ವಿದ್ಯಾರ್ಥಿಗಳಿಗೆ ವಿತರಿಸಲು ಆಕಾಶ್-2 ಟ್ಯಾಬ್ಲೆಟ್ ರೆಡಿ
ಕೇಂದ್ರ ಸರ್ಕಾರದ ಭಾರೀ ನಿರೀಕ್ಷೆಯ ಆಕಾಶ್ -2 ಟ್ಯಾಬ್ಲೆಟ್ ಈ ತಿಂಗಳಲ್ಲೇ ವಿದ್ಯಾರ್ಥಿಗಳ ಕೈಗೆ ತಲುಪಲಿದೆ. ಡೇಟಾವಿಂಡ್ ಕಂಪೆನಿ ಒಂದು ಲಕ್ಷ ಆಕಾಶ್ ಟ್ಯಾಬ್ಲೆಟ್‌ನ್ನು ತಯಾರಿಸಿದೆ.ವಿಶ್ವದ ಅತೀ ಕಡಿಮೆ ಬೆಲೆಯ ಟ್ಯಾಬ್ಲೆಟ್ ಎಂದೇ ಹೆಸರುವಾಸಿಯಾಗಿರುವ ಆಕಾಶ್ -2 ಟ್ಯಾಬ್ಲೆಟ್‌ಗೆ 2,263 ದರವನ್ನು ಕಂಪೆನಿ ನಿಗದಿ ಮಾಡಿದೆ.
ಮಾರುಕಟ್ಟೆಯಲ್ಲಿ ಈ ಟ್ಯಾಬ್ಲೆಟ್ ಬೆಲೆ ಅಂದಾಜು ಸುಮಾರು ಐದು ಸಾವಿರ ರೂಪಾಯಿ ಇದೆ. ಕೇಂದ್ರ ಸರ್ಕಾರ ಸಬ್ಸಿಡಿ ನೀತಿಯಿಂದಾಗಿ ಒಂದು ವರ್ಷದ ವಾರಂಟಿಯೊಂದಿಗೆ ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಯಲ್ಲಿ ಈ ಟ್ಯಾಬ್ಲೆಟ್ ನೀಡಲಾಗುತ್ತಿದೆ ಎಂದು ಕಂಪೆನಿಯ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದ ಸಚಿವ ಕಪಿಲ್ ಸಿಬಲ್ ಕಳೆದ ವರ್ಷವೇ ಆಕಾಶ್ -2 ಟ್ಯಾಬ್ಲೆಟ್‌ನ್ನು ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದ್ದರು. ಆದರೆ ಆಗ ತಯಾರಾಗದೇ ಒಂದು ವರ್ಷದ ಬಳಿಕ ಆಕಾಶ್-2 ಟ್ಯಾಬ್ಲೆಟ್ ತಯಾರಾಗಿದ್ದು ವಿದ್ಯಾರ್ಥಿಗಳಿಗೆ ವಿತರಿಸಲು ಸಿದ್ದಗೊಂಡಿದೆ.

ಆಕಾಶ್-2 ಟ್ಯಾಬ್ಲೆಟ್
ವಿಶೇಷತೆ:
7 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(800 x 480 ಪಿಕ್ಸೆಲ್)
ಆಂಡ್ರಾಯ್ಡ್ 4.0.3 ಐಸಿಎಸ್ ಓಎಸ್
1GHz ARM ಕ್ವಾರ್ಟೆಕ್ಸ್ ಎ8 ಪ್ರೋಸೆಸರ್
512MB RAM
4GB ಆಂತರಿಕ ಮೆಮೋರಿ
32GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಮುಂದುಗಡೆ ವಿಜಿಎ ಕ್ಯಾಮೆರಾ
ವೈಫೈ ಕನೆಕ್ಟ್‌ವಿಟಿ
3,000 mAh ಲಿಯಾನ್ ಬ್ಯಾಟರಿ
ಇದನ್ನು ಓದಿ : ಭವಿಷ್ಯದ ಟ್ಯಾಬ್ಲೆಟ್‌ಗಳು ಹೇಗಿರುತ್ತವೆ ಗೊತ್ತಾ?


Click it and Unblock the Notifications