ಈ ಲ್ಯಾಪ್‌ಟಾಪ್ ಬಂದರೆ ಹಳೆ ಲ್ಯಾಪ್‌ಟಾಪ್ ಎಲ್ಲಾ ಮೂಲೆ ಸೇರಲಿವೆ!!..ಏಕೆ ಗೊತ್ತಾ?

ಲ್ಯಾಪ್‌ಟಾಪ್ ಬಳಕೆಯ ಮೇಲೆ ಇಲ್ಲಿಯವರೆಗೂ ಸ್ಮಾರ್ಟ್‌ಫೋನ್ ಅಷ್ಟೇನು ಪರಿಣಾಮ ಬೀರಿಲ್ಲದಿದ್ದರೂ ಸಹ ಲ್ಯಾಪ್‌ಟಾಪ್ ಬಳಕೆದಾರರ ಮನಸ್ಸು ಸ್ಮಾರ್ಟ್‌ಪೋನ್ ಕಡೆ ಸಾಗಿದೆ ಎನ್ನಬಹುದು.!!

|

ಡೆಸ್ಕ್ ಕಂಪ್ಯೂಟರ್ ನಂತರ ಅವುಗಳ ಸ್ಥಾನವನ್ನು ಲ್ಯಾಪ್‌ಟಾಪ್‌ಗಳು ಆಕ್ರಮಿಸಿಕೊಂಡರೆ, ಲ್ಯಾಪ್‌ಟಾಪ್‌ಗಳ ಸ್ಥಾನವನ್ನು ಸ್ಮಾರ್ಟ್‌ಫೋನ್‌ಗಳು ಆವರಿಸಿಕೊಳ್ಳುತ್ತಿವೆ.! ಲ್ಯಾಪ್‌ಟಾಪ್ ಬಳಕೆಯ ಮೇಲೆ ಇಲ್ಲಿಯವರೆಗೂ ಸ್ಮಾರ್ಟ್‌ಫೋನ್ ಅಷ್ಟೇನು ಪರಿಣಾಮ ಬೀರಿಲ್ಲದಿದ್ದರೂ ಸಹ ಲ್ಯಾಪ್‌ಟಾಪ್ ಬಳಕೆದಾರರ ಮನಸ್ಸು ಸ್ಮಾರ್ಟ್‌ಪೋನ್ ಕಡೆ ಸಾಗಿದೆ ಎನ್ನಬಹುದು.!!

ಈ ಲ್ಯಾಪ್‌ಟಾಪ್ ಬಂದರೆ ಹಳೆ ಲ್ಯಾಪ್‌ಟಾಪ್ ಎಲ್ಲಾ ಮೂಲೆ ಸೇರಲಿವೆ!!..ಏಕೆ ಗೊತ್ತಾ?

ಸ್ಮಾರ್ಟ್‌ಪೋನ್ ಹೊಂದಿದ್ದ ಕೆಲ ಸುಲಭ ಫೀಚರ್‌ಗಳನ್ನು ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ ಹೊಂದಿಲ್ಲದೆ ಇರುವುದು ಇದಕ್ಕೆ ಕಾರಣವಾಗಿತ್ತು. ಹಾಗಾಗಿ, ಸ್ಮಾರ್ಟ್‌ಪೊನ್‌ನಂತೆಯೇ ಸುಲಭ ಫೀಚರ್ ಹೊಂದಿರುವ ನೂತನ ಲ್ಯಾಪ್‌ಟಾಪ್ ಒಂದು ದಿಗ್ಗಜ ಕಂಪೆನಿಗಳಿಂದ ಹೊರಬರುತ್ತಿದೆ.! ಹಾಗಾದರೆ, ಆ ಲ್ಯಾಪ್‌ಟಾಪ್ ಯಾವುದು? ಇತರೆ ಲ್ಯಾಪ್‌ಟಾಪ್‌ಗಳಿಗಿಂತ ಹೇಗೆ ಭಿನ್ನ? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ದಿಗ್ಗಜ ಕಂಪೆನಿಗಳ ಹೊಸ ಲ್ಯಾಪ್!!

ದಿಗ್ಗಜ ಕಂಪೆನಿಗಳ ಹೊಸ ಲ್ಯಾಪ್!!

ಕಂಪ್ಯೂಟರ್ ತಂತ್ರಾಂಶ ದೈತ್ಯ ಮೈಕ್ರೋಸಾಫ್ಟ್ ಮತ್ತು ಮೊಬೈಲ್ ಪ್ರೊಸೆಸರ್ ನಿರ್ಮಾಣ ಕಂಪನಿ ಕ್ವಾಲ್ಕಂ ಸ್ನ್ಯಾಪ್‌ ಡ್ರ್ಯಾಗನ್ ಸಂಸ್ಥೆ ಜತೆಯಾಗಿ ಲ್ಯಾಪ್‌ಟಾಪ್ ಒಂದನ್ನು ಬಿಡುಗಡೆ ಮಾಡಲು ಮುಂದಾಗಿವೆ. ಈ ಲ್ಯಾಪ್‌ಟಾಪ್ ಪ್ರಸ್ತುತ ಇರುವ ಲ್ಯಾಪ್‌ಟಾಪ್‌ಗಳಿಂತ ಹೆಚ್ಚು ಫೀಚರ್ಸ್ ಹೊಂದಿದೆ.!!

‘ಆಲ್ವೇಸ್ ಕನೆಕ್ಟಡ್’!!

‘ಆಲ್ವೇಸ್ ಕನೆಕ್ಟಡ್’!!

‘ಆಲ್ವೇಸ್ ಕನೆಕ್ಟಡ್' ಎಂಬ ನೂತನ ಮಾದರಿಯ ಲ್ಯಾಪ್‌ಟಾಪ್ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಈ ಲ್ಯಾಪ್‌ಟಾಪ್ ಇಂಟರ್‌ನೆಟ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ನಿರ್ಮಿಸಿರುವ ಲ್ಯಾಪ್‌ಟಾಪ್ ಆಗಿದ್ದು, ಒಂದು ವಿಶಿಷ್ಟ ಲ್ಯಾಪ್‌ಟಾಪ್ ಇದಾಗಿರಲಿದೆ ಎಂದು ಹೇಳಲಾಗಿದೆ.!!

ಎಲ್‍ಟಿಇ ಮಾದರಿ ಇಂಟರ್‌ನೆಟ್!!

ಎಲ್‍ಟಿಇ ಮಾದರಿ ಇಂಟರ್‌ನೆಟ್!!

‘ಆಲ್ವೇಸ್ ಕನೆಕ್ಟಡ್ ಲ್ಯಾಪ್‌ಟಾಪ್‌ನಲ್ಲಿ ಮೊಬೈಲ್ ಡೇಟಾ ಮಾದರಿಯಲ್ಲಿ ಸಿಮ್ ಕಾರ್ಡ್ ಅಳವಡಿಸಿಕೊಂಡು ಎಲ್‍ಟಿಇ ಮಾದರಿಯ ಇಂಟರ್‌ನೆಟ್ ಪಡೆಯಬಹುದು.ಡಾಂಗಲ್, ವೈಫೈ ಸಂಪರ್ಕ ಅವಶ್ಯಕತೆ ಇಲ್ಲದೆ ಇಂಟರ್‌ನೆಟ್ ಬಳಸುವ ಆಯ್ಕೆಯನ್ನು ಈ ಲ್ಯಾಪ್‌ಟಾಪ್ ಹೊಂದಿರಲಿದೆ.!!

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
ಕನಿಷ್ಠ 10 ಗಂಟೆ ಬ್ಯಾಟರಿ!!

ಕನಿಷ್ಠ 10 ಗಂಟೆ ಬ್ಯಾಟರಿ!!

ಬ್ಲೂಟೂತ್, ವೈಫೈಗಳ ತೊಂದರೆ ಇಲ್ಲದೆ ನಿರಂತರವಾಗಿ ಮೊಬೈಲ್ ಡೇಟಾದ ರೀತಿ ಇಂಟರ್‌ನೆಟ್‌ ಬಳಸಬಹುದಾದ ಈ ಲ್ಯಾಪ್‌ಟಾಪ್‌ ಕನಿಷ್ಠ 10 ಗಂಟೆಯವರೆಗೂ ಬ್ಯಾಟರಿ ಬ್ಯಾಕ್‍ಅಪ್ ನೀಡಲಿದೆಯಂತೆ. ಹಾಗಾಗಿ, ಈ ಲ್ಯಾಪ್‌ಟಾಪ್ ಎಲ್ಲರಿಗೂ ಇಂದಿನ ಲ್ಯಾಪ್‌ಟಾಪ್ ಪ್ರಪಂಚವನ್ನು ಬದಲಾಯಿಸಬಹುದು.!!

ಓದಿರಿ:ಮೊಬೈಲ್ ಮಾರುಕಟ್ಟೆಯನ್ನು ಬೆಚ್ಚಿ ಬೀಳಿಸಿದೆ ಶಿಯೋಮಿ 'ರೆಡ್‌ಮಿ ನೋಟ್ 5' ಬೆಲೆ!!

Best Mobiles in India

English summary
Always-Connected PCs, the end result of years of work by Microsoft and Qualcomm on the vision for Windows on ARM. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X