Subscribe to Gizbot

12,999 ರೂ.ಗೆ 360-ಡಿಗ್ರಿ ಲ್ಯಾಪ್‌ಟಾಪ್‌! ಸ್ಮಾರ್ಟ್‌ಫೋನ್ ಅಲ್ಲ, ಸ್ಮಾರ್ಟ್‌ಲ್ಯಾಪ್!?

Written By:

ಪ್ರಖ್ಯಾತ ಲ್ಯಾಪ್‌ಟಾಪ್‌ ತಯಾರಕ ಕಂಪೆನಿ ಐ-ಬಾಲ್ ಇದೀಗ ಅತ್ಯಂತ ಕಡಿಮೆ ಬೆಲೆಯಲ್ಲಿ 360-ಡಿಗ್ರಿ ಲ್ಯಾಪ್‌ಟಾಪ್‌ ಒಂದನ್ನು ಬಿಡುಗಡೆ ಮಾಡಿದೆ.!! "ಕಾಂಪ್‌ಬುಕ್ ಐ360" ಹೆಸರಿನ ಲ್ಯಾಪ್‌ಟಾಪ್ ಇದಾಗಿದ್ದು, ಕೇವಲ 12,999 ರೂಪಾಯಿಗಳಿಗೆ ಮಾರುಕಟ್ಟೆಯಲ್ಲಿ ದೊರೆಯಲಿದೆ!!

ವಿಂಡೋಸ್ 10 ಆಪಟಿಂಗ್ ಸಿಸ್ಟಮ್ ಮತ್ತು ಸಾಫ್ಟ್ ಗೋಲ್ಡ್ ಕಲರ್ ಹೊಂದಿರುವ ಹೊಂದಿರುವ ಐ-ಬಾಲ್ ನೂತನ ಲ್ಯಾಪ್‌ಟಾಪ್‌ ಮಲ್ಟಿ ಟಾಸ್ಕಿಂಗ್ ಟೂಲ್ಸ್ ಹೊಂದಿದೆ. "ಕಾಂಪ್‌ಬುಕ್ ಐ360" ಲ್ಯಾಪ್‌ಟಾಪ್ ಅನ್ನು ಟ್ಯಾಬ್ಲಟ್, ಸ್ಟಾಂಡ್ ಮೂಡ್ ಮತ್ತು ಟೆಂಟ್ ಮೂಡ್‌ನಲ್ಲಿಯೂ ಉಪಯೋಗಿಸಬಹುದು ಎಂದು ಕಂಪೆನಿ ಹೇಳಿದೆ.

ಜಿಯೋ ಆಫರ್ 2 ಉಳಿವು-ಅಳಿವಿನ ಫೈಟ್..! ಜಿಯೋ ಹೇಳಿದ್ದೇನು ಎಂಬುದರ ಫುಲ್ ಡಿಟೇಲ್ಸ್!?

1000mah ಬ್ಯಾಟರಿ ಕೆಪಾಸಿಟಿ ಹೊಂದಿರುವ ನೂತನ ಐ-ಬಾಲ್ "ಕಾಂಪ್‌ಬುಕ್ ಐ360" ಲ್ಯಾಪ್‌ಟಾಪ್ ಸ್ಟೂಡೆಂಟ್ಸ ಮತ್ತು ಬ್ಯುಸಿನೆಸ್ ಮ್ಯಾನ್‌ಗಳಿಗೆ ಹೆಚ್ಚು ಉಪಯೋಗವಾಗಲಿದೆ ಎಂದು ಐ-ಬಾಲ್ ಕಂಪೆನಿ ಹೇಳಿಕೊಂಡಿದೆ.ಹಾಗಾದರೆ ನೂತನ ಕಾಂಪ್‌ಬುಕ್ ಐ360 ಲ್ಯಾಪ್‌ಟಾಪ್ ಹೊಂದಿರುವ ನೂತನ ಫೀಚರ್‌ಗಳೇನು? ಅವುಗಳ ವಿಶೇಷತೆ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೆಚ್‌ಡಿ ಟಚ್‌ಸ್ಕ್ರೀನ್ ಡಿಸ್‌ಪ್ಲೇ!!

ಹೆಚ್‌ಡಿ ಟಚ್‌ಸ್ಕ್ರೀನ್ ಡಿಸ್‌ಪ್ಲೇ!!

"ಕಾಂಪ್‌ಬುಕ್ ಐ360" 11.6 ಇಂಚ್ ಹೆಚ್‌ಡಿ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿದ್ದು, ಲ್ಯಾಪ್‌ಟಾಪ್ ಮತ್ತು ಟ್ಯಾಬ್‌ ರೀತಿಯಲ್ಲಿ ಬಳಸಬಹುದಾದ ಫೀಚರ್ ಹೊಂದಿದೆ. ಟ್ಯಾಬ್ ಮತ್ತು ಲ್ಯಾಪ್‌ಟಾಪ್ ಎರಡರ ಅವಶ್ಯಕತೆ ಇರುವವರಿಗೆ ಅತ್ಯುತ್ತಮ ಲ್ಯಾಪ್‌ಟಾಪ್‌ ಎನ್ನಬಹುದು.

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

1.8GHz ಇನ್‌ಟೆಲ್ ಕ್ವಾಡ್-ಕೋರ್ ಪ್ರೊಸೆಸರ್ ನೂತನ "ಕಾಂಪ್‌ಬುಕ್ ಐ360" ಲ್ಯಾಪ್‌ಟಾಪ್‌ನಲ್ಲಿದೆ. ಈ ಮೂಲಕ ಉತ್ತಮ ಕಾರ್ಯನಿರ್ವಹಣೆಗೆ ಸಹಾಯಕವಾಗಿದೆ.

RAM ಮತ್ತು ಸ್ಟೋರೇಜ್ ಎಷ್ಟು?

RAM ಮತ್ತು ಸ್ಟೋರೇಜ್ ಎಷ್ಟು?

"ಕಾಂಪ್‌ಬುಕ್ ಐ360" 2GB RAM ಮತ್ತು 32GB ಸ್ಟೋರೇಜ್ ಕ್ಯೆಪಾಸಿಟಿಯನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ ಬೆಲೆಯಲ್ಲಿಯೇ ಲ್ಯಾಪ್‌ಟಾಪ್‌ ಇದಾಗಿರುವುದರಿಂದ, ನೀಡುವ ಹಣಕ್ಕೆ ಅತ್ಯುತ್ತಮ RAM ಮತ್ತು ಸ್ಟೋರೇಜ್ ಫೀಚರ್‌ ಎನ್ನಬಹುದು.

ಬೇರೆ ಇನ್ನೇನು ಫೀಚರ್?

ಬೇರೆ ಇನ್ನೇನು ಫೀಚರ್?

"ಕಾಂಪ್‌ಬುಕ್ ಐ360" ಸ್ಮಾರ್ಟ್‌ಫೋನ್‌ಗೂ ಹೆಚ್ಚು ಮತ್ತು ಲ್ಯಾಪ್‌ಟಾಪ್‌ಗೂ ಕಡಿಮೆ ಎನ್ನುವ ಫೀಚರ್‌ ಹೊಂದಿದ್ದು, ವೀಡಿಯೋ ಚಾಟಿಂಗ್, ಡ್ಯುವೆಲ್ ಸ್ಪೀಕರ್ಸ್, ಹೆಚ್‌ಡಿಎಂಐ ಪೋರ್ಟ್ ಮತ್ತು ಯುಎಸ್‌ಬಿ ಪೋರ್ಟ್‌ ಒಳಗೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
the company has launched its Windows 10-powered 360-degree convertible laptop iball CompBook i360. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot