'ವಿಂಡೊಸ್ 7' ಬಳಕೆದಾರರಿಗೆ ಮೈಕ್ರೋಸಾಫ್ಟ್ ಕೊಡಲಿದೆ ಶಾಕ್!

|

ಮೈಕ್ರೋಸಾಫ್ಟ್ ಹೆಸರನ್ನು ಯಾರು ಕೇಳಿಲ್ಲ ಹೇಳಿ? ಕಂಪ್ಯೂಟರ್‌ ಬಳಸುವ ಪ್ರತಿಯೊಬ್ಬರಿಗೂ ಮೈಕ್ರೋಸಾಫ್ಟ್ ಹೆಸರು ಚಿರಪರಿಚಿತ. ಕಂಪ್ಯೂಟರ್ ಆಪ್‌ರೇಟಿಂಗ್ ಸಾಫ್ಟ್‌ವೇರ್ ತಯಾರಿಕಾ ಸಂಸ್ಥೆ ಆಗಿರುವ ಮೈಕ್ರೋಸಾಫ್ಟ್ ಸಂಸ್ಥೆಯು ಇದೀಗ ವಿಂಡೋಸ್‌ ಬಳಕೆದಾರರಿಗೆ ಬಿಗ್ ಶಾಕ್ ಕೊಡುವುದು ಗ್ಯಾರಂಟಿ. ಹೌದು, ಮೈಕ್ರೋಸಾಫ್ಟ್ ಕೂಡ ಈ ಶಾಕ್ ನೀಡಲು ತಯಾರಾಗಿದೆ.!

'ವಿಂಡೊಸ್ 7' ಬಳಕೆದಾರರಿಗೆ ಮೈಕ್ರೋಸಾಫ್ಟ್ ಕೊಡಲಿದೆ ಶಾಕ್!

ಮೈಕ್ರೋಸಾಫ್ಟ್ ಸಂಸ್ಥೆ ತನ್ನ ಹಳೆಯ ವಿಂಡೊಸ್ 7 ಆಪ್ರೆಟಿಂಗ್ ಸಿಸ್ಟಮ್‌ಗೆ 14 ಜನವರಿ 2020ಯಲ್ಲಿ ವಿದಾಯ ಹೇಳಲು ರೆಡಿಯಾಗಿದೆ. ಅಂದರೇ ಮುಂದಿನ ವರ್ಷದ ಆರಂಭದಿಂದ ವಿಂಡೋಸ್ 7 ಕಾರ್ಯನಿರ್ವಹಿಸುವುದಿಲ್ಲ ಎಂದು ಕಂಪೆನಿ ತಿಳಿಸಿದೆ. ಹಾಗಾಗಿ, ಯಾರೆಲ್ಲಾ ಇನ್ನೂ ಮೈಕ್ರೋಸಾಫ್ಟ್ ವಿಂಡೊಸ್ 7 ಆಪ್ರೆಟಿಂಗ್ ಸಿಸ್ಟಮ್‌ ಅನ್ನೇ ಬಳಸುತ್ತಿದ್ದಿರೋ ಆದಷ್ಟು ಬೇಗ ಮೈಕ್ರೋಸಾಫ್ಟ್ ವಿಂಡೊಸ್ 10 ವರ್ಷನ್‌ಗೆ ಅಪ್‌ಗ್ರೇಡ್ ಆಗಬೇಕಿದೆ.

'ವಿಂಡೊಸ್ 7' ಬಳಕೆದಾರರಿಗೆ ಮೈಕ್ರೋಸಾಫ್ಟ್ ಕೊಡಲಿದೆ ಶಾಕ್!

ಮೈಕ್ರೋಸಾಫ್ಟ್ ಸಂಸ್ಥೆ ಈ ಹಿಂದೆಯೇ ವಿಂಡೊಸ್ 7 ಅಪ್‌ಗ್ರೇಡ್‌ ಮಾಡಿಕೊಳ್ಳಲು ಮಾಹಿತಿ ನೀಡಿತ್ತು ಮತ್ತು ಅಪ್‌ಗ್ರೇಡ್‌ ಮಾಡಿಕೊಳ್ಳಲು ಅದಕ್ಕೆ ಬಹಳಷ್ಟು ಸಮಯಾವಕಾಶವನ್ನು ನೀಡುತ್ತಾ ಬಂದಿತ್ತು. ಆದರೆ ಇದೀಗ ಕಂಪೆನಿ ಮುಂದಿನ ವರ್ಷದ ಆರಂಭದಿಂದಲೇ ವಿಂಡೊಸ್‌7 ಗೆ ಆಪರೇಟಿಂಗ್‌ಗೆ ಸಿಸ್ಟಮ್‌ಗೆ ಮೈಕ್ರೋಸಾಫ್ಟ್‌ನಿಂದ ಯಾವುದು ಸಪೋರ್ಟ್ ಇರುವುದಿಲ್ಲ ಎಂದು ಅಧಿಕೃತವಾಗಿ ತಿಳಿಸಿದೆ.

'ವಿಂಡೊಸ್ 7' ಬಳಕೆದಾರರಿಗೆ ಮೈಕ್ರೋಸಾಫ್ಟ್ ಕೊಡಲಿದೆ ಶಾಕ್!

ವಿಂಡೊಸ್ 10 ವರ್ಷನ್‌ಗೆ ಅಪ್‌ಗ್ರೇಡ್‌ ಮಾಡಿಕೊಳ್ಳಲೇಬೇಕಿದ್ದು, ಒಂದು ವೇಳೆ ಅಪ್‌ಗ್ರೇಡ್‌ ಮಾಡಿಕೊಳ್ಳದಿದ್ದರೇ ನಿಮ್ಮ ಕಂಪ್ಯೂಟರ್ ಭದ್ರತಾ ದೃಷ್ಠಿಯಿಂದ ಮತ್ತು ಸಂಸ್ಥೆಯ ಮುಂದಿನ ಯಾವುದೇ ಫೀಚರ್‌ಗಳನ್ನು ವಿಂಡೊಸ್ 7 ನಲ್ಲಿ ಇನ್ನು ಮುಂದೆ ಪಡೆಯಲು ಸಾಧ್ಯವಿರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. ವಿಂಡೊಸ್ 7ನಿಂದ ವಿಂಡೊಸ್ 10 ವರೆಗಿನ ದಾರಿಯ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ ನೋಡೋಣ.

ವಿಂಡೊಸ್ 7

ವಿಂಡೊಸ್ 7

ಮೈಕ್ರೋಸಾಫ್ಟ್ ಸಂಸ್ಥೆಯು ವಿಂಡೊಸ್ 7 ಆಪ್‌ರೇಟಿಂಗ್ ಸರಣಿ ಅನ್ನು ಜುಲೈ 2009 ರಲ್ಲಿ ಕಂಪ್ಯೂಟರ್ ಬಳಕೆದಾರರಿಗೆ ಪರಿಚಯಿಸಿತ್ತು. ಈ ಸರಣಿಯಲ್ಲಿ ವಿಂಡೊಸ್ ಸ್ಟಾರ್ಟ್‌ರ್, ಹೋಮ್ ಬೇಸಿಕ್, ಹೋಮ್ ಪ್ರೀಮಿಯಂ, ಪ್ರೋಫೆಶನಲ್, ಎಂಟರ್‌ಪ್ರೈಸ್ ಮತ್ತು ಅಲ್ಟಿಮೇಟ್ ಎಂಬ ಆಯ್ಕೆಗಳನ್ನು ನೀಡಲಾಗಿತ್ತು. ಜನಪ್ರಿಯವಾಗಿದ್ದ ಈ ವಿಂಡೊಸ್ 7 ಆಪ್‌ರೇಟಿಂಗ್ ಸಿಸ್ಟಮ್ ಇನ್ನೂ ಕಾರ್ಯನಿಲ್ಲಿಸಲಿದೆ.

ವಿಂಡೊಸ್ 8 ಮತ್ತು 8.1

ವಿಂಡೊಸ್ 8 ಮತ್ತು 8.1

2012 ಅಕ್ಟೊವರ್‌ನಲ್ಲಿ ಲಾಂಚ್‌ ಆಗಿದ್ದ ವಿಂಡೊಸ್ 8 ಆಪ್ರೇಟಿಂಗ್ ಸಿಸ್ಟಂ ಹೊಸ ಅವತರಣಿಕೆಯೊಂದಿಗೆ ಬಂದಿತ್ತು. ಇದರ ಕೋಡ್‌ಕಲರ್ ಬ್ಲೂ ಆಗಿದೆ. ವಿಂಡೊಸ್ 8, 8 ಪ್ರೋ, 8 ಎಂಟರ್‌ಪ್ರೈಸ್, 8 ಓಇಎಮ್ ಎಂಬ ಆಯ್ಕೆಗಳನ್ನು ಹೊಂದಿತ್ತು. ವಿಂಡೊಸ್ 8.1 ಅಕ್ಟೊಬರ್ 2013ರಲ್ಲಿ ಬಿಡುಗಡೆಯಾಗಿತ್ತು. ಇದು ಸಹ ಬ್ಲೂ ಕಲರ್ ಕೋಡ್ ಹೊಂದಿದೆ.

ವಿಂಡೊಸ್ 10

ವಿಂಡೊಸ್ 10

ಜುಲೈ 2015ರಲ್ಲಿ ಬಿಡುಗಡೆಯಾಗಿ ಪ್ರಸ್ತುತ ಜಾಲ್ತಿಯಲ್ಲಿರುವ ವಿಂಡೊಸ್ 10 ಆಪ್ರೇಟಿಂಗ್ ಸಿಸ್ಟಂ ರೆಡ್‌ಸ್ಟೋನ್‌ಕಲರ್‌ಕೋಡ್ ಅನ್ನು ಹೊಂದಿದೆ. ವಿಂಡೊಸ್ 10 ಆಪ್ರೇಟಿಂಗ್ ಸಿಸ್ಟಮ್ ಅನೇಕ ಆಯ್ಕೆಗಳನ್ನು ಹೊಂದಿದೆ. ಹಾಗಾಗಿ, ನೀವು ಕೂಡ ಈಗಲೂ ವಿಂಡೊಸ್ 7 ಆಪ್‌ರೇಟಿಂಗ್ ಸಿಸ್ಟಂ ಬಳಕೆ ಮಾಡುತ್ತಿದ್ದರೆ ಈಗಲೇ ವಿಂಡೊಸ್ 10ಗೆ ಅಪ್‌ಡೇಟ್ ಆಗುವುದನ್ನು ಮರೆಯಬೇಡಿ.

Best Mobiles in India

English summary
The company will longer provide security updates for the operating system and is asking consumers to upgrade to Windows 10.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X