ಆಕಾಶ್‌- 4 ಟ್ಯಾಬ್ಲೆಟ್‌ನಲ್ಲಿ ವೀಡಿಯೋ ಕಾಲಿಂಗ್‌ ಮಾಡಬಹುದು

By Ashwath
|

ಮುಂದೆ ಬರಲಿರುವ ಆಕಾಶ್‌-4 ಟ್ಯಾಬ್ಲೆಟ್‌ನಲ್ಲಿ ವಿದ್ಯಾರ್ಥಿ‌ಗಳು ವೀಡಿಯೋ ಕಾಲಿಂಗ್‌ ಜೊತೆಗೆ 4ಜಿ ವೇಗದಲ್ಲಿ ಇಂಟರ್‌ನೆಟ್‌ ಸರ್ಫ್‌ ಮಾಡಬಹುದು.

ಈ ಟ್ಯಾಬ್ಲೆಟ್‌ನ ವಿಶೇಷತೆಯನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಿದ್ದು, ಈ ಟ್ಯಾಬ್ಲೆಟ್‌ನಲ್ಲಿ ಇಂಟರ್‌ನೆಟ್‌ಗಾಗಿ 2ಜಿ,3ಜಿ ಅಥವಾ 4ಜಿ ಡೋಂಗಲ್‌ ಬಳಸಬಹುದು. ಅಷ್ಟೇ ಅಲ್ಲದೇ ಹೊಸದಾಗಿ ಈ ಟ್ಯಾಬ್ಲೆಟ್‌ಗೆ ಬ್ಲೂಟೂತ್ ವಿಶೇಷತೆಯನ್ನುಸೇರಿಸಿದ್ದು, ಜೊತೆಗೆ ಜೆಲ್ಲಿ ಬೀನ್‌ ಆಪರೇಟಿಂಗ್‌ ಸಿಸ್ಟಂನೊಂದಿಗೆ ಈ ಟ್ಯಾಬ್ಲೆಟ್‌ ವಿದ್ಯಾರ್ಥಿಗಳ ಕೈಸೇರಲಿದೆ.

ಇಂದು ಈ ಟ್ಯಾಬ್ಲೆಟ್‌ ವಿಶೇಷತೆಯನ್ನು ಮಾತ್ರ ಪ್ರಕಟಿಸಿದ್ದು,ಈ ಟ್ಯಾಬ್ಲೆಟ್‌ ಯಾವಾಗ ಬಿಡುಗಡೆ ಮಾಡುತ್ತೇವೆ ಮತ್ತು ಎಷ್ಟು ದರವನ್ನು ನಿಗದಿಪಡಿಸುತ್ತೇವೆ ಎನ್ನುವ ಮಾಹಿತಿಯನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಿಲ್ಲ.

ಕೇಂದ್ರ ಸರ್ಕಾರ ಯೋಜನೆ ಇದಾಗಿದ್ದು, 2011ರ ಅಕ್ಟೋಬರ್‌ನಲ್ಲಿ ಆಕಾಶ್‌ ಟ್ಯಾಬ್ಲೆಟ್‌ ಮೊದಲ ಆವೃತ್ತಿ ಬಿಡುಗಡೆಯಾಗಿತ್ತು.ನಂತರ ಈ ಯೋಜನೆಯ ವಿತರಣೆಯಲ್ಲಿ ವಿಳಂಬವಾಗಿ ಕೇಂದ್ರ ಸರ್ಕಾರ ಇದೇ ಮೇ ತಿಂಗಳಿನಲ್ಲಿ ಆಕಾಶ್‌-2 ಟ್ಯಾಬ್ಲೆಟ್‌ನ್ನು ವಿತರಿಸಿತ್ತು.

ಆಕಾಶ್‌- 4 ಟ್ಯಾಬ್ಲೆಟ್‌ನಲ್ಲಿ ವೀಡಿಯೋ ಕಾಲಿಂಗ್‌ ಮಾಡಬಹುದು

ಆಕಾಶ್‌- 4 ಟ್ಯಾಬ್ಲೆಟ್‌
ವಿಶೇಷತೆ:

  • 7 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌(800 x 480 ಪಿಕ್ಸೆಲ್‌)
  • ಆಂಡ್ರಾಯ್ಡ್‌ 4.2.1 ಜೆಲ್ಲಿ ಬೀನ್‌ ಓಎಸ್‌
  • 1GHz ARM ಕ್ವಾರ್ಟೆಕ್ಸ್‌ ಎ8 ಪ್ರೊಸೆಸರ್
  • 1GB RAM
  • 4GB ಆಂತರಿಕ ಮೆಮೋರಿ
  • 32GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಮುಂದುಗಡೆ
  • ವಿಜಿಎ ಕ್ಯಾಮೆರಾ
  • ವೈಫೈ ಕನೆಕ್ಟ್‌ವಿಟಿ,ಬ್ಲೂಟೂತ್‌,ಯುಎಸ್‌ಬಿ
  • 3,000 mAh ಲಿಯಾನ್‌ ಬ್ಯಾಟರಿ
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X