Subscribe to Gizbot

ಹುವಾವೆ ತಂದಿದೆ ಎರಡು ಮೀಡಿಯಾಪ್ಯಾಡ್‌ ಟ್ಯಾಬ್ಲೆಟ್‌

Posted By: Vijeth

ಹುವಾವೆ ತಂದಿದೆ ಎರಡು ಮೀಡಿಯಾಪ್ಯಾಡ್‌ ಟ್ಯಾಬ್ಲೆಟ್‌
ಚೀನಾ ಮೂಲದ ತಾಂತ್ರಿಕ ಸರಕುಗಳ ತಯಾರಿಕಾ ಸಂಸ್ಥೆಯಾದ ಹುವಾವೆ ತನ್ನಯ ನೂತನ ಆಂಡ್ರಾಯ್ಡ್‌ 4.0 ಐಸಿಎಸ್‌ ಚಾಲಿತ ಎರಡು ಟ್ಯಾಬ್ಲೆಟ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಮುಂಬೈನಲ್ಲಿ ನಡೆದ ಮಾಧ್ಯಮ ಸಮಾರಂಭವೊಂದರಲ್ಲಿ ಸಂಸ್ಥೆಯು ತನ್ನಯು ನೂತನ ಮೀಡಿಯಾಪ್ಯಾಡ್‌ 7 ಲೈಟ್‌ ಹಾಗೂ ಮೀಡಿಯಾ ಪ್ಯಾಡ್‌ 10 ಏಫ್‌ಡಿಹೆಚ್‌ ಮಾದರಿಯ ಟ್ಯಾಬ್ಲೆಟ್‌ಗಳನ್ನು ಭಾರತೀಯ ಮಾರುಕಟ್ಟೆಗೆ ತರುವುದಾಗಿ ಖಚಿತಪಡಿಸಿದೆ. ಅಂದಹಾಗೆ ಮೀಡಿಯಾಪ್ಯಾಡ್‌ 7 ಲೈಟ್‌ ರೂ.13,700 ದರದಲ್ಲಿ ಮಾರುಕಟ್ಟೆಗೆ ಬರಲಿದ್ದು ಮೀಡಿಯಾಪ್ಯಾಡ್‌ 10 ಏಫ್‌ಡಿಹೆಚ್‌ ಟ್ಯಾಬ್ಲೆಟ್‌ನ ದರ ಕುರಿತಾಗಿ ಸಂಸ್ಥೆಯು ಯಾವುದೇ ಮಾಹಿತಿ ನೀಡಿಲ್ಲ. ಹಾಗೂ ಡಿಸೆಂಬರ್‌ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಕಾಲಿರಿಸಲಿದೆ ಎಂದು ಸಂಸ್ಥೆ ತಿಳಿಸಿದೆ.

ನೂತನ ಟ್ಯಾಬ್ಲೆಟ್‌ನ ವಿಶೇಷತೆ ಕುರಿತು ಹೇಳುವುದಾದರೆ ಮೀಡಿಯಾಪ್ಯಾಡ್‌ 7 ಲೈಟ್‌ ಕೇವಲ 370 ಗ್ರಾಂ ತೂಕ ಹೊಂದಿದ್ದು, ಆಂಡ್ರಾಯ್ಡ್‌ 4.0 ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ ಚಾಲಿಯವಾಗಿದ್ದು, ಕಾರ್ಟೆಕ್ಸ್‌ ಎ8 1.2GHz ಪ್ರೊಸೆಸರ್‌ ನೀಡಲಾಗಿದೆ. ಇದಲ್ಲದೆ 7 ಇಂಚಿನ ದರ್ಶಕದೊಂದಿಗೆ 1024 x 600 ರೆಸೆಲ್ಯೂಷನ್‌ ಹಾಗೂ ಐಪಿಎಸ್‌ ಮಲ್ಟಿಟಚ್‌ ಸೇರಿದಂತೆ 3ಜಿ ಸೆಲ್ಯುಲಾರ್‌ ವಾಯ್ಸ್‌ ಫಂಕ್ಷನ್‌ ನೀಡಲಾಗಿದೆ.

ಇದಲ್ಲದೆ 3ಜಿ , WiFi ಸೆಲ್ಯುಲಾರ್‌, SMS ಹಾಗೂ MMS ಫೀಚರ್ಸ್‌ಗಳನ್ನು ಕೂಡಾ ನೀಡಲಾಗಿದೆ. ಹಾಗೂ 3.2 ಎಂಪಿ ಸಾಮರ್ತ್ಯದ ಹಿಂಬದಿಯ ಕ್ಯಾಮೆರಾ ಸೇರಿದಂತೆ 0.3 ಎಂಪಿ ಮುಂಬದಿಯಾ ಕ್ಯಾಮೆರಾ ಹೊಂದಿದೆ. ನೂತನ ಟ್ಯಾಬ್ಲೆಟ್‌ನಲ್ಲಿ 1GB RAM ನೀಡಲಾಗಿದ್ದು 600 MHz ಗ್ರಾಫೀಕ್‌ ನೀಡಲಾಗಿದೆ. 4ಜಿಬಿ ಆಂತರಿಕ ಮೆಮೊರಿ ಯೊಂದಿಗೆ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಕೂಡಾ ನೀಡಲಾಗಿದ್ದು 32ಜಿಬಿ ವರೆಗೆ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ. ಹಾಗೂ ಇದರಲ್ಲಿನ 4,100 mAh ಬ್ಯಾಟರಿ ಉತ್ತಮ ಬ್ಯಾಕಪ್‌ ಒದಗಿಸುತ್ತದೆ.

ಖರೀದಿಸುವುದಾದರೆ ಮೀಡಿಯಾಪ್ಯಾಡ್‌ 7 ಲೈಟ್‌ ರೀಟೇಲ್‌ ಮಳಿಗೆಗಳಾದ ಕ್ರೋಮಾ, ರಿಲೈನ್ಸ್‌ ಡಿಜಿಟಲ್‌ ಹಾಗೂ ಆನ್‌ಲೈನ್‌ ಮಳಿಗೆಯಾದ ಫ್ಲಿಪ್ ಕಾರ್ಟ್‌ನಲ್ಲಿ ಡಿಸೆಂಬರ್‌ ಅಂತ್ಯದ ವೇಳೆಗೆ ಖರೀದಿಸಿಕೊಳ್ಳ ಬಹುದಾಗಿದೆ ಎಂದು ಹುವಾವೇ ಇಂಡಿಯಾ ಸಂಸ್ಥೆಯ ನಿರ್ದೇಶಕ ಪಿ.ಸಂಜೀವ್‌ ತಿಳಿಸಿದ್ದಾರೆ.

ಮತ್ತೊಂದು ನೂತನ ಟ್ಯಾಬ್ಲೆಟ್‌ ಆದಂತಹ ಮೀಡಿಯಾಪ್ಯಾಡ್‌ 10 ಎಫ್‌ಡಿಹೆಚ್‌ ನಲ್ಲಿ 10 ಇಂಚಿಬ ಐಪಿಎಸ್‌ ಎಲ್‌ಸಿಡಿ ದರ್ಶಕ ನೀಡಲಾಗಿದ್ದು 1920 x 1200 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ. 1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌, 8 ಎಂಪಿ ಕ್ಯಾಮೆರಾ ಹಾಗೂ 1.3 ಎಂಪಿ ಮುಂಬದಿಯ ಕ್ಯಾಮೆರಾ ಹೊಂದಿದೆ, 1GB RAM, Wi-Fi 802.11 b/g/n, ಬ್ಲೂಟೂತ್‌ 3.0 ಹಾಗೂ ಆಂಡ್ರಾಯ್ಡ್‌ 4.0 ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ ಹೊಂದಿದೆ. ವರದಿಗಳ ಪ್ರಕಾರ ನೂತನ ಟ್ಯಾಬ್ಲೆಟ್‌ 16ಜಿಬಿ, 32ಜಿಬಿ ಹಾಗೂ 64ಜಿಬಿ ದರದಲ್ಲಿ ಲಭ್ಯವಾಗಲಿದ್ದು 30,000 ರೂ ದರದಲ್ಲಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.

Read In English...

ದೀಪಾವಳಿ ಆಫರ್‌ನಲ್ಲಿನ ಟಾಪ್‌ 5 ಗ್ಯಾಡ್ಜೆಟ್ಸ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot