ಮೈಕ್ರೋಸಾಫ್ಟ್ ವಿಂಡೋಸ್ 8 ಡಿಸೆಂಬರ್ ಗೆ

Posted By: Varun
ಮೈಕ್ರೋಸಾಫ್ಟ್ ವಿಂಡೋಸ್ 8 ಡಿಸೆಂಬರ್ ಗೆ

ಈ ವರ್ಷದ ಡಿಸಂಬರ್ 21 ಕ್ಕೆ ಪ್ರಳಯ ಆಗುತ್ತೋ ಇಲ್ಲವೋ ಆದರೆ ವಿಂಡೋಸ್ 8 ತಂತ್ರಾಂಶ ಡಿಸಂಬರ್ ತಿಂಗಳಲ್ಲಿ ಬಿಡುಗಡೆ ಆಗೋದು ಗ್ಯಾರಂಟಿ ಎಂದು ಮೈಕ್ರೋಸಾಫ್ಟ್ ಸ್ಪಷ್ಟಪಡಿಸಿದೆ.

ಈ ವರ್ಷದ ಅಕ್ಟೋಬರ್ ತಿಂಗಳ ವೇಳೆಗೆ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದ್ದ ಮೈಕ್ರೋಸಾಫ್ಟ್ ಈಗ ಸ್ವಲ್ಪ ಮುಂದೂಡಿ, ಟಚ್ ಸ್ಕ್ರೀನ್ ಇರುವ ಸಾಧನಗಳಿಗೆ ಮೊದಲು ಬಿಡುಗಡೆ ಮಾಡಲು ಯೋಚಿಸಿದ್ದು, ಡಿಸೆಂಬರ್ ನ ಕ್ರಿಸ್ಮಸ್ ರಜೆ ಬರುವ ಹೊತ್ತಿಗೆ ಎಲ್ಲ ವರ್ಗದ ಕಂಪ್ಯೂಟರಿಗೂಹೊಂದುವಂತೆ ಹೊರತರಲಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.

ಆಪಲ್ ನ ಟ್ಯಾಬ್ಲೆಟ್ ಗಳು ಹಾಗು ಗೂಗಲ್ ನ ಆಂಡ್ರಾಯ್ಡ್ ತಂತ್ರಾಂಶವಿರುವ ಟ್ಯಾಬ್ಲೆಟ್ಟುಗಳು ಈಗಾಗಲೇ ವಿಂಡೋಸ್ ಗೆ ಹೊಡೆತ ನೀಡಿದ್ದು, ಅದರಿಂದ ಚೇತರಿಸಿಕೊಳ್ಳಲು ಮೈಕ್ರೋಸಾಫ್ಟ್ ಗೆ ಇರುವ ಅತಿ ದೊಡ್ಡ ಅವಕಾಶವೆಂದರೆ ವಿಂಡೋಸ್ 8 ತಂತ್ರಾಂಶವನ್ನು ಟ್ಯಾಬ್ಲೆಟ್ ಗಳಿಗೆ ಹೊಂದಿಸುವುದು. ಹಾಗಾಗಿ ಸಾಕಷ್ಟು ಸಮಯ ತೆಗೆದುಕೊಂಡು ಮೊದಲಿಗೆ ಟ್ಯಾಬ್ಲೆಟ್ ಗಳಿಗೆ ಹೊಂದುವಂತೆ ಸಿದ್ಧಪಡಿಸಲಾಗುತ್ತಿದ್ದು ಅದಕ್ಕಾಗಿಯೇ ಅಕ್ಟೋಬರ್ ನಿಂದ ಡಿಸೆಂಬರ್ ಗೆ ಮುಂದೂಡಲಾಗಿದೆ ಎನ್ನಲಾಗಿದೆ. ಹೀಗಾಗಿಯೇ PC ಉತ್ಪಾದಕ ಡೆಲ್ ಕೂಡ ವಿಂಡೋಸ್ 8 ಆಧಾರಿತ ಟ್ಯಾಬ್ಲೆಟ್ಲ್ಯಾಟಿಟ್ಯೂಡ್ 10 ಅನ್ನು ಬಿಡುಗಡೆ ಮಾಡಲು ಕಾತರದಿಂದ ಕಾಯುತ್ತಿದೆ.

ಟ್ಯಾಬ್ಲೆಟ್ ಗಳಲ್ಲಿ ಹೇಗೆ ಕೆಲಸಮಾಡುತ್ತೆ ಎಂಬುದನ್ನು ನೋಡಿಕೊಂಡು, ಬಳಕೆದಾರರಿಂದ ಅಭಿಪ್ರಾಯ ಸಂಗ್ರಹಿಸಿ ನಂತರ ಪೂರ್ಣ ಪ್ರಮಾಣದ ವಿಂಡೋಸ್ 8 ಬಿಡುಗಡೆಯಾಗಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot