ಮಕ್ಕಳಿಗಾಗಿ ಮೆಟಿಸ್‌ನಿಂದ ಟ್ಯಾಬ್ಲೆಟ್‌ ಬಿಡುಗಡೆ

Written By:

ಮೆಟಿಸ್‌ ಕಂಪೆನಿ ಮಕ್ಕಳಿಗಾಗಿ ಹೊಸ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ. 7 ಇಂಚಿನ ಸ್ಕ್ರೀನ್‌ ಹೊಂದಿರುವ ಮೆಟಿಸ್‌ ಎಡಿ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದ್ದು 9,999 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.

2 ರಿಂದ ಹತ್ತು ವರ್ಷದ ಒಳಗಿನ ಮಕ್ಕಳಿಗಾಗಿ ಈ ಟ್ಯಾಬ್ಲೆಟ್‌‌ ತಯಾರಾಗಿದ್ದು, ವಿಶೇಷವಾಗಿ ಮಕ್ಕಳಿಗಾಗಿ ತಯಾರಾದ 70 ಆಪ್‌ಗಳನ್ನು ಈ ಟ್ಯಾಬ್ಲೆಟ್‌ ಒಳಗೊಂಡಿದೆ. ಡೊಂಗಲ್‌ ಮೂಲಕ 3ಜಿ,ವೈಫೈ,ಬ್ಲೂಟೂತ್‌,ಮಿನಿ ಎಚ್‌ಡಿಎಂಐ ಕನೆಕ್ಟಿವಿಟಿ ವಿಶೇಷತೆಗಳನ್ನು ಈ ಟ್ಯಾಬ್ಲೆಟ್‌ ಒಳಗೊಂಡಿದೆ.

ಇದನ್ನೂ ಓದಿ:ಸ್ಲೇಟ್‌ ಹೋಯ್ತು. ಐಪ್ಯಾಡ್‌ ಬಂತು! ನೆದರ್‌ಲ್ಯಾಂಡ್‌ನಲ್ಲಿ ಹೊಸ ಶಾಲೆ!

 ಮಕ್ಕಳಿಗಾಗಿ ಮೆಟಿಸ್‌ನಿಂದ ಟ್ಯಾಬ್ಲೆಟ್‌ ಬಿಡುಗಡೆ

ಮೆಟಿಸ್‌ ಎಡಿ(Metis Eddy)
ವಿಶೇಷತೆ
7 ಇಂಚಿನ ಮಲ್ಟಿ ಟಚ್‌ಸ್ಕ್ರೀನ್‌(1024 x 600 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.6 GHz ಡ್ಯುಯಲ್‌ ಕೋರ್‌ ಎ9 ಪ್ರೊಸೆಸರ್‌‌
1GB RAM
8ಜಿಬಿ ಆಂತರಿಕ ಮೆಮೊರಿ
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಮಿನಿ ಎಚ್‌ಡಿಎಂಐ ಪೋರ್ಟ್‌‌
3200 mAh ಬ್ಯಾಟರಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot