ಪೆಡಲ್‌ ತುಳಿಯಿರಿ ಲ್ಯಾಪ್‌ಟಾಪ್‌ ಚಾರ್ಜ್‌ ಮಾಡಿ

By Ashwath
|

ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದಂತೆ ಅದರೊಳಗಿನ ಬ್ಯಾಟರಿಯ ಶಕ್ತಿ ಕಡಿಮೆಯಾಗುವುದು ಗೊತ್ತೆಯಾಗುವುದಿಲ್ಲ.ಶಕ್ತಿ ಕಡಿಮೆಯಾದ ಮೇಲೆ ಚಾರ್ಜ್‌ ಮಾಡುವ ವೇಳೆ ವಿದ್ಯುತ್‌ ಇಲ್ಲದಿದ್ದರೆ ಆ ದಿನದ ಲ್ಯಾಪ್‌ಟಾಪ್‌ನ ಕೆಲಸ ಅರ್ಧಕ್ಕೆ ನಿಲ್ಲುತ್ತದೆ. ಆದರೆ ಇನ್ನು ಮುಂದೆ ವಿದ್ಯುತ್‌ ಇಲ್ಲದಿದ್ದರೂ ಲ್ಯಾಪ್‌ಟಾಪ್‌ನಲ್ಲಿ ನಿರಂತರವಾಗಿ ಕೆಲಸ ಮಾಡಬಹುದು.

ಅಮೆರಿಕದ ಪೆಡಲ್‌ ಪವರ್‌ ಕಂಪೆನಿ ಹೊಸ ಸೈಕಲ್‌ ಪೆಡಲ್‌ನಿಂದ ವಿದ್ಯುತ್‌ ಉತ್ಪಾದಿಸುವ ಲ್ಯಾಪ್‌ಟಾಪ್‌ ಟೇಬಲ್‌ನ್ನು ತಯಾರಿಸಿದೆ.ಈ ತಂತ್ರಜ್ಞಾನದಲ್ಲಿ ವಿದ್ಯುತ್‌ ಉತ್ಪಾದಿಸುವುದು ತುಂಬಾ ಸರಳ.ಈ ಹೊಸ ಲ್ಯಾಪ್‌‌ಟಾಪ್‌ ಟೇಬಲ್‌ನ ಕೆಳಗಡೆ ಸೈಕಲ್‌ ಮಾದರಿ ಪೆಡಲ್‌ ಇದೆ. ಈ ಪೆಡಲ್‌ನ್ನು ತುಳಿದರೆ ಆಯಿತು. ಅದರಲ್ಲಿ ಅಳವಡಿಸಿರುವ ಪುಟ್ಟ ಡೈನಮೋದಿಂದ ವಿದ್ಯುತ್‌ ಉತ್ಪಾದನೆಯಾಗಿ ಮೇಜಿನ ಮೇಲುಗಡೆ ಇರುವ ಲ್ಯಾಪ್‌ಟಾಪ್‌ಗೆ ಪೊರೈಕ್‌ಯಾಗುತ್ತದೆ.

ಈ ಪೆಡಲ್‌ ಪವರ್‌ ಟೇಬಲ್‌ನಲ್ಲಿ ಬಿಗ್‌ ರಿಗ್‌ ಮತ್ತು ಪೆಡಲ್‌ ಜೆನ್ನಿ ಎಂಬ ಎರಡು ಪ್ರತ್ಯೇಕ ಸೈಕಲಿಂಗ್‌ ಜನರೇಟರ್‌ಗಳಿವೆ.20 ಕೆ.ಜಿ ತೂಕದ ಈ ಮೇಜನ್ನು ಬಿಚ್ಚಿ ಜೋಡಿಸಿ ಸುಲಭವಾಗಿ ಒಯ್ಯಬಹುದು.ಈ ಟೇಬಲ್‌ಗೆ ಕಂಪೆನಿ 100ಡಾಲರ್‌(ಅಂದಾಜು ಆರು ಸಾವಿರ) ರೂ ನಿಗದಿ ಮಾಡಿದೆ.

ಒಬ್ಬ ಸಾಮಾನ್ಯ ವ್ಯಕ್ತಿ ನಿರಂತರವಾಗಿ 2 ಗಂಟೆ ತುಳಿದರೆ 75 ವ್ಯಾಟ್ ವಿದ್ಯುತ್‌ ಉತ್ಪಾದಿಸಬಹುದಂತೆ.ಈ 75 ವ್ಯಾಟ್ ವಿದ್ಯುತ್‌ ಮೂಲಕ ಮೂರು ಗಂಟೆಗಳ ಕಾಲ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಬಹುದಂತೆ.

ಲ್ಯಾಪ್‌ಟಾಪ್‌ ಚಾರ್ಚ್‌ ಮಾಡಲು ಅಷ್ಟೇ ಅಲ್ಲದೇ ಧಾನ್ಯಗಳಿಂದ ಕಾಳು ಕಡ್ಡಿ ಬೇರ್ಪಡಿಸಲು, ಸಣ್ಣ ಕೈಗಾರಿಕಾ ಘಟಕಗಳಲ್ಲೂ ಬಳಸಿಕೊಳ್ಳುವಂತೆ ವಿನ್ಯಾಸಮಾಡಲಾಗಿದೆ.ವಿದ್ಯುತ್‌‌ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುವುದಾಗಿ ಕಂಪೆನಿ ಹೇಳಿದೆ.

ಇದನ್ನೂ ಓದಿ: ಲ್ಯಾಪ್‌ಟಾಪ್‌ನ ಬ್ಯಾಟರಿ ಕಾಪಾಡಲು ಟಿಪ್ಸ್‌

ಪೆಡಲ್‌ ತುಳಿಯಿರಿ ಲ್ಯಾಪ್‌ಟಾಪ್‌ ಚಾರ್ಜ್‌ ಮಾಡಿ

ಪೆಡಲ್‌ ತುಳಿಯಿರಿ ಲ್ಯಾಪ್‌ಟಾಪ್‌ ಚಾರ್ಜ್‌ ಮಾಡಿ

ಪೆಡಲ್‌ ಪವರ್‌ ಲ್ಯಾಪ್‌ಟಾಪ್‌ ಟೇಬಲ್

ಪೆಡಲ್‌ ಜೆನ್ನಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X