ಐಬಾಲ್‌ ಐಸ್ಲೈಡ್‌ i9702 Vs ಗ್ಯಾಲಾಕ್ಸಿ ಟ್ಯಾಬ್‌ 2

By Vijeth Kumar Dn
|

ಐಬಾಲ್‌ ಐಸ್ಲೈಡ್‌ i9702 Vs ಗ್ಯಾಲಾಕ್ಸಿ ಟ್ಯಾಬ್‌ 2
ಭಾರತೀಯ ಮಾರುಕಟ್ಟೆಯಲ್ಲಿ ಇಂದು ಅಗ್ಗದ ಬೆಲೆಯ ಆಂಡ್ರಾಯ್ಡ್‌ ಟ್ಯಾಬ್ಲೆಟ್‌ಗಳಿಗೇನು ಕಮ್ಮಿಇಲ್ಲಾ. ಪ್ರತಿ ನಿತ್ಯಾ ಒಂದಲ್ಲಾ ಒಂದು ಬಜೆಟ್‌ ಟ್ಯಾಬ್ಲೆಟ್‌ಗಳು ಮಾರುಕಟ್ಟೆಗೆ ಬರುತ್ತಲೇ ಇವೆ. ಅಂದಹಾಗೆ ಈ ಸಾಲಿಗೆ ಇತ್ತೀಚೆ ಸ್ಥಳಿಯ ತಯಾರಿಕಾ ಸಂಸ್ಥೆಯಾದ ಐಬಾಲ್‌ ತನ್ನಯ ನೂತನ ಆಂಡ್ರಾಯ್ಡ್‌ ಐಸಿಎಸ್‌ ಚಾಲಿತ ಐಸ್ಲೈಡ್‌ ಐ9702 ಟ್ಯಾಬ್ಲೆಟ್‌ ಅನ್ನು 14,999 ರೂ.ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಅಂದಹಾಗೆ ಐಬಾಲ್‌ನ ನೂತನ ಐಸ್ಲೈಡ್‌ ಟ್ಯಾಬ್ಲೆಟ್‌ ಮಾರುಕಟ್ಟೆಯಲ್ಲಿ ಈಗಾಗಲೇ ಇರುವಂತಹ ರೂ.19,300 ದರದಲ್ಲಿನ ಸ್ಯಾಮ್ಸಂಗ್‌ ಗ್ಯಾಲಾಕ್ಸಿ ನೋಟ್‌2 ಗೆ ಪ್ರಬಲ ಪೈಪೋಟಿ ನೀಡಬಲ್ಲ ಸಾಮರ್ತ್ಯ ಹೊಂದಿದೆ ಎಂದು ವಿಮರ್ಶಕರುಗಳು ಅಭಿಪ್ರಾಯ ಪಟ್ಟಿದ್ದಾರೆ. ಅಂದಹಾಗೆ ನೀವೂ ಕೂಡಾ ಉತ್ತಮ ಟ್ಯಾಬ್ಲೆಟ್‌ ಖರೀದಿಸುವ ಆಲೋಚನೆ ಯಲ್ಲಿದ್ದೀರ ಅಂದಹಾಗೆ ಇವೆರಡು ಟ್ಯಾಬ್ಲೆಟ್‌ಗಳಲ್ಲಿ ಯಾವುದಾದರು ಒಂದನ್ನು ಖರೀದಿಸುವ ಇರಾದೆ ನಿಮ್ಮದಾಗಿದ್ದಲ್ಲಿ ಅದಕ್ಕೂ ಮುನ್ನ ಐಬಾಲ್‌ ಐಸ್ಲೈಡ್‌ ಐ9702 ಹಾಗೂ ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಟ್ಯಾಬ್‌ 2 ನಡುವಿನ ಹೋಲಿಕೆಯನ್ನು ಒಮ್ಮೆ ಓದಿ ನೋಡಿ.

ಗಾತ್ರ ಹಾಗೂ ಸುತ್ತಳತೆ: ಐಸ್ಲೈಡ್‌ ಐ9702 ನ ವಿವರಗಳನ್ನು ತಯಾರಕರು ಬಹಿರಂಗ ಪಡಿಸಿಲ್ಲಾ, ಅಂದಹಾಗೆ ಗ್ಯಾಲಾಕ್ಸಿ ಟ್ಯಾಬ್‌ 2 ನಲ್ಲಿ 193.7 x 122.4 x 10.5 mm ಸುತ್ತಳತೆಯೊಂದಿಗೆ 345 ಗ್ರಾಂ ತೂಕವಿದೆ.

ದರ್ಶಕ: ಐಸ್ಲೈಡ್‌ ಐ9702 ನಲ್ಲಿ ಕೊಂಚ ದೊಡ್ಡದಾದ 9.7 ಇಂಚಿನ IPS ದರ್ಶಕ ಹೊಂದಿದ್ದು ಪಿಕ್ಸೆಲ್ಸ್‌ ಕುರಿತಾದ ಮಾಹಿತಿ ಲಭ್ಯವಿಲ್ಲ, ವಿಮರ್ಶಕರುಗಳ ಪ್ರಕಾರ ನೂತನ ಟ್ಯಾಬ್ಲೆಟ್‌ನಲ್ಲಿ 1024 x 786 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿರಬಹುದು ಎಂದು ಅಂದಾಜಿಸಿದ್ದಾರೆ. ಹಾಗೂ ಹ್ಯಾಲಾಕ್ಸಿ ಟ್ಯಾಬ್‌ 2 ನಲ್ಲಿ 7 ಇಂಚಿನ PLS ದರ್ಶಕವಿದ್ದು 1024 x 600 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ.

ಪ್ರೊಸೆಸರ್‌: ಐಸ್ಲೈಡ್‌ ಐ9702 ನಲ್ಲಿ 1.5GHz ಪ್ರೊಸೆಸರ್ ಹೊಂದಿದ್ದರೆ, ಗ್ಯಾಲಾಕ್ಸಿ ಟ್ಯಾಬ್‌ 2 ನಲ್ಲಿ ಕೇವಲ 1GHz ಡ್ಯುಯೆಲ್‌ ಕೋರ್‌ ಪ್ರೊಸೆಸರ್‌ ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಎರಡೂ ಟ್ಯಾಬ್ಲೆಟ್‌ಗಳಲ್ಲಿ ಆಂಡ್ರಾಯ್ಡ್‌ 4.0 ICS ಆಪರೇಟಿಂಗ್‌ ಸಿಸ್ಟಂ ಹೊಂದಿವೆ.

ಕ್ಯಾಮೆರಾ: ಐಸ್ಲೈಡ್‌ ಐ9702 ನಲ್ಲಿ 2MP ಹಿಂಬದಿಯ ಕ್ಯಾಮೆರಾ ಹೊಂದಿದ್ದರೆ, ಗ್ಯಾಲಾಕ್ಸಿ ಟ್ಯಾಬ್‌ 2 ನಲ್ಲಿ 3MP ಹಿಂಬದಿಯ ಕ್ಯಾಮೆರಾ ಹಾಗೂ ವಿಡಿಯೋ ಕರೆಗಾಗಿ ಮುಂಬದಿಯ 0.3MP VGA ಕ್ಯಾಮೆರಾ ಹೊಂದಿದೆ.

ಸ್ಟೋರೇಜ್‌: ಐಸ್ಲೈಡ್‌ ಐ9702ನಲ್ಲಿ 8GB ಆಂತರಿ ಸ್ಟೋರೇಜ್‌ ಹಾಗೂ 1GB RAM ಹೊಂದಿದ್ದು ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32GB ವರೆಗೆ ಮೆಮೊರಿ ವಿಸ್ತರಿಸ ಬಹುದಾಗಿದೆ. ಮತ್ತೊಂದೆಡೆ ಗ್ಯಾಲಾಕ್ಸಿ ಟ್ಯಾಬ್‌ 2 ನಲ್ಲಿ 8GB/16GB ಆಂತಿಕ ಮಾದರಿಗಳಲ್ಲಿ ಲಭ್ಯವಿದ್ದು 1GB RAM ಹಾಗೂ ಮೈಕ್ರೀ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ.

ಕನೆಕ್ಟಿವಿಟಿ: ಐಸ್ಲೈಡ್‌ ಐ9702 ನಲ್ಲಿ Wi-Fi, USB OTG ಹಾಗೂ ಹೋಸ್ಟ್‌ ಪೋರ್ಟ್‌ ಸೇರಿದಂತೆ HDMI ಫೀಚರ್ಸ್‌ಗಳಿದ್ದರೆ. ಗ್ಯಾಲಾಕ್ಸಿ ಟ್ಯಾಬ್‌ 2 ನಲ್ಲಿ Wi-Fi 802.11 b/g/n, Wi-Fi ಡೈರೆಕ್ಟ್‌, ಬ್ಲೂಟೂತ್‌ 3.0 ಹಾಗೂ ಮೈಕ್ರೋ USB 2.0 ಹೋಸ್ಟ್‌ ಹೊಂದಿದೆ.

ಬ್ಯಾಟರಿ: ಐಸ್ಲೈಡ್‌ ಐ9702 ನಲ್ಲಿ 8,000 mAh ಬ್ಯಾಟರಿ ಇದ್ದು 7 ಗಂಟೆಗಳ ಬ್ಯಾಕಪ್‌ ನೀಡಿದರೆ, ಗ್ಯಾಲಾಕ್ಸಿ ಟ್ಯಾಬ್‌ 2 ನಲ್ಲಿ 4,000 mAh Li-ion ಬ್ಯಾಟರಿ ಇದ್ದು 20 ಗಂಟೆಗಳ ಟಾಕ್‌ ಟೈಮ್‌ ಹಾಗೂ 800 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ.

ಬೆಲೆ: ಖರೀದಿಸುವುದಾದರೆ ಐಸ್ಲೈಡ್‌ ಐ9702 ರೂ.14,999 ದರದಲ್ಲಿ ಲಭ್ಯವಿದ್ದರೆ, ಗ್ಯಾಲಾಕ್ಸಿ ಟ್ಯಾಬ್‌ 2 ರೂ. 19,300 ದರದಲ್ಲಿ ಲಭ್ಯವಿದೆ.

Read In English...

<strong>ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಟಾಪ್‌ 10 ಆಂಡ್ರಾಯ್ಡ್‌ ಟ್ಯಾಬ್ಸ್‌</strong>ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಟಾಪ್‌ 10 ಆಂಡ್ರಾಯ್ಡ್‌ ಟ್ಯಾಬ್ಸ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X