ಭಾರತದ ಟ್ಯಾಬ್ಲೆಟ್ ಮಾರುಕಟ್ಟೆಲ್ಲಿ ಮೈಕ್ರೋಮ್ಯಾಕ್ಸ್ ನಂ.1

ವರದಿಗಳ ಪ್ರಕಾರ ಟ್ಯಾಬ್ಲೆಟ್ ಮಾರುಕಟ್ಟೆಯ ಒಟ್ಟು ವಹಿವಾಟಿನಲ್ಲಿ ಅಚ್ಚರಿ ಎಂಬಂತೆ ಶೇ.18.4 ರಷ್ಟು ಶೇರ್ಸ್‌ಗಳೊಂದಿಗೆ ಮೈಕ್ರೋಮ್ಯಾಕ್ಸ್ ಮೊದಲ ಸ್ಥಾನದಲ್ಲಿದ್ದರೆ, ದಿಗ್ಗಜ ಸಂಸ್ಥೆಗಳಾದಂತಹ ಸ್ಯಾಮ್ಸಂಗ್ ಹಾಗೂ ಆಪಲ್ ಸಂಸ್ಥೆಗಳು 13.3% ಹಾಗೂ 12.3% ಶೇರುಗಳೊಂದಿಗೆ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದಿವೆ ಎಂದು ವರದಿ ತಿಳಿಸಿದೆ.
2012 ರ 2Q ಅಂತ್ಯದ ವೇಳೆಗೆ ಒಟ್ಟು ವಹಿವಾಟಿನ ಶೇ. 47.4 ಶೇರ್ಸ್‌ಗಳನ್ನು ಮಾರುಕಟ್ಟೆಗೆ ಆಗಮಿಸಿದ ಶೀಕ್ಷಣ ಹಾಗೂ ಮನರಂಜನೆಗೆ ಹೆಚ್ಚು ಒತ್ತುನೀಡಿ ತಯಾರಾದಂತಹ ಟ್ಯಾಬ್ಲೆಟ್‌ಗಳು ಹೊಂದಿವೆ. ಈ ಮೂಲಕ ಈ ಸಾಧನಗಳಿಗೆ ಯುವ ಪೀಳಿಗೆಯವರಲ್ಲಿ ಹೆಚ್ಚು ಬೇಡಿಕೆ ಇರುವುದು ಸ್ಫಷ್ಟವಾಗಿ ತಿಳಿಯುತ್ತದೆ.
ಟ್ಯಾಬ್ಲೆಟ್ ಮಾರುಕಟ್ಟೆಗೆ ನೂತನ ತಯಾರಕರುಗಳು ಕಡಿಮೆ ದರದಲ್ಲಿ ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿರುವ ಟ್ಯಾಬ್ಲೆಟ್ಸ್ ಬಿಡುಗಡೆ ಮಾಡುತ್ತಿರುವುದರಿಂದ ಗಣನೀಯ ಪ್ರಮಾಣದ ಏರಿಕೆ ಕಂಡುಬಂದಿದೆ ಎಂದು ಸಂಶೋಧನೆಯ ವರದಿಗಳು ತಿಳಿಸಿವೆ
2012 ರ 2Q ಅಂತ್ಯದ ವೇಳೆಗೆ ಒಟ್ಟಾರೆ 90 ಮಂದಿ ತಯಾರಕರುಗಳು ತಮ್ಮ ಡ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿಯೂ ಬಹುತೇಕ ತಯಾರಕರುಗಳು 5,000-10,000 ರೂ. ದರದಲ್ಲಿ ಟ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
ಮೈಕ್ರೋಮ್ಯಾಕ್ಸ್ ಫನ್‌ಬುಕ್ ಇನ್ಫಿನಿಟಿ (P275) ಬಿಡುಗಡೆ


Click it and Unblock the Notifications