ಸ್ಯಾಮ್ಸಂಗ್ ಸ್ಮಾರ್ಟ್ ಟಿವಿ ಭಾರತಕ್ಕೆ ಪಾದಾರ್ಪಣೆ

By Varun
|

ಸ್ಯಾಮ್ಸಂಗ್ ಸ್ಮಾರ್ಟ್ ಟಿವಿ ಭಾರತಕ್ಕೆ ಪಾದಾರ್ಪಣೆ
ಜಗತ್ ಪ್ರಸಿದ್ಧ ಎಲೆಕ್ಟ್ರಾನಿಕ್ ಉತ್ಪಾದಕ ಸ್ಯಾಮ್ಸಂಗ್, ನೆನ್ನೆ ತಾನೇ ಬಹುನಿರೀಕ್ಷಿತ ಸ್ಯಾಮ್ಸಂಗ್ ಗ್ಯಾಲಕ್ಸಿ S3 ಫೋನ್ ಅನ್ನು ಬಿಡುಗಡೆ ಮಾಡಿದ ಸುದ್ದಿಯನ್ನು ನಮ್ಮ ಕನ್ನಡ ಗಿಜ್ಬಾಟ್ ನಲ್ಲಿ ಓದಿದ್ದೀರಿ.ಈಗ ಸ್ಯಾಮ್ಸಂಗ್, ES8000, ES7500 ಹಾಗು ಪ್ಲಾಸ್ಮ E8000 ಹೆಸರಿನ 3 ವಿಭಿನ್ನ ಸ್ಮಾರ್ಟ್ ಟಿವಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಸ್ಮಾರ್ಟ್ ಇಂಟರಾಕ್ಷನ್ ತಂತ್ರಜ್ಞಾನವಿರುವ ಈ ಸ್ಮಾರ್ಟ್ ಟಿವಿಗಳ ವಿಶೇಷವೇನೆಂದರೆ ಇದರಲ್ಲಿ ಧ್ವನಿ ಗ್ರಹಣಮತ್ತು ನಿಯಂತ್ರಣ ತಂತ್ರಜ್ಞಾನ, ಮುಖ ಗುರುತು ಹಿಡಿಯುವ ತಂತ್ರಜ್ಞಾನ ಹಾಗು ಸಂಜ್ಞೆಯ ಮೂಲಕ ನಿಯಂತ್ರಿಸಬಹುದಾದ ತಂತ್ರಜ್ಞಾನಗಳೂ ಅಡಕವಾಗಿವೆ. ಇದಕ್ಕಾಗಿಯೇ ಆಂತರಿಕ ಕ್ಯಾಮರಾ ಹಾಗು ಮೈಕ್ರೋಫೋನುಗಳನ್ನು ಅಳವಡಿಸಲಾಗಿದೆ, ಈ ಟಿವಿಗಳಲ್ಲಿ. ಇದಷ್ಟೇ ಅಲ್ಲದೆ ಬಳಕೆದಾರರಿಗೆ ವಿಧವಿಧವಾದ ವಿಷಯಾಧಾರಿತ ಮಾಹಿತಿಗಳ ಸೇವೆ, 1,500 ಕ್ಕೂ ಹೆಚ್ಚು ಆಪ್ಸ್ ಗಳೂ ಈ ಟಿವಿಗಳ ಜೊತೆ ಬರುತ್ತದೆ.

ಶಕ್ತಿಶಾಲಿಯಾದ ಡ್ಯುಯಲ್ ಕೋರ್ ಪ್ರೋಸೆಸರ್ ನಿಂದ ನಿರ್ಮಿತವಾಗಿರುವ ಈ ಸ್ಮಾರ್ಟ್ ಟಿವಿಗಳು, ಕಂಪ್ಯೂಟರ್ ನಂತೆಯೇ ಕಾರ್ಯ ನಿರ್ವಹಿಸುತ್ತದೆ. ಕ್ಲೌಡ್ ಶೇರಿಂಗ್ ಸೌಲಭ್ಯವೂ ಇದ್ದು ನೀವು ಮಾಹಿತಿಯನ್ನು ಅಲ್ಲಿ ಶೇಖರಿಸಿ ಇಡಬಹುದಾಗಿದೆ. ಈ ಸ್ಮಾರ್ಟ್ ಟಿವಿಗಳ ಬೆಲೆ 37,700 ರಿಂದ ಶುರುವಾಗಿ 2,73,000.ರೂಪಾಯಿ ವರೆಗೂ ಇದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X