ನಿಮ್ಮ ಹೊಸ ಲ್ಯಾಪ್‌ಟಾಪ್‌ನಲ್ಲಿ ಮೊದಲು ಈ ಕ್ರಮಗಳನ್ನು ಅನುಸರಿಸಿ.!

|

ಸ್ಮಾರ್ಟ್‌ಫೋನ್‌ಗಳು ಎಷ್ಟು ಅಗತ್ಯವೋ, ಅಷ್ಟೇ ಅಗತ್ಯವಾದ ಸ್ಥಾನವನ್ನು ಲ್ಯಾಪ್‌ಟಾಪ್‌ಗಳು ಪಡೆದುಕೊಂಡಿವೆ. ಲ್ಯಾಪ್‌ಟಾಪ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚಿನ ಕೆಲಸಗಳನ್ನು ಕಂಫರ್ಟ್‌ ಆಗಿ ಮತ್ತು ವೇಗವಾಗಿ ಮಾಡಬಹುದಾಗಿದೆ. ಲ್ಯಾಪ್‌ಟಾಪ್ ಹತ್ತು ಹಲವು ಕಾರಣಗಳಿಂದ ಅತೀ ಉಪಯುಕ್ತ ಸಾಧನ ಎನಿಸಿದ್ದು, ಸದ್ಯ ಲ್ಯಾಪ್‌ಟಾಪ್‌ ಖರೀದಿಸಿವ ಗ್ರಾಹಕರ ಸಂಖ್ಯೆಯೇನು ಕಡಿಮೆ ಇಲ್ಲ.

ನಿಮ್ಮ ಹೊಸ ಲ್ಯಾಪ್‌ಟಾಪ್‌ನಲ್ಲಿ ಮೊದಲು ಈ ಕ್ರಮಗಳನ್ನು ಅನುಸರಿಸಿ.!

ಮಾರುಕಟ್ಟೆಯಲ್ಲಿ ಹಲವು ಕಂಪನಿಗಳ ಲ್ಯಾಪ್‌ಟಾಪ್‌ಗಳು ಲಭ್ಯವಿದ್ದು, ಗ್ರಾಹಕರು ಅವುಗಳಲ್ಲಿ ಅತ್ಯುತ್ತಮ ಫೀಚರ್ಸ್‌ಗಳಿರುವ ಲ್ಯಾಪ್‌ಟಾಪ್‌ಗಳನ್ನು ಆರಿಸಿ, ವಿಚಾರಿಸಿ ಖರೀದಿಸಿರುತ್ತಾರೆ. ಖರೀದಿಯ ನಂತರ ನಿಮ್ಮ ಹೊಸ ಲ್ಯಾಪ್‌ಟಾಪ್‌ಗೆ ಅಗತ್ಯವಾಗಿ ಕೆಲವು ಆಪ್‌ಗಳನ್ನು ಮತ್ತು ಸಾಫ್ಟ್‌ವೇರಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬೇಕಾಗಿರುತ್ತದೆ. ಹಾಗಾದರೇ ಹೊಸ ಲ್ಯಾಪ್‌ಟಾಪ್‌ನಲ್ಲಿ ನೀವು ಅನುಸರಿಸಬೇಕಾದ ಕೆಲವು ಹಂತಗಳ ಬಗ್ಗೆ ಇಂದಿನ ಲೇಖನದಲ್ಲಿ ಸಲಹೆಗಳನ್ನು ನೀಡಲಾಗಿದೆ ತಿಳಿಯಲು ಮುಂದೆ ಓದಿರಿ.

ಡೇಟಾ ಟ್ರಾನ್ಸ್‌ಫರ್‌

ಡೇಟಾ ಟ್ರಾನ್ಸ್‌ಫರ್‌

ನಿಮ್ಮ ಫೋಟೊ, ವಿಡಿಯೊ, ಡಾಕ್ಯುಮೆಂಟ್, ಅಥವಾ ಇತರೆ ಯಾವುದೇ ಫೈಲ್‌ಗಳನ್ನು ಹೊಸ ಲ್ಯಾಪ್‌ಟಾಪ್‌ಗೆ ಟ್ರಾನ್ಸ್‌ಫರ್‌ ಮಾಡಿಕೊಳ್ಳಿರಿ. ಹಾಗೇ ಡ್ರಾಪ್‌ಬಾಕ್ಸ್‌ ಮತ್ತು ಗೂಗಲ್ ಡ್ರೈವ್ ಆನ್‌ಲೈನ್‌ ಸ್ಟೋರೆಜ್‌ಗಳಲ್ಲಿ ಸಂಗ್ರಹಿಸಿರುವ ನಿಮ್ಮ ಎಲ್ಲ ಬಗೆಯ ಡಾಕ್ಯುಮೆಂಟಗಳನ್ನು ಹೊಸ ಲ್ಯಾಪ್‌ಟಾಪ್‌ಗೆ ಕಾಪಿ ಮಾಡಿಕೊಳ್ಳಿ ಮತ್ತು ಸಿಂಕ್ ಮಾಡಿರಿ.

ಆಯಂಟಿ ವೈರಸ್‌ ಇನ್‌ಸ್ಟಾಲ್

ಆಯಂಟಿ ವೈರಸ್‌ ಇನ್‌ಸ್ಟಾಲ್

ನಿಮ್ಮ ಹೊಸ ಲ್ಯಾಪ್‌ಟಾಪ್‌ಗೆ ಅತ್ಯುತ್ತಮ ಆಯಂಟಿ ವೈರಸ್‌ ಇನ್‌ಸ್ಟಾಲ್ ಮಾಡಿಕೊಳ್ಳುವುದನ್ನು ಮರೆಯದಿರಿ. ಲ್ಯಾಪ್‌ಟಾಪ್‌ನಲ್ಲಿ ಇಂಟರ್ನೆಟ್‌ ಬಳಕೆಯ ವೇಳೆ ಆಯಂಟಿ ವೈರಸ್‌ಗಳು ರಕ್ಷಣೆ ಒದಗಿಸುವುದರ ಜೊತೆಗೆ ಒಟ್ಟಾರೆ ಸುರಕ್ಷತೆ ನೀಡುತ್ತದೆ. ಆನ್‌ಲೈನ್‌ನಲ್ಲಿ ಹಲವು ಉತ್ತಮ ಉಚಿತ ಆಯಂಟಿ ವೈರಸ್‌ಗಳು ಲಭ್ಯ ಇವೆ.

ಲಾಗಿನ್ ಸೆಕ್ಯುರಿಟಿ

ಲಾಗಿನ್ ಸೆಕ್ಯುರಿಟಿ

ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಕಛೇರಿಗೆ ಸಂಭಂದಿಸಿದ ಮತ್ತು ವೈಯಕ್ತಿಕ ಮಾಹಿತಿಗಳನ್ನು ಶೇಖರಿಸಿರುತ್ತಿರಿ. ಹೀಗಾಗಿ ಲ್ಯಾಪ್‌ಟಾಪ್‌ಗೆ ಲಾಗಿನ್ ಭದ್ರತೆ ಒದಗಿಸುವುದು ಮುಖ್ಯವಾಗಿರುತ್ತದೆ. ಪ್ರಸ್ತುತ ಹೊಸ ಲ್ಯಾಪ್‌ಟಾಪ್‌ ಮಾದರಿಗಳು ಫೇಸ್‌ ಲಾಗಿನ್‌ ಆಯ್ಕೆ ಮತ್ತು ಫಿಂಗರ್‌ಪ್ರಿಂಟ್ ಅಥೇಟಿಕೇಶನ್ ಆಯ್ಕೆ ಒಳಗೊಂಡಿರುತ್ತವೆ. ಇಲ್ಲದಿದ್ದರೇ ಪಾಸ್‌ವರ್ಡ್‌ ಆದರೂ ಇಟ್ಟುಕೊಳ್ಳಿ.

ಬ್ರೌಸರ್‌ ಇನ್‌ಸ್ಟಾಲ್‌ ಮಾಡಿಕೊಳ್ಳಿ

ಬ್ರೌಸರ್‌ ಇನ್‌ಸ್ಟಾಲ್‌ ಮಾಡಿಕೊಳ್ಳಿ

ಲ್ಯಾಪ್‌ಟಾಪ್‌ ನಲ್ಲಿ ಇಂಟರ್ನೆಟ್‌ ಬಳಕೆ ಮಾಡಿಕೊಳ್ಳುವುದಕ್ಕಾಗಿ ಸೂಕ್ತ ಬ್ರೌಸರ್‌ ಅನ್ನು ಇನ್‌ಸ್ಟಾನ್‌ ಮಾಡಿಕೊಳ್ಳಿ. ಗೂಗಲ್ ಕ್ರೋಮ್ ಅಥವಾ ಫೈರ್‌ಬಾಕ್ಸ್‌ ಬ್ರೌಸರ್‌ಗಳಲ್ಲಿ ನೀವು ಖಾತೆಯನ್ನು ಹೊಂದಿದ್ದರೇ ಅವುಗಳನ್ನೇ ಬಳೆಸುವುದು ಉತ್ತಮ.

ಡಿಸ್‌ಪ್ಲೇ ಸೆಟ್ಟಿಂಗ್

ಡಿಸ್‌ಪ್ಲೇ ಸೆಟ್ಟಿಂಗ್

ಬಹುತೇಕ ಲ್ಯಾಪ್‌ಟಾಪ್‌ಗಳು ಹೈ ರೆಸಲ್ಯೂಶನ್ ಸಾಮರ್ಥ್ಯದಲ್ಲಿರುವ ಜೊತೆಗ ಶಾರ್ಪ್ ಮತ್ತು ಕಲರ್‌ಫುಲ್ ಆಗಿರುತ್ತವೆ. ಹೀಗಾಗಿ ನಿಮ್ಮ ಅಗತ್ಯತೆಗೆ ಅನುಗುಣವಾಗಿ ಸೆಟ್ಟಿಂಗ್‌ ಮಾಡಿಕೊಳ್ಳಿ. ಇದರೊಂದಿಗೆ ಫಾಂಟ್, ವಾಲ್‌ಪೇಪರ್, ಇತರೆ ಡಿಸ್‌ಪ್ಲೇ ಸ್ಕೇಲಿಂಗ್ ಆಯ್ಕೆಗಳನ್ನು ಬದಲಾಯಿಸಿಕೊಳ್ಳಿರಿ.

ಆಪ್‌ಗಳಿಗೆ ಶಾರ್ಟ್‌ಕಟ್‌ ಕೀ ಸೆಟ್‌ ಮಾಡಿ

ಆಪ್‌ಗಳಿಗೆ ಶಾರ್ಟ್‌ಕಟ್‌ ಕೀ ಸೆಟ್‌ ಮಾಡಿ

ಲ್ಯಾಪ್‌ಟಾಪ್‌ನಲ್ಲಿ ಹಲವಾರು ಅಗತ್ಯ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡಿರುತ್ತಿರಾ, ಅವುಗಳನ್ನು ವೇಗವಾಗಿ ತೆರೆಯಲು ಆಪ್‌ಗಳಿಗೆ ಶಾರ್ಟ್‌ಕಟ್‌ ಕೀ ಸೆಟ್‌ ಮಾಡಿಕೊಳ್ಳಿ. ಇದರಿಂದ ಆಪ್‌ಗಳನ್ನು ಹುಡುಕುವ ಪ್ರಮೇಯ ಬರುವುದಿಲ್ಲ ಜೊತೆಗೆ ಸಮಯದ ಉಳಿತಾಯವು ಆಗುತ್ತದೆ.

ಡೆಸ್ಕ್‌ಟಾಪ್‌ ಥೀಮ್‌ ಬದಲಾಯಿಸಿ

ಡೆಸ್ಕ್‌ಟಾಪ್‌ ಥೀಮ್‌ ಬದಲಾಯಿಸಿ

ಹೊಸ ಲ್ಯಾಪ್‌ಟಾಪ್‌ ಖರೀದಿಸಿದ ಮೇಲೆ, ಅದರ ಡೆಸ್ಕ್‌ಟಾಪ್‌ಗೆ ಒಂದೊಳ್ಳೇ ಅಂದವಾಗಿ ಥೀಮ್‌ ಅನ್ನು ಸೆಟ್‌ ಮಾಡಬೇಕು ಎಂದು ಅನಿಸಿರದೇ ಇರದು. ಹೀಗಾಗಿ ಥೀಮ್‌ ಬದಲಾಯಿಸಿಕೊಳ್ಳಬಹುದಾಗಿದ್ದು, ಪರ್ಸನಲೈಜ್‌ ಸೆಟ್ಟಿಂಗ್ ನಲ್ಲಿ ನಿಮಗೆ ಇಷ್ಟವೆನಿಸುವ ಥೀಮ್‌ ಸೆಟ್‌ ಮಾಡಿಕೊಳ್ಳಿ.

Best Mobiles in India

English summary
Out of the Box Tips: Set Up Your New Laptop Like a Pro.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X