ಆಂಡ್ರಾಯ್ಡ್+ಆಪಲ್ iOS+ಬ್ಲೂಟೂತ್ ವಾಚ್ !

By Super
|
ಆಂಡ್ರಾಯ್ಡ್+ಆಪಲ್ iOS+ಬ್ಲೂಟೂತ್ ವಾಚ್ !

ಸಾಫ್ಟ್ ವೇರ್ ಡೆವೆಲಪರ್ಗಳಿಗಾಗಿಯೇ ಒಂದು ವಾಚನ್ನು ತಯಾರು ಮಾಡಿರುವ ಸುದ್ದಿಯನ್ನು ಎಲ್ಲಾದರೂ ಕೇಳಿದ್ದೀರಾ ಅಥವಾ ನೋಡಿದ್ದೀರಾ? ಅದೂ, ಬ್ಲೂಟೂತ್ 4.0, ಆಂಡ್ರಾಯ್ಡ್ ಫೋನುಗಳು ಹಾಗು iOS ಮೂಲಕ ಆಪಲ್ ಸಾಧನಗಳನ್ನು, ಒಂದೇ ವಾಚ್ ನ ಮೂಲಕ ಕನೆಕ್ಟ್ ಮಾಡಬಹುದಾದ ಸೌಲಭ್ಯವಿರುವ ಸ್ಮಾರ್ಟ್ ವಾಚ್ ಇದೆ ಅಂತ ನಂಬಲಿಕ್ಕೇ ಸಾಧ್ಯವಿಲ್ಲ.

ಆದರೆ ಈ ರೀತಿಯ ಅಸಾಮಾನ್ಯ ಸ್ಮಾರ್ಟ್ ವಾಚನ್ನು ಅಭಿವೃದ್ಧಿ ಪಡಿಸಿದೆ ಮೆಟಾ ವಾಚ್ ಎಂಬ ಕಂಪನಿ. ಸಾಮಾನ್ಯವಾಗಿ ವಾಚ್ ನಂತೆ ಟೈಮ್ ತೋರಿಸುವುದರ ಜೊತೆಗೆ ಆಪಲ್ ನ iOS ತಂತ್ರಾಂಶ (ಆಪಲ್ iOS 5 ಹಾಗು ಮೇಲ್ಪಟ್ಟ ಆವೃತ್ತಿ ಇರುವ ಸಾಧನ), ಆಂಡ್ರಾಯ್ಡ್ ತಂತ್ರಾಂಶ (ಆಂಡ್ರಾಯ್ಡ್ 2.3 ಹಾಗು ಮೇಲ್ಪಟ್ಟ ಆವೃತ್ತಿ) ಹಾಗು ಬ್ಲೂಟೂತ್ 4.0 ವಯರ್ಲೆಸ್ ಇರುವ ಟ್ಯಾಬ್ಲೆಟ್ ಹಾಗು ಸ್ಮಾರ್ಟ್ ಫೋನುಗಳಿಗೆ ಕನೆಕ್ಟ್ ಮಾಡಬಹುದಾಗಿದ್ದು, ಕೈ ಅಲ್ಲೇ ನಿಯಂತ್ರಿಸಬಹುದಾದ ಅನನ್ಯವಾದ ಸ್ಮಾರ್ಟ್ ಫೋನ್ ಆಗಿದೆ.

ಇದರ ಫೀಚರುಗಳು ಈ ರೀತಿ ಇವೆ:

  • ವಾಟರ್ ಪ್ರೂಫ್ ಸ್ಟೇನ್ಲೆಸ್ ಸ್ಟೀಲ್ ಹಾಗು ಲೆದರ್ ಸ್ಟ್ರಾಪ್

  • ಮಿರರ್ ಪಾಲಿಮರ್ ನೆಟ್ವರ್ಕ್ ಇರುವ LCD (96x96 ಪಿಕ್ಸೆಲ್ ) ಡಿಸ್ಪ್ಲೇ

  • ತರಚು ನಿರೋಧಕ ಗ್ಲಾಸ್

  • 6 ಪ್ರೋಗ್ರಾಮ್ ಮಾಡಬಹುದಾದ ಬಟನ್, 3-axis accelerometer, ವೈಬ್ರೇಟಿಂಗ್ ಮೋಟರ್ ಹಾಗು ಬೆಳಕಿನ ಸೆನ್ಸರ್

  • ಮೈಕ್ರೋ ಕಂಟ್ರೋಲರ್ (ಪ್ರೋಸೆಸರ್, RAM, ROM ಹಾಗು I/O ಕಂಟ್ರೋಲ್ ಯೂನಿಟ್ ಎಲ್ಲವನ್ನೂ ಒಳಗೊಂಡಿರುವ ಚಿಪ್)

  • ರೇಡಿಯೋ

ಮೆಟಾವಾಚ್ ವೆಬ್ಸೈಟ್ ಮೂಲಕ ಇದನ್ನು ಕೇವಲ 200 ಡಾಲರ್ ಗೆ ತರಿಸಿಕೊಳ್ಳಬಹುದು. ಖರೀದಿಸಲು ಇಲ್ಲವೆ ಇತರೆ ಮಾಡೆಲ್ ಗಳ ಬಗ್ಗೆ ನೋಡಲು ಮೆಟಾವಾಚ್ ವೆಬ್ಸೈಟ್ ಗೆ ಭೇಟಿ ಕೊಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X