ಜಿಯೋ ಆಫರ್ 2 ಉಳಿವು-ಅಳಿವಿನ ಫೈಟ್..! ಜಿಯೋ ಹೇಳಿದ್ದೇನು ಎಂಬುದರ ಫುಲ್ ಡಿಟೇಲ್ಸ್!?

|

ಜಿಯೋವಿನ ವೆಲ್‌ಕಮ್ ಆಪರ್ 2ಗೆ ಅಡೆತಡೆಗಳು ಹೆಚ್ಚಾಗುತ್ತಿದ್ದು, ಇದೀಗ ವೆಲ್‌ಕಮ್ ಆಪರ್ 2 ಮೂಲಕ ಟೆಲಿಕಾಂ ನಿಯಮಗಳನ್ನು ಉಲ್ಲಂಗಿಸುತ್ತಿಲ್ಲ ಎಂದು ಸ್ಪಷ್ಟೀಕರಿಸುವಂತೆ ಭಾರತೀಯ ಟೆಲಿಕಾಂ ನಿಂಯಂತ್ರಣ ಮಂಡಳಿ "ಟ್ರಾಯ್" ಜಿಯೋಗೆ ಆದೇಶಿಸಿದೆ.

ವೆಲ್‌ಕಮ್ ಆಫರ್‌ 2 ಮೂಲಕ ಉಚಿತ ಸೇವೆಯನ್ನು ವಿಸ್ತರಿಸಿದ್ದ ಜಿಯೋ ಬಗ್ಗೆ ಅಪಸ್ವರ ಎತ್ತಿರುವ ಏರ್‌ಟೆಲ್ ಇತ್ತೀಚಿಗಷ್ಟೆ ಭಾರತೀಯ ಟೆಲಿಕಾಂ ನಿಂಯಂತ್ರಣ ಮಂಡಳಿ ಟ್ರಾಯ್‌ ಮೆಲೆ ಮೊಕದ್ದಮೆ ದಾಖಲಿಸಿತ್ತು. ಇಂತಹ ಅಸಂವಿಧಾನಕ ಕ್ರಮಗಳಿಂದ ಭಾರತೀಯ ಟೆಲಿಕಾಂ ಮಾರುಕಟ್ಟೆ ಮೇಲೆ ಬಲವಾದ ಏಟು ಬೀಳುತ್ತದೆ ಎಂದು ಟೆಲಿಕಾಂ ಮೇಲ್ಮನವಿ ನ್ಯಾಯಮಂಡಳಿ (TDSAT-Telecom Disputes Settlement and Appellate Tribunal) ಗೆ ಏರ್‌ಟೆಲ್ ದೂರು ಸಲ್ಲಿಸಿತ್ತು.

ಜಿಯೋ ಆಫರ್ 2 ಉಳಿವು-ಅಳಿವಿನ ಫೈಟ್..! ಜಿಯೋ ಹೇಳಿದ್ದೇನು ಎಂಬುದರ ಫುಲ್ ಡಿಟೇಲ್ಸ್!

ಶಾಕಿಂಗ್ ನ್ಯೂಸ್!..ಜನವರಿಯಿಂದ ಜಿಯೋ ಉಚಿತ ಇಂಟರ್‌ನೆಟ್ ಸೇವೆ ರದ್ದು!!?

ಇನ್ನು ಇದನ್ನು ಗಂಭೀರವಾಗಿ ಪರಿಗಣಿಸಿರುವ ಟ್ರಾಯ್ ವೆಲ್‌ಕಮ್ ಆಫರ್‌ 2 ಬಗ್ಗೆ ಜಿಯೋವನ್ನು ಪ್ರಶ್ನಿಸಿದ್ದು, ಕಂಪೆನಿ ಪ್ರಮೋಷನಲ್‌ಗೆ ಇದು ಏಕಸ್ವಾಮ್ಯವಾಗದಂತೆ ಮತ್ತು ಇತರ ಟೆಲಿಕಾಂಗಳಿಗೆ ಏಟು ಬೀಳದಂತೆ ಹೇಗೆ ಉಚಿತ ಆಫರ್ ನೀಡುತ್ತಿದ್ದೀರಾ?. ಈ ಬಗ್ಗೆ ನಮಗೆ ಪೂರ್ಣ ಸ್ಪಷ್ಟನೆ ನೀಡಿ ಎಂದು ಹೇಳಿದೆ.ಇನ್ನು ಇದಕ್ಕೆ ಜಿಯೋ ಸಹ ಪ್ರತಿಕ್ರಿಯೆ ನಿಡಿದ್ದು, ಆದರೆ ಯಾವುದೇ ಅಧಿಕೃತ ಮಾಹಿತಿಗಳು ಹೊರಬಂದಿಲ್ಲ. ಬಲ್ಲ ಮೂಲಗಳ ಪ್ರಕಾರ ಜಿಯೋ ತನ್ನ ನಡೆಯನ್ನು ಸಮರ್ಥನೆ ಮಾಡಿಕೊಂಡಿದೆ ಎನ್ನಲಾಗಿದೆ.ಮುಂದೆ ಓದಿ

ಜಿಯೋ ಆಫರ್ 2 ಉಳಿವು-ಅಳಿವಿನ ಫೈಟ್..! ಜಿಯೋ ಹೇಳಿದ್ದೇನು ಎಂಬುದರ ಫುಲ್ ಡಿಟೇಲ್ಸ್!

ಜಿಯೋ ವೆಲ್‌ಕಮ್ ಆಫರ್ ಮತ್ತು ಜಿಯೋ ನ್ಯೂ ಇಯರ್ ವೆಲ್‌ಕಮ್ ಆಫರ್‌ 2 ಸಂಪೂರ್ಣ ಭಿನ್ನವಾಗಿದ್ದು, ಮೊದಲ ವೆಲ್‌ಕಮ್ ಆಫರ್‌ನಲ್ಲಿ 4GB ಉಚಿತ ಇಂಟರ್‌ನೆಟ್‌ ಅನ್ನು ಉಚಿತವಾಗಿ ನೀಡಲಾಗುತ್ತಿತ್ತು. ಆದರೆ ವೆಲ್‌ಕಮ್ ಆಫರ್‌ 2 ನಲ್ಲಿ ಕೇವಲ 1GB ಇಂಟರ್‌ನೆಟ್ ಮಾತ್ರ ನಾವು ಉಚಿತವಾಗಿ ನೀಡುತ್ತಿದ್ದೆವೆ. ಇದರಿಂದ ಇತರ ಟೆಲಿಕಾಂಗಳನ್ನು ಭಕ್ಷಣೆಮಾಡಿದಂತೆ ಆಗುವುದಿಲ್ಲ ಎಂದು ಹೇಳಿದೆ.

ಜಿಯೋ ಆಫರ್ 2 ಉಳಿವು-ಅಳಿವಿನ ಫೈಟ್..! ಜಿಯೋ ಹೇಳಿದ್ದೇನು ಎಂಬುದರ ಫುಲ್ ಡಿಟೇಲ್ಸ್!

ಉಚಿತವಾಗಿ ಸೇವೆ ನೀಡಿದರೂ ಸಹ ಜಿಯೋ ಮೂಲಕ ಜನರಿಗೆ ವೇಗದ ಸೇವೆ ಸಿಕ್ಕದ ಹಾಗೆ ಆಗಿದೆ. ಇತರ ಟೆಲಿಕಾಂಗಳು ಜಿಯೋಗೆ ಸರಿಯಾಗಿ ಸಹಕರಿಸದೇ ಇರುವುದರಿಂದ ಜಿಯೋ ತನ್ನ ಉಚಿತ ಸೇವೆಯನ್ನು ವಿಸ್ತರಿಸಬೇಕಾಯಿತು ಎಂದು ಜಿಯೋ ತನ್ನ ಉತ್ತರವನ್ನು ನೀಡಿದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಜಿಯೋ ವೆಲ್‌ಕಮ್‌ 2 ಆಪರ್‌ಗೆ ಇನ್ನಿಲ್ಲದ ತೊಡಕುಗಳು ಉಂಟಾಗುತ್ತಿದ್ದು, ಜಿಯೋವಿನ ಮುಂದಿನ ನಡೆಯನ್ನು ಕಾದು ನೋಡಬೇಕಾಗಿದೆ.

Best Mobiles in India

English summary
TRAI has asked Reliance Jio to explain itself. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X