ಫೆಬ್ರವರಿಯಲ್ಲಿ ಮೈಕ್ರೋಮ್ಯಾಕ್ಸ್ ಡ್ಯುಯಲ್ ಓಎಸ್ ಟ್ಯಾಬ್ಲೆಟ್ ಬಿಡುಗಡೆ
ಮೈಕ್ರೋಮ್ಯಾಕ್ಸ್‌ನ ಡ್ಯುಯಲ್ ಓಎಸ್ ಲ್ಯಾಪ್‌ಟ್ಯಾಬ್‌ನ್ನು ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗುಡ್‌ನ್ಯೂಸ್.ಹೊಸ ಲ್ಯಾಪ್‌ಟ್ಯಾಬ್ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದ್ದು ಅಂದಾಜು 30 ಸಾವಿರ ರೂಪಾಯಿ ಒಳಗಡೆ ಬೆಲೆ ನಿಗದಿಯಾಗಲಿದೆ ಎಂದು ಮೈಕ್ರೋಮ್ಯಾಕ್ಸ್ ಸಹ ಸಂಸ್ಥಾಪಕ ರಾಹುಲ್ ಶರ್ಮ ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿಯನ್ನು ತಿಳಿಸಿದ ರಾಹುಲ್ ಶರ್ಮ, ಈ ವರ್ಷ ಒಂದು ಲಕ್ಷ ಈ ಲ್ಯಾಪ್‌ಟಾಬ್‌ನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
ಮೈಕ್ರೋಮ್ಯಾಕ್ಸ್ ತನ್ನ ಪ್ರಥಮ ಡ್ಯುಯಲ್ ಓಎಸ್ ಲ್ಯಾಪ್‌ಟ್ಯಾಬ್‌ನ್ನುಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆದ ಸಿಇಎಸ್‌ನಲ್ಲಿ ಬಿಡುಗಡೆ ಮಾಡಿತ್ತು.ಕ್ಯಾನ್‌ವಾಸ್ ಲ್ಯಾಪ್‌ಟಾಪ್ ಟ್ಯಾಬ್ಲೆಟ್ ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್ ಮತ್ತು ವಿಂಡೋಸ್ 8.1 ಆಪರೇಟಿಂಗ್ ಸಿಸ್ಟಂ ಒಳಗೊಂಡಿದೆ. ಮೈಕ್ರೋಮ್ಯಾಕ್ಸ್ ಈ ಟ್ಯಾಬ್ಲೆಟ್‌ನೊಂದಿಗೆ ವೈರ್‌ಲೆಸ್ ಕೀಬೋರ್ಡ್‌ನ್ನು ಸಹ ಬಿಡುಗಡೆ ಮಾಡಿದೆ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಲ್ಯಾಪ್‌ಟ್ಯಾಬ್
ವಿಶೇಷತೆ:
10.1 ಇಂಚಿನ ಐಪಿಎಸ್ ಕೆಪಾಸಿಟಿವ್ ಸ್ಕ್ರೀನ್(1280x800 ಪಿಕ್ಸೆಲ್)
ಆಂಡ್ರಾಯ್ಡ್ ಜೆಲ್ಲಿ ಬೀನ್ ಮತ್ತು ವಿಂಡೋಸ್ 8.1 ಓಎಸ್ ಡ್ಯುಯಲ್ ಬೂಟ್ ಸಪೋರ್ಟ್
1.46GHz ಇಂಟೆಲ್ Celeron N2805 ಪ್ರೊಸೆಸರ್
2ಜಿಬಿ ರ್‍ಯಾಮ್
32 ಜಿಬಿ ಆಂತರಿಕ ಮೆಮೊರಿ
2 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
64ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್4.0, ವೈಫೈ
7400mAh ಬ್ಯಾಟರಿ
ಇದನ್ನೂ ಓದಿ: ಗೂಗಲ್‌ನ ಸ್ವಿಜರ್‌ಲ್ಯಾಂಡ್ ಆಫೀಸ್ ಹೇಗಿದೆ ನೋಡಿದ್ದೀರಾ?


Click it and Unblock the Notifications