾಗಿರಲಿದೆ. ಹುವಾಯಿ 3.0 ಶೇರ್ ಆಯ್ಕೆ ಇದ್ದು, ಎಲ್ಲ ವಿಧದ ಫೈಲ್‌ಗಳನ್ನು ಶೇರ ಮಾಡಬಹುದು. ಡ್ಯುಯಲ್ ಬಾಂಡ್ ವೈಫೈ, ಬ್ಲೂಟೂತ್ 5.0, ಕನೆಕ್ಷನ್ ಆಯ್ಕಗಳು ಇವೆ ಮತ್ತು USB type-C ಸೌಲಭ್ಯವಿದೆ.

ಬ್ಯಾಟರಿ
36.3Wh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಮೇಟ್‌ಬುಕ್‌ಗೆ ದೀರ್ಘಬಾಳಿಕೆಯ ಬೆಂಬಲ ನೀಡಲಿದೆ. ಫಾಸ್ಟ್ ಚಾರ್ಜರ್ ಸೌಲಭ್ಯಚನ್ನು ಒದಗಿಸಲಾಗಿದ್ದು, 1.5 ಗಂಟೆಯಲ್ಲಿ ಬ್ಯಾಟರಿ ಶೇ. 88% ರಷ್ಟು ಚಾರ್ಜ್ ಪಡೆದುಕೊಳ್ಳಲಿದೆ. ಮೀಡಿಯಾ ಪ್ಲೇಬ್ಯಾಕ್ ಇದ್ದರು 10ಗಂಟೆ ಚಾರ್ಜ್ ಬೆಂಬಲ ನೀಡಬಲ್ಲದು.

ಲಭ್ಯತೆ ಮತ್ತು ಬೆಲೆ
ಟೈಟಾನಿಯಂ ಆಶ್, ಚಾರ್ಮ್ ಬ್ಲೂ ಸೀ ಬಣ್ಣಗಳಲ್ಲಿ ದೊರೆಯಲಿರುವ ಹುವಾಯಿ ಮೇಟ್‌ಬುಕ್ ಚೀನಾದ ಮಾರುಕಟ್ಟೆಯಲ್ಲಿ ಲಭ್ಯವಿದೆ. 256GB ವೇರಿಯಂಟ್ ಬೆಲೆಯು CNY 3,999 (41,000ರೂ.ಗಳು) 512GB ವೇರಿಯಂಟ್ ಬೆಲೆಯು CNY 4,999 (51,000ರೂ.ಗಳು) ಆಗಿದೆ.


Click it and Unblock the Notifications