ಇಂಟರ್ನೆಟ್ ಸಂಪರ್ಕದಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?
oi
-Varun
By Varun

ನಿಮ್ಮ ಮನೆಯಲ್ಲಿ ಇಂಟರ್ನೆಟ್ ಸಂಪರ್ಕವಿದೆಯೇ?. ನೀವು ಟೈಪ್ ಮಾಡಿದ ವೆಬ್ಸೈಟ್ ಲೋಡ್ ಆಗಲು ಜಾಸ್ತಿ ಸಮಯ ತೆಗೆದುಕೊಳ್ಳುತ್ತದೆಯೇ? ಆಶ್ಚರ್ಯವೇನೂ ಇಲ್ಲ. ಯಾಕೆಂದರೆ ಅಂತರ್ಜಾಲದ ಸಂಪರ್ಕವಿರುವ, ವೇಗದ ಇಂಟರ್ನೆಟ್ ಸೇವೆ ಒದಗಿಸುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 114 ನೆ ಸ್ಥಾನ. ಇದಷ್ಟೇ ಅಲ್ಲ, ವಿಶ್ವದಲ್ಲಿ ವೇಗವಾದ ಇಂಟರ್ನೆಟ್ ಸೇವೆ ಒದಗಿಸುವ ಟಾಪ್ 100 ನಗರಗಳ ಪಟ್ಟಿಯಲ್ಲಿ ಭಾರತದ ಯಾವ ನಗರವೂ ಇಲ್ಲ! ಈ ವಿಷಯವನ್ನು ಮೊನ್ನೆ ಬಹಿರಂಗಪಡಿಸಿದೆ, ಜಗತ್ತಿನ ಹಲವಾರು ವೆಬ್ಸೈಟ್ ಗಳ ಮಾಹಿತಿಯನ್ನು ನಿಭಾಯಿಸುವ "ಅಕಮೈ" ಎಂಬ ಸಂಸ್ಥೆ.
ಅಕಮೈ ಸಂಸ್ಥೆಯ ಪ್ರಕಾರ ಭಾರತದಲ್ಲಿ 2011 ರಲ್ಲಿಯೇ 3G ಸೇವೆ ಶುರುವಾದರೂ ಸರಾಸರಿ ಇಂಟರ್ನೆಟ್ ವೇಗ ಕೇವಲ 0.9 mbps ಆಗಿದ್ದು, ವೇಗದ ಇಂಟರ್ನೆಟ್ ಕೊಡುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ದಕ್ಷಿಣ ಕೊರಿಯಾ (17mbps ವೇಗ) ಕ್ಕೆ ಹೋಲಿಸಿದರೆ ತುಂಬಾ ಕಮ್ಮಿಯಾಗಿದೆ. ಕೇವಲ ಲಿಬಿಯಾ, ನೈಜೀರಿಯಾ, ನೇಪಾಳ ಹಾಗು ಇರಾನ್ ದೇಶಗಳು ಮಾತ್ರ ಈ ಪಟ್ಟಿಯಲ್ಲಿ ನಮಗಿಂತಾ ಕೆಳಗಿವೆ ಎಂದೂ ತಿಳಿಸಿದೆ.
ಸದ್ಯಕ್ಕೆ ಬ್ರಾಡ್ ಬ್ಯಾಂಡ್ ಹೆಸರಿನಲ್ಲಿ ಕೇವಲ 512 kbps ವೇಗವನ್ನು ಭಾರತದ ISP ಗಳು ಕೊಡುತ್ತಿದ್ದು, ಯೂಟ್ಯೂಬ್ ನಂತಹಾ ವೀಡಿಯೋ ವೆಬ್ಸೈಟ್ ಗಳನ್ನು ನೋಡಲು ಈ ವೇಗ ಯಾವುದಕ್ಕೂ ಸಾಲಲ್ಲ ಎಂಬುದು ನೆಟಿಜನ್ ಗಳ ಕಂಪ್ಲೈಂಟ್ ಆಗಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications