Home
ಕಂಪ್ಯೂಟರ್‌‌

Lenovo: ಅಗ್ಗದ ಟ್ಯಾಬ್ ಬಿಡುಗಡೆ; ಕ್ಯಾಮೆರಾ, ಬ್ಯಾಟರಿ, ಡಿಸ್ಪ್ಲೇ.. ಎಲ್ಲವೂ ಸೂಪರ್.. ಬೆಲೆ ಎಷ್ಟು ಗೊತ್ತಾ?

ಲೆನೊವೊ ಸದ್ದಿಲ್ಲದೇ ಹೊಸ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಇದು ಅಗ್ಗದ ಬೆಲೆಯನ್ನು ಹೊಂದಿದೆ. ಹೌದು, ಕಂಪನಿಯು ತನ್ನ ಹೊಸ ಟ್ಯಾಬ್ಲೆಟ್ ಲೆನೊವೊ ಟ್ಯಾಬ್ K9 (Lenovo Tab K9) ಅನ್ನು ಅಧಿಕೃತವಾಗಿ ಮಾರುಕಟ್ಟೆಗೆ ಪರಿಚಯಿಸಿದೆ. ಈ ಟ್ಯಾಬ್ಲೆಟ್ ಅನ್ನು 'ಟ್ಯಾಬ್ ಒನ್' ಎಂದು ಕಂಪನಿ ಕರೆದಿದೆ. ವಿಶೇಷವೆಂದರೆ, ಈ ಟ್ಯಾಬ್ಲೆಟ್ 320 ಗ್ರಾಂ ತೂಕ ಹೊಂದಿದೆ. ಬನ್ನಿ, ಹೊಸ ಲೆನೊವೊ ಟ್ಯಾಬ್ K9 ಟ್ಯಾಬ್‌ನ ಬೆಲೆ, ಲಭ್ಯತೆ ಮತ್ತು ಇದರ ವಿಶೇಷತೆಗಳನ್ನು ತಿಳಿಯೋಣ.

ಲೆನೊವೊ ಟ್ಯಾಬ್ K9 ಟ್ಯಾಬ್ಲೆಟ್ 8.7 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್ ಹೆಲಿಯೊ G85 ಆಕ್ಟಾಕೋರ್ ಪ್ರೊಸೆಸರ್‌ ಹೊಂದಿದೆ. ಈ ಟ್ಯಾಬ್ ಆಂಡ್ರಾಯ್ಡ್ 14 ನಲ್ಲಿ ಕೆಲಸ ಮಾಡುತ್ತದೆ. ಈ ಟ್ಯಾಬ್ಲೆಟ್ 5100mAh ಬ್ಯಾಟರಿಯೊಂದಿಗೆ ಬರುತ್ತದೆ. ಇದರಲ್ಲಿ 15W ವೇಗದ ಚಾರ್ಜಿಂಗ್‌ ಸೌಲಭ್ಯ ಸಹ ಒದಗಿಸಲಾಗಿದೆ. ಇದು 12.5 ಗಂಟೆಗಳ ವಿಡಿಯೋ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ಈ ಟ್ಯಾಬ್ಲೆಟ್ 8 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

Lenovo: ಅಗ್ಗದ ಟ್ಯಾಬ್ ಬಿಡುಗಡೆ; ಕ್ಯಾಮೆರಾ, ಬ್ಯಾಟರಿ ಸೂಪರ್.. ಬೆಲೆ ನೋಡಿ

ಲೆನೊವೊ ಟ್ಯಾಬ್ K9 ಬೆಲೆ

ಕಂಪನಿಯು ಲೆನೊವೊ ಟ್ಯಾಬ್ K9 ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಅಲ್ಲದೆ, ಇದು ಮಾರುಕಟ್ಟೆಯಲ್ಲಿ ಯಾವಾಗ ಖರೀದಿಗೆ ಲಭ್ಯವಿರುತ್ತದೆ ಎಂಬುವುದರ ಬಗ್ಗೆಯೂ ಯಾವುದೇ ಮಾಹಿತಿ ನೀಡಿಲ್ಲ. ಈ ಟ್ಯಾಬ್ಲೆಟ್ ಲೂನಾ ಗ್ರೇ ಮತ್ತು ಸೀಫೋಮ್ ಗ್ರೀನ್ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಿದೆ.

ಲೆನೊವೊ ಟ್ಯಾಬ್ K9 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಲೆನೊವೊ ಟ್ಯಾಬ್ K9 ಟ್ಯಾಬ್ 8.7 ಇಂಚಿನ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು 1,340 x 480 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 480 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 60Hz ರಿಫ್ರೆಶ್ ದರದ ಬೆಂಬಲ ಹೊಂದಿದೆ. ಇದು 86% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಹೊಸ ಲೆನೊವೊ ಟ್ಯಾಬ್ K9 ಟ್ಯಾಬ್ಲೆಟ್ ಮೀಡಿಯಾ ಟೆಕ್ ಹೆಲಿಯೊ G85 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಮೊದಲೇ ಹೇಇದಂತೆ ಈ ಟ್ಯಾಬ್ಲೆಟ್ ಆಂಡ್ರಾಯ್ಡ್ 14 ಆಧಾರಿತ ಲೆನೊವೊ ZUI 16 ಓಎಸ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಇದು ಆಂಡ್ರಾಯ್ಡ್ 15ರ ಅಪ್‌ಗ್ರೇಡ್ ಅನ್ನು ಪಡೆಯಲಿದೆ. ಇದರೊಂದಿಗೆ 2027 ರವರೆಗೆ ಭದ್ರತಾ ಪ್ಯಾಚ್ ನವೀಕರಣಗಳನ್ನು ಸಹ ಪಡೆಯಲಿದೆ ಎಂದು ಕಂಪನಿ ತಿಳಿಸಿದೆ.

Lenovo: ಅಗ್ಗದ ಟ್ಯಾಬ್ ಬಿಡುಗಡೆ; ಕ್ಯಾಮೆರಾ, ಬ್ಯಾಟರಿ ಸೂಪರ್.. ಬೆಲೆ ನೋಡಿ

ಕ್ಯಾಮೆರಾ ಸೆಟಪ್

ಲೆನೊವೊ ಟ್ಯಾಬ್ K9 ಟ್ಯಾಬ್ ಅದ್ಭುತ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಟ್ಯಾಬ್‌ನಲ್ಲಿ 2 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಟ್ಯಾಬ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಟ್ಯಾಬ್ಲೆಟ್ 4GB RAM ಹೊಂದಿದೆ. ಇದರೊಂದಿಗೆ 64GB ಮತ್ತು 128GB ಸ್ಟೋರೇಜ್ ಆಯ್ಕೆಯನ್ನು ಒದಗಿಸಲಾಗಿದೆ. ನೀವು ಮೈಕ್ರೊ ಎಸ್‌ಡಿ ಕಾರ್ಡ್‌ ಬೆಂಬಲದೊಂದಿಗೆ ಸ್ಟೋರೇಜ್‌ ಅನ್ನು ವಿಸ್ತರಿಸಬಹುದು.

ಬ್ಯಾಟರಿ ಮತ್ತು ಚಾರ್ಜಿಂಗ್‌

ಲೆನೊವೊ ಟ್ಯಾಬ್ K9 ಟ್ಯಾಬ್ಲೆಟ್‌ನ ಬ್ಯಾಟರಿಯ ಬಗ್ಗೆ ಹೇಳುವುದಾದರೆ, ಇದು 5100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಕಂಪನಿಯು 15W ವೇಗದ ಚಾರ್ಜಿಂಗ್‌ ಸೌಲಭ್ಯ ಕಲ್ಪಿಸಿದೆ. ಇದು 12.5 ಗಂಟೆಗಳ ವಿಡಿಯೋ ಪ್ಲೇಬ್ಯಾಕ್ ಮತ್ತು 16.5 ಗಂಟೆಗಳ ವೆಬ್ ಬ್ರೌಸಿಂಗ್ ಸಮಯವನ್ನು ನೀಡುತ್ತದೆ ಎಂದು ತಿಳಿಸಿದೆ.

ಇತರೆ ವೈಶಿಷ್ಟ್ಯಗಳು

ಲೆನೊವೊ ಟ್ಯಾಬ್ K9 ಟ್ಯಾಬ್ ಡಾಲ್ಬಿ ಅಟ್ಮಾಸ್ ಅನ್ನು ಬೆಂಬಲಿಸುವ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ಸುರಕ್ಷತೆಗಾಗಿ ಇದು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ, ಈ ಟ್ಯಾಬ್ಲೆಟ್ ವೈ-ಫೈ 5, ಬ್ಲೂಟೂತ್ 5.3, ಜಿಪಿಎಸ್, ಗ್ಲೋನಾಸ್ ಮತ್ತು ಗೆಲಿಲಿಯೊ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Lenovo Tab K9 with MediaTek Helio G85 SoC and 5,100mAh Battery launched: check Price, features, Specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+