ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಬೊಂಬಾಟ್ ಲ್ಯಾಪ್‌ಟಾಪ್: ವಿಶೇಷತೆ ಕೇಳಿದ್ರೆ ಖರೀದಿಸುವುದು ಗ್ಯಾರೆಂಟಿ..!

|

ಭಾರತೀಯ ಮಾರುಕಟ್ಟೆಯಲ್ಲಿ ಲ್ಯಾಪ್‌ಟಾಪ್ ಬೇಡಿಕೆಯೂ ಹೆಚ್ಚಾಗಿದ್ದು, ಅದರಲ್ಲಿಯೂ ಬಜೆಟ್ ಬೆಲೆಯ ಲ್ಯಾಪ್‌ಟಾಪ್ ಹೆಚ್ಚಿನ ಮಂದಿಯನ್ನು ಆಕರ್ಷಿಸುತ್ತಿದೆ. ಈ ಹಿನ್ನಲೆಯಲ್ಲಿ ಐಬಾಲ್ ಕಂಪನಿಯೂ ತನ್ನ ನೆಚ್ಚಿನ ಗ್ರಾಹಕರಿಗಾಗಿ ಹೊಸ ಮಾದರಿಯ ಲ್ಯಾಪ್‌ಟಾಪ್ ಬಿಡಗಡೆ ಮಾಡಿದ್ದು ಬಜೆಟ್ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಬೊಂಬಾಟ್ ಲ್ಯಾಪ್‌ಟಾಪ್ ನೀಡಲು ಮುಂದಾಗಿದ್ದು, ಈ ಲ್ಯಾಪ್‌ಟಾಪ್‌ನಲ್ಲಿ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ವಿಶೇಷತೆಗಳನ್ನು ಕಾಣಬಹುದಾಗಿದೆ.

ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಬೊಂಬಾಟ್ ಲ್ಯಾಪ್‌ಟಾಪ್:

ಐಬಾಲ್ ಕ್ಯಾಮ್‌ಬುಕ್ i360 ಕನ್ವರ್ಟಬಲ್ ಲ್ಯಾಪ್ ಟಾಪ್ ಮಾರುಕಟ್ಟೆಗೆ ಕಾಲಿಟ್ಟಿದ್ದು, ವಿಂಡೋಸ್ 10ನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಅಲ್ಲದೇ ಟಾಪ್ ಎಂಡ್ ಫೀಚರ್ ಗಳನ್ನು ತನ್ನದಾಗಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಐಬಾಲ್ ಕ್ಯಾಮ್‌ಬುಕ್ i360 ಕನ್ವರ್ಟಬಲ್ ಲ್ಯಾಪ್ ಟಾಪ್ ಕುರಿತ ಮಾಹಿತಿಯೂ ಈ ಮುಂದಿನಂತಿದೆ.

ವಿದ್ಯಾರ್ಥಿಗಳಿಗಾಗಿಯೇ ವಿನ್ಯಾಸ

ವಿದ್ಯಾರ್ಥಿಗಳಿಗಾಗಿಯೇ ವಿನ್ಯಾಸ

ಐಬಾಲ್ ಕ್ಯಾಮ್‌ಬುಕ್ i360 ಕನ್ವರ್ಟಬಲ್ ಲ್ಯಾಪ್ ಟಾಪ್ ಅನ್ನು ವಿದ್ಯಾರ್ಥಿಗಳಿಗಾಗಿಯೇ ವಿನ್ಯಾಸ ಮಾಡಲಾಗಿದ್ದು, ಬೆಲೆಯನ್ನು ಅದೇ ಕಾರಣಕ್ಕೆ ಕಡಿಮೆ ಇಟ್ಟಿದೆ. ಅಲ್ಲದೆ ಹೊಸ ಟ್ರೆಂಡಿ ವಿನ್ಯಾಸದಲ್ಲಿ ಕಾಣಿಸಿಕೊಂಡಿದೆ.

HD ಡಿಸ್‌ಪ್ಲೇ:

HD ಡಿಸ್‌ಪ್ಲೇ:

ಐಬಾಲ್ ಕ್ಯಾಮ್‌ಬುಕ್ i360 ಕನ್ವರ್ಟಬಲ್ ಲ್ಯಾಪ್ ಟಾಪ್ ನಲ್ಲಿ 11.6 ಇಂಚಿನ HD ಟಚ್ ಸ್ಕ್ರಿನ್ ಕಾಣಬಹುದಾಗಿದೆ. ಅಲ್ಲದೇ ಇದರಲ್ಲಿ 1.84GHz ವೇಗದ ಇಂಟೆಲ್ ಕ್ವಾಡ್ ಕೋರ್ ಪ್ರೋಸೆಸರ್ ಅನ್ನು ನೀಡಲಾಗಿದೆ.

2GB RAM:

2GB RAM:

ಇದಲ್ಲದೇ ಐಬಾಲ್ ಕ್ಯಾಮ್‌ಬುಕ್ i360 ಕನ್ವರ್ಟಬಲ್ ಲ್ಯಾಪ್ ಟಾಪ್ ನಲ್ಲಿ 2GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದ್ದು, ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಟಾಬ್ಲೆಟ್ ಮಾದರಿ:

ಟಾಬ್ಲೆಟ್ ಮಾದರಿ:

ಐಬಾಲ್ ಕ್ಯಾಮ್‌ಬುಕ್ i360 ಕನ್ವರ್ಟಬಲ್ ಲ್ಯಾಪ್ ಟಾಪ್ ಸಂಪೂರ್ಣ ತಿರುಗಿಸಬಹುದಾಗಿದ್ದು, ಟ್ಯಾಬ್ಲೆಟ್ ಮಾದರಿಯಲ್ಲಿಯೂ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

10000mAh ಬ್ಯಾಟರಿ:

10000mAh ಬ್ಯಾಟರಿ:

ಇದಲ್ಲದೇ ಐಬಾಲ್ ಕ್ಯಾಮ್‌ಬುಕ್ i360 ಕನ್ವರ್ಟಬಲ್ ಲ್ಯಾಪ್ ಟಾಪ್ ನಲ್ಲಿ 10000mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, 7 ಗಂಟೆಗಳ ಬ್ಯಾಟರಿ ಬ್ಯಾಕಪ್ ನೀಡಲಿದೆ. ಅಲ್ಲದೇ ಅನೇಕ ಹೊಸತನಗಳಿಂದ ಕೂಡಿದೆ.

ಬೆಲೆ:

ಬೆಲೆ:

ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ ಐಬಾಲ್ ಕ್ಯಾಮ್‌ಬುಕ್ i360 ಕನ್ವರ್ಟಬಲ್ ಲ್ಯಾಪ್ ಟಾಪ್ ರೂ.12,999ಕ್ಕೆ ದೊರೆಯುತ್ತಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಇಷ್ಟು ಕಡಿಮೆ ಬೆಲೆಗೆ ಯಾವುದೇ ಲ್ಯಾಪ್ ಟಾಪ್ ಗಳು ದೊರೆಯುವುದಿಲ್ಲ ಎನ್ನಲಾಗಿದೆ.

Bike-Car ಜಾತಕ ಹೇಳುವ ಆಪ್..!

ಓದಿರಿ: 5 ವರ್ಷದ ಉಚಿತ DTH ಸೇವೆಯ ಹಿಂದಿರುವ ಸತ್ಯ ಸಂಗತಿಗಳು..! ಕಟ್ಟಿದ ಹಣ ಮತ್ತೇ ವಾಪಸ್ ಬರುತ್ತಾ..?

Best Mobiles in India

English summary
iBall CompBook i360 Is a Rs. 12,999 Laptop With 360-Degree Rotating Display. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X