ಪ್ಯಾನ್ಟೆಲ್ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಕೇವಲ 4,999

By Varun
|
ಪ್ಯಾನ್ಟೆಲ್ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಕೇವಲ 4,999

ಫೆಬ್ ತಿಂಗಳಲ್ಲಿ ಪಾನ್ಟೆಲ್ ಹಾಗು BSNL ಸೇರಿ ಆಕಾಶ್ ಟ್ಯಾಬ್ಲೆಟ್ ಗೆ ಸವಾಲೊಡ್ಡುವಂತೆ 3,250 ರೂಪಾಯಿಯ ಟ್ಯಾಬ್ಲೆಟ್ ಒಂದನ್ನು ಬಿಡುಗಡೆ ಮಾಡಿದ್ದು ನಿಮಗೆ ನೆನಪಿರಬೇಕು.ಅದು ಬಿಡುಗಡೆ ಆಗುವ ಮುನ್ನವೆ ಆನ್ಲೈನ್ ನಲ್ಲಿ 3 ಲಕ್ಷಕ್ಕೂ ಹೆಚ್ಚು ಟ್ಯಾಬ್ಲೆಟ್ ಗಳು ಆನ್ಲೈನ್ ನಲ್ಲಿ ಬುಕ್ ಆಗಿ ಸಂಚಲನವನ್ನು ಉಂಟು ಮಾಡಿದ್ದವು.

ಆದರೆ ಬುಕ್ ಮಾಡಿದ 2 ತಿಂಗಳುಗಳ ನಂತರ ಅವು ಬುಕ್ ಆದವರಿಗೆ ತಲುಪಿದವು. ಈಗ ಆ ತಪ್ಪನ್ನು ಸರಿಪಡಿಸಿಕೊಂಡು BSNL ಹಾಗು ರೀಟೇಲ್ ಮಳಿಗೆಗಳಲ್ಲಿ ಮಾರಾಟ ಮಾಡಲು ಹೊಸ T-Pad IS701C ಹೆಸರಿನ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಒಂದನ್ನು ಬಿಡುಗಡೆ ಮಾಡಿದ್ದು, 4,999 ರೂಪಾಯಿಗೆ ಬರಲಿದೆ.

ಈ ಟ್ಯಾಬ್ಲೆಟ್ ನ ಫೀಚರುಗಳು ಈ ರೀತಿ ಇವೆ:

 • 7 ಇಂಚಿನ LCD ಕೆಪಾಸಿಟಿವ್ ಮಲ್ಟಿ ಟಚ್ ಸ್ಕ್ರೀನ್

 • 800X480 ಪಿಕ್ಸೆಲ್ ರೆಸಲ್ಯೂಶನ್.

 • ಕಾರ್ಟೆಕ್ಸ್ A8 1GHz ಪ್ರೊಸೆಸರ್

 • ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ಆಪರೇಟಿಂಗ್ ಸಿಸ್ಟಮ್

 • 512 MB ​​DDR III ರಾಮ್

 • ವೈಫೈ, 3G (USB ಡಾಂಗಲ್ ಜೊತೆ)

 • USB 2.0 ಪೋರ್ಟ್ ಮತ್ತು ಮೈಕ್ರೋ USB ಪೋರ್ಟ್

 • 0.3 ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮರಾ

 • 4GB ಆಂತರಿಕ ಮೆಮೊರಿ

 • 32GB ವರೆಗೂ ವಿಸ್ತರಿಸಬಹುದಾದ ಮೆಮೊರಿ

 • 720p HDMI ಪೋರ್ಟ್

 • 6 ಗಂಟೆಗಳ ಬ್ಯಾಟರಿಯ ಬ್ಯಾಕಪ್

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X