5 ವರ್ಷದ ಉಚಿತ DTH ಸೇವೆಯ ಹಿಂದಿರುವ ಸತ್ಯ ಸಂಗತಿಗಳು..! ಕಟ್ಟಿದ ಹಣ ಮತ್ತೇ ವಾಪಸ್ ಬರುತ್ತಾ..?

|

ದೇಶದ ಮಾರುಕಟ್ಟೆಯಲ್ಲಿ ಮುಖೇಶ್ ಅಂಬಾನಿ ಮಾಲೀಕತ್ವದ ಜಿಯೋ ಹೊಸ ಅಲೆಯನ್ನು ಎಬ್ಬಿಸಿದ ಮಾದರಿಯಲ್ಲಿಯೇ ತಮ್ಮ ಅನಿಲ್ ಅಂಬಾನಿ ಮಾಲೀಕತ್ವದ ಬಿಗ್ ಟಿವಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಉಚಿತವಾಗಿ DTH ಸೇವೆಯನ್ನು ಒಂದು ವರ್ಷಗಳ ಕಾಲ ನೀಡಲಿದ್ದು, ಉಚಿತ ಚಾನಲ್‌ಗಳನ್ನು 5 ವರ್ಷ ನೀಡಲಿದೆ. ಅಲ್ಲದೇ ಸೆಟಪ್ ಬಾಕ್ಸ್ ಅನ್ನು ಎಫೆಕ್ಟಿವ್ ಆಗಿ ಉಚಿತವಾಗಿ ನೀಡುತ್ತಿದೆ. ಈ ಹಿನ್ನಲೆಯಲ್ಲಿ ಬಿಗ್ ಟಿವಿ ಉಚಿತವಾಗಿ ನೀಡಲಿರುವ ಸೇವೆಯ ಕುರಿತು ಮಾಹಿತಿಯೂ ಈ ಮುಂದಿನಂತೆ ಇದೆ.

 5 ವರ್ಷದ ಉಚಿತ DTH ಸೇವೆಯ ಹಿಂದಿರುವ ಸತ್ಯ ಸಂಗತಿಗಳು..!

ಜಿಯೋ ಸಹ ಶೀಘ್ರವೇ DHT ಲೋಕವನ್ನು ಪ್ರವೇಶಿಸಲಿದ್ದು, ಈ ಹಿನ್ನಲೆಯಲ್ಲಿ ಜಿಯೋ ಆಗಮನಕ್ಕೂ ಮುಂಚಿತವಾಗಿಯೇ DHT ಲೋಕದಲ್ಲಿ ಹೊಸ ಅಲೆಯನ್ನು ಮೂಡಿಸಲು ಬಿಗ್ ಟಿವಿ ಮುಂದಾಗಿದ್ದು, ಇದಕ್ಕಾಗಿ ಮೊದಲ ವರ್ಷ HD ಚಾನಲ್‌ಗಳನ್ನು ಒಳಗೊಂಡತೆ 500 ಚಾನಲ್‌ಗಳನ್ನು ಉಚಿತವಾಗಿ ನೋಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಈ ಹಿನ್ನಲೆಯಲ್ಲಿ ಬಿಗ್ ನೀಡುತ್ತಿರುವ ಉಚಿತ ಸೇವೆಯು ಪ್ರಮುಖ ಅಂಶಗಳ ಮಾಹಿತಿ ಇಲ್ಲಿದೆ.

HD ರೆಕಾರ್ಡಿಂಗ್ ಸೆಟಪ್ ಬಾಕ್ಸ್:

HD ರೆಕಾರ್ಡಿಂಗ್ ಸೆಟಪ್ ಬಾಕ್ಸ್:

ಬಿಗ್ ಟಿವಿ ತನ್ನ ಬಳಕೆದಾರರಿಗೆ HD HEVC ಸೆಟಪ್ ಬಾಕ್ಸ್ ಅನ್ನು ನೀಡಲಿದ್ದು, ಇದರಲ್ಲಿ ನೀವು ಯೂಟ್ಯೂಬ್ ವೀಕ್ಷಣೆ ಮಾಡಬಹುದಾಗಿದೆ. ಅಲ್ಲದೇ ನೀವು ಟಿವಿ ಶೋಗಳನ್ನು ರೆಕಾರ್ಡ್ ಮಾಡಿಕೊಳ್ಳುವ ಅಕಾಶದೊಂದಿಗೆ ನೀವಿಲ್ಲ ಸಮಯದಲ್ಲಿ ಪ್ರಸಾರವಾಗುವ ಶೋಗಳನ್ನು ರೆಕಾರ್ಡ್ ಮಾಡುವಂತೆ ಶೆಡ್ಯೂಲ್ ಮಾಡಬಹುದಾಗಿದೆ.

ಗ್ರಾಹಕರು ರೂ.1999 ಪಾವತಿ ಮಾಡಬೇಕು:

ಗ್ರಾಹಕರು ರೂ.1999 ಪಾವತಿ ಮಾಡಬೇಕು:

ಬಿಗ್ ಟಿವಿ ಉಚಿತ ಸೇವೆಯನ್ನು ಪಡೆದುಕೊಳ್ಳುವ ಮುಂಚಿತವಾಗಿ ನೀವು ಪ್ರೀ ಬುಕ್ ಮಾಡಲು ರೂ499 ಪಾವತಿ ಮಾಡಬೇಕು. ಇದಾದ ಮೇಲೆ ನಿಮ್ಮ ಮನೆಗೆ ಬಿಗ್ ಟಿವಿ ಸೇವೆಯೂ ದೊರೆಯಲಿದ್ದು, ಈ ಸಂದರ್ಭದಲ್ಲಿ ನೀವು ರೂ. 1500 ಪಾವತಿ ಮಾಡಬೇಕಾಗಿದೆ. ಇದಲ್ಲದೇ ರೂ.250 ಇನ್ ಸ್ಟಾಲೆಷನ್ ಚಾರ್ಜ್ ನೀಡಬೇಕು.

ಒಂದು ವರ್ಷ ಉಚಿತ ಸೇವೆ;

ಒಂದು ವರ್ಷ ಉಚಿತ ಸೇವೆ;

ರೂ1999 ಪಾವತಿ ಮಾಡಿದ ನಂತರದಲ್ಲಿ ನೀವು ವರ್ಷಗಳ ಕಾಲ ಉಚಿತವಾಗಿ DTH ಸೇವೆಯನ್ನು ಪಡೆಯಬಹುದಾಗಿದೆ. ಈ ಮೊದಲ ವರ್ಷದಲ್ಲಿ HD ಚಾನಲ್ ನೊಂದಿಗೆ 500 ನಾರ್ಮಲ್ ಚಾನಲ್ ಗಳನ್ನು ಬಳಕೆದಾರರು ನೋಡಿ ಆನಂದಿಸಬಹುದಾಗಿದೆ.

ಎರಡನೇ ವರ್ಷದಿಂದ ತಿಂಗಳಿನಿಂದ ರೂ.300:

ಎರಡನೇ ವರ್ಷದಿಂದ ತಿಂಗಳಿನಿಂದ ರೂ.300:

ಇದಲ್ಲದೇ ಎರಡನೇ ವರ್ಷದಿಂದ ಪ್ರತಿ ತಿಂಗಳು ಬಳಕೆದಾರರು ರೂ.300 ಪಾವತಿ ಮಾಡಬೇಕಾಗಿದೆ. ಇದರಲ್ಲಿ ಎಲ್ಲಾ ಚಾನಲ್‌ಗಳು ದೊರೆಯಲಿದೆ. HD ಚಾನಲ್‌ಗಳು ಸಹ. ಆದರೆ ಪ್ರತಿ ತಿಂಗಳು ಎಲ್ಲಾ ಸೇವೆಯನ್ನು ಪಡೆಯಲು ರಿಚಾರ್ಜ್ ಮಾಡಿಸಲೇ ಬೇಕು.

ಹಿಂದಿರುಗಿ ಪಡೆಯಬಹುದು:

ಹಿಂದಿರುಗಿ ಪಡೆಯಬಹುದು:

ರೂ. 1999 ಪಾವತಿ ಮಾಡಿ DTH ಸೇವೆಯನ್ನ ಪಡೆದ ನಂತರದಲ್ಲಿ ಮೊದಲ ವರ್ಷ ಉಚಿತ ಸೇವೆಯೂ ದೊರೆಯಲಿದ್ದು, ಇದಾದ ನಂತರ 24 ತಿಂಗಳು ರಿಚಾರ್ಜ್ ಮಾಡಿಸಿದ ಸಂದರ್ಭದಲ್ಲಿ ಕಂಪನಿಯೂ ರೂ.1999ಗಳನ್ನು ಮರು ಪಾವತಿ ಮಾಡಲಿದೆ.

ಕ್ಯಾಷ್ ಬ್ಯಾಕ್ ರಿಚಾರ್ಜ್ ಮಾದರಿ:

ಕ್ಯಾಷ್ ಬ್ಯಾಕ್ ರಿಚಾರ್ಜ್ ಮಾದರಿ:

ಬಿಗ್ ಟಿವಿಯನ್ನು ಮೂರು ವರ್ಷಗಳ ಕಾಲ ಬಳಕೆ ಮಾಡಿಕೊಂಡ ನಂತರದಲ್ಲಿ ನೀವು ಕ್ಯಾಷ್ ಪಡೆದುಕೊಳ್ಳಬಹುದಾಗಿದೆ. ಆದರೆ ಈ ಕ್ಯಾಷ್ ಬ್ಯಾಕ್ ನಿಮಗೆ ಹಣದ ರೂಪದಲ್ಲಿ ದೊರೆಯುವುದಿಲ್ಲ. ಬದಲಾಗಿ ಇದು ರಿಚಾರ್ಜ್ ಕೂಪನ್ ಮಾದರಿಯಲ್ಲಿ ದೊರೆಯಲಿದೆ ಎನ್ನಲಾಗಿದೆ.

Bike-Car ಜಾತಕ ಹೇಳುವ ಆಪ್..!

ಓದಿರಿ: ಸ್ಮಾರ್ಟ್‌ಫೋನನ್ನು ಎಲ್ಲೆಂದರಲ್ಲಿ ಇಡಬೇಡಿ, ಇಟ್ಟರೆ ಮುಖ್ಯವಾದದ್ದೆ ಮಿಸ್ ಆಗುತ್ತೇ..!

Best Mobiles in India

Read more about:
English summary
5 Things to Know About Reliance Big TV’s Free One-Year DTH Offer. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X