ಸ್ಲೇಟ್‌ ಹೋಯ್ತು. ಐಪ್ಯಾಡ್‌ ಬಂತು! ನೆದರ್‌ಲ್ಯಾಂಡ್‌ನಲ್ಲಿ ಹೊಸ ಶಾಲೆ!

By Ashwath
|

ಸ್ಟೀವ್‌ ಜಾಬ್ಸ್‌ ಕನಸಿನ ಶಾಲೆ ನೆದರ್‌ಲ್ಯಾಂಡ್‌ನಲ್ಲಿ ಆರಂಭವಾಗಿದೆ. ಜಗತ್ತು ಇಂದು ವೇಗವಾಗಿ ಬದಲಾಗುತ್ತಿದೆ. ಈಗಿನ ಶಿಕ್ಷಣ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿ‌ಗಳು ಈ ವೇಗದ ಜಗತ್ತಿಗೆ ಹೊಂದಿಕೊಳ್ಳುವುದು ಕಷ್ಟ ಸಾಧ್ಯ. ಹೀಗಾಗಿ ಹೊಸ ಆಧುನಿಕ ಡಿಜಿಟಲ್‌ ಸ್ಪರ್ಶ ಹೊಂದಿರುವ ಶಿಕ್ಷಣವನ್ನು ವಿದ್ಯಾರ್ಥಿ‌ಗಳಿಗೆ ಕಲಿಸುವುದು ಅನಿವಾರ್ಯ‌ ಎಂದು ಈ ಹಿಂದೆಯೇ ಪ್ರತಿಪಾದಿಸಿದ್ದ ಆಪಲ್‌ ಸಂಸ್ಥಾಪಕನ ಕನಸು ಈಗ ನನಸಾಗಿದೆ. ನೆದರ್‌ಲ್ಯಾಂಡ್‌ನ ಸಂಸ್ಥೆಯೊಂದು ಆಪಲ್‌ ಜೊತೆಗೂಡಿ ಆಧುನಿಕ ಶಿಕ್ಷಣ ಪದ್ದತಿಯಿರುವ ಹೊಸ ಏಳು ಶಾಲೆಗಳನ್ನು ಆರಂಭಿಸಿದೆ.

ವಿಶ್ವದ ಯಾವ ಮೂಲೆಯಲ್ಲೂ ಇಲ್ಲದ, ಸಾಂಪ್ರಾದಾಯಿಕ ಪದ್ದತಿಗೆ ತಿಲಾಂಜಲಿ ನೀಡಿದ ಈ ಹೊಸ ಪದ್ದತಿಯ ಶಾಲೆ ಹೇಗಿದೆ ? ವಿಧ್ಯಾರ್ಥಿ‌ಗಳ ಅಧ್ಯಯನದ ಮಾದರಿ ಏನು? ಎನ್ನುವುದಕ್ಕೆ ವಿವರ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಆಪಲ್‌ ಕಂಪೆನಿಯ ಟಾಪ್‌ -10 ಉತ್ಪನ್ನಗಳು

ಸ್ಲೇಟ್‌ ಹೋಯ್ತು. ಐಪ್ಯಾಡ್‌ ಬಂತು! ನೆದರ್‌ಲ್ಯಾಂಡ್‌ನಲ್ಲಿ ಹೊಸ ಶಾಲೆ!

ಸ್ಲೇಟ್‌ ಹೋಯ್ತು. ಐಪ್ಯಾಡ್‌ ಬಂತು! ನೆದರ್‌ಲ್ಯಾಂಡ್‌ನಲ್ಲಿ ಹೊಸ ಶಾಲೆ!

ನೆದರ್‌ಲ್ಯಾಂಡ್‌ನ ಏಳು ಕಡೆ ಸ್ಟೀವ್‌ ಜಾಬ್ಸ್‌ ಸ್ಕೂಲ್‌ ಅಗಸ್ಟ್‌ 21ರಿಂದ ಅಧಿಕೃತವಾಗಿ ಆರಂಭವಾಗಿದೆ.ಇಲ್ಲಿಯವರೆಗೆ ಎಲ್ಲೂ ಇಲ್ಲದ ನೂತನ ಪಠ್ಯಕ್ರಮದ ಮೂಲಕ ವಿದ್ಯಾರ್ಥಿ‌ಗಳಿಗೆ ಶಿಕ್ಷಣ ಕಲಿಸಿಕೊಡಲಾಗುತ್ತದೆ. ಈ ಶಿಕ್ಷಣ ಕ್ರಮದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ‌ಗೆ ಒಂದೊಂದು ಐಪ್ಯಾಡ್‌ ಕೊಡಲಾಗುತ್ತದೆ. ವಿದ್ಯಾರ್ಥಿ‌ಗಳ ಹೋಮ್‌ ವರ್ಕ್‌, ಅಧ್ಯಾಪಕರ ಜೊತೆಗೆ ಪ್ರಶ್ನೆ,ಸಂವಹನ ಎಲ್ಲವೂ ಈ ಐಪ್ಯಾಡ್‌ ಮೂಲಕವೇ ನಡೆಯುತ್ತದೆ.

ಸ್ಲೇಟ್‌ ಹೋಯ್ತು. ಐಪ್ಯಾಡ್‌ ಬಂತು! ನೆದರ್‌ಲ್ಯಾಂಡ್‌ನಲ್ಲಿ ಹೊಸ ಶಾಲೆ!

ಸ್ಲೇಟ್‌ ಹೋಯ್ತು. ಐಪ್ಯಾಡ್‌ ಬಂತು! ನೆದರ್‌ಲ್ಯಾಂಡ್‌ನಲ್ಲಿ ಹೊಸ ಶಾಲೆ!

ಪ್ರತಿಯೊಂದು ಪಠ್ಯಕ್ಕೆ ಹೊಸ ಅಪ್ಲಿಕೇಶನ್‌ ರೂಪಿಸಲಾಗಿದೆ. ಅಪ್ಲಿಕೇಶನ್‌ಲ್ಲಿ ವಿದ್ಯಾರ್ಥಿ‌ಗಳಿಗೆ ಅಸೈನ್‌ಮೆಂಟ್‌ ನೀಡಲಾಗುತ್ತದೆ. ಅಸೈನ್‌ಮೆಂಟ್‌ನ್ನು ವಿದ್ಯಾರ್ಥಿ‌ಗಳು ಐಪ್ಯಾಡ್‌ ಮೂಲಕ ಮಾಡಿ ಅಧ್ಯಾಪಕರ ಇಮೇಲ್‌ಗೆ ಕಳುಹಿಸುತ್ತಾರೆ. ಈ ಅಸೈನ್‌ಮೆಂಟ್‌ನ ಮೇಲ್‌ ಪೋಷಕರಿಗೂ ಮೇಲ್‌ಗೂ ತಲುಪುತ್ತದೆ.

 ಸ್ಲೇಟ್‌ ಹೋಯ್ತು. ಐಪ್ಯಾಡ್‌ ಬಂತು! ನೆದರ್‌ಲ್ಯಾಂಡ್‌ನಲ್ಲಿ ಹೊಸ ಶಾಲೆ!

ಸ್ಲೇಟ್‌ ಹೋಯ್ತು. ಐಪ್ಯಾಡ್‌ ಬಂತು! ನೆದರ್‌ಲ್ಯಾಂಡ್‌ನಲ್ಲಿ ಹೊಸ ಶಾಲೆ!

ಪ್ರತಿದಿನ ಅಸೈನ್‌ಮೆಂಟ್‌ಗಾಗಿ Tiktik sCoolTool ಆಪ್‌‌‌, ಪ್ರೊಜೆಕ್ಟ್‌ ಮತ್ತು ಸಂಶೋಧನೆಗಾಗಿ sCoolProjects ಆಪ್‌‌, ಜೊತೆಗೆ ಪೋಷಕರು ಆಧ್ಯಪಕರ ಜೊತೆಗೆ ಸಂವಹನ ಮಾಡಲು iDesk Learning Tracker ಆಪ್‌ ವಿಶೇಷವಾಗಿ ಸಿದ್ದಪಡಿಸಲಾಗಿದೆ

 ಸ್ಲೇಟ್‌ ಹೋಯ್ತು. ಐಪ್ಯಾಡ್‌ ಬಂತು! ನೆದರ್‌ಲ್ಯಾಂಡ್‌ನಲ್ಲಿ ಹೊಸ ಶಾಲೆ!

ಸ್ಲೇಟ್‌ ಹೋಯ್ತು. ಐಪ್ಯಾಡ್‌ ಬಂತು! ನೆದರ್‌ಲ್ಯಾಂಡ್‌ನಲ್ಲಿ ಹೊಸ ಶಾಲೆ!

ತರಗತಿಯಲ್ಲಿ ಕಪ್ಪು ಬಿಳಿ ಬಣ್ಣದ ಬೋರ್ಡ್‌ ಬದಲಿಗೆ ಪ್ರತಿಯೊಂದು ಕ್ಲಾಸ್‌ನಲ್ಲಿ ಎಚ್‌ಡಿ ಟಿವಿ ಇದೆ. ವಿದ್ಯಾರ್ಥಿ‌ಗಳಿಗೆ ಇಂಟರ್‌ನೆಟ್‌ ಮೂಲಕ ಪ್ರಯೋಗಿಕ ವಿವರಣೆಯನ್ನು ನೀಡಲಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

 ಸ್ಲೇಟ್‌ ಹೋಯ್ತು. ಐಪ್ಯಾಡ್‌ ಬಂತು! ನೆದರ್‌ಲ್ಯಾಂಡ್‌ನಲ್ಲಿ ಹೊಸ ಶಾಲೆ!

ಸ್ಲೇಟ್‌ ಹೋಯ್ತು. ಐಪ್ಯಾಡ್‌ ಬಂತು! ನೆದರ್‌ಲ್ಯಾಂಡ್‌ನಲ್ಲಿ ಹೊಸ ಶಾಲೆ!

ಮಾಹಿತಿ ಸಂಸ್ಕರಣೆ, ಸಹಭಾಗಿತ್ವ, ವಿಮರ್ಶಾತ್ಮಕವಾಗಿ ಸಮಸ್ಯೆಗಳನ್ನು ಪರಿಹರಿಸುವ, ಸೃಜನಶೀಲತೆ(information processing, collaboration, and developing a critical, problem-solving and creative mind) ಕೌಶಲ್ಯಗಳನ್ನು ಎಳವೆಯಲ್ಲೇ ಮಕ್ಕಳಿಗೆ ಬೋಧಿಸಲಾಗುತ್ತಿದೆ

 ಸ್ಲೇಟ್‌ ಹೋಯ್ತು. ಐಪ್ಯಾಡ್‌ ಬಂತು! ನೆದರ್‌ಲ್ಯಾಂಡ್‌ನಲ್ಲಿ ಹೊಸ ಶಾಲೆ!

ಸ್ಲೇಟ್‌ ಹೋಯ್ತು. ಐಪ್ಯಾಡ್‌ ಬಂತು! ನೆದರ್‌ಲ್ಯಾಂಡ್‌ನಲ್ಲಿ ಹೊಸ ಶಾಲೆ!

ಮುಂದಿನ ದಿನದಲ್ಲಿ ಇಂಟರ್‌‌ನೆಟ್‌ ಮೂಲಕ ವಿಶ್ವದ ಎಲ್ಲಾ ವಿದ್ಯಾರ್ಥಿ‌ಗಳು ಸಣ್ಣ ವಯಸ್ಸಿನಲ್ಲೇ ಒಂದು ಕಡೆ ಸೇರುವಂತೆ ಈ ಸಂಸ್ಥೆ ಯೋಜನೆ ರೂಪಿಸಿದೆ.

 ಸ್ಲೇಟ್‌ ಹೋಯ್ತು. ಐಪ್ಯಾಡ್‌ ಬಂತು! ನೆದರ್‌ಲ್ಯಾಂಡ್‌ನಲ್ಲಿ ಹೊಸ ಶಾಲೆ!

ಸ್ಲೇಟ್‌ ಹೋಯ್ತು. ಐಪ್ಯಾಡ್‌ ಬಂತು! ನೆದರ್‌ಲ್ಯಾಂಡ್‌ನಲ್ಲಿ ಹೊಸ ಶಾಲೆ!

21ನೇ ಶತಮಾನದಲ್ಲಿ ಜಗತ್ತು ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಈ ಸಂದರ್ಭದಲ್ಲಿ ಹಿಂದಿನ ಶಿಕ್ಷಣ ಪದ್ದತಿಯಿಂದ ವಿದ್ಯಾರ್ಥಿ‌ಗಳಿಗೆ ಅಷ್ಟೇನೂ ಪ್ರಯೋಜನವಿಲ್ಲ. ಹೀಗಾಗಿ ಹೊಸ ಪದ್ದತಿಯನ್ನು ಆಪಲ್‌ ಜೊತೆಗೂಡಿ ಅಳವಡಿಸಲು ಮುಂದಾಗಿದ್ದೇವೆ ಎಂದು ಈ ಶಾಲೆಯನ್ನು ಸ್ಥಾಪಿಸಿದ O4NT ಸಂಸ್ಥೆ ಹೇಳಿದೆ.

 ಸ್ಲೇಟ್‌ ಹೋಯ್ತು. ಐಪ್ಯಾಡ್‌ ಬಂತು! ನೆದರ್‌ಲ್ಯಾಂಡ್‌ನಲ್ಲಿ ಹೊಸ ಶಾಲೆ!

ಸ್ಲೇಟ್‌ ಹೋಯ್ತು. ಐಪ್ಯಾಡ್‌ ಬಂತು! ನೆದರ್‌ಲ್ಯಾಂಡ್‌ನಲ್ಲಿ ಹೊಸ ಶಾಲೆ!

ಆರಂಭದಲ್ಲಿ ನೆದರ್‌ಲ್ಯಾಂಡ್‌‌ನಲ್ಲಿ ಪ್ರಾರಂಭಿಸಿದ್ದು, ಮುಂದಿನ ವರ್ಷದಿಂದ ವಿಶ್ವದ ಹಲವು ರಾಷ್ಟ್ರಗಳಲ್ಲಿ ಈ ಹೊಸ ಶಿಕ್ಷಣ ಪದ್ದತಿಯ ಶಾಲೆಯನ್ನು ಆರಂಭಿಸಲು O4NT ಸಂಸ್ಥೆ ಯೋಜನೆ ರೂಪಿಸಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X