Subscribe to Gizbot

ನಿಮ್ಮ ಅಂಗೈಗೆ ಹೊಂದಿಕೊಳ್ಳುವ ಸಣ್ಣ ಕಂಪ್ಯೂಟರ್‌ಗಳು

Written By:

ವಿಶ್ವದ ಪ್ರಥಮ ಕಂಪ್ಯೂಟರ್ ನಿರ್ಮಾಣವಾದಂದಿನಿಂದ ಕಂಪ್ಯೂಟರ್‌ಗಳು ಸಣ್ಣ ಸಣ್ಣದಾಗಿ ತಮ್ಮ ವಿನ್ಯಾಸವನ್ನು ಪಡೆದುಕೊಳ್ಳುತ್ತಿವೆ. ನಿಮ್ಮ ಹಸ್ತಕ್ಕೆ ಸರಿಹೊಂದುವ ಕಂಪ್ಯೂಟರ್ ಆವಿಷ್ಕಾರದ ಕಾಲ ಇದೀಗ ಒದಗಿ ಬಂದಿದ್ದು ಆ ಸಣ್ಣ ಕಂಪ್ಯೂಟರ್‌ಗಳು ಹೇಗಿವೆ ಮತ್ತು ಅವುಗಳ ಗಾತ್ರಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ.

ಓದಿರಿ: ಸ್ಮಾರ್ಟ್‌ಫೋನ್ ಬ್ಯಾಟರಿ ಹಂತಕ ಅಪ್ಲಿಕೇಶನ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗಿಗಾಬೈಟ್ಸ್ ಬ್ರಿಕ್ಸ್

ಗಿಗಾಬೈಟ್ಸ್ ಬ್ರಿಕ್ಸ್

ಬ್ರಿಕ್ಸ್ ಇಂಟೆಲ್ ಸೆಲರಾನ್ ಪ್ರೊಸೆಸರ್‌ನೊಂದಿಗೆ ಬಂದಿದ್ದು ಹೈಯರ್ ಎಂಡ್ ಇಂಟೆಲ್ ಕೋರ್ i5 ಅನ್ನು ಒಳಗೊಂಡಿದೆ. ಎಚ್‌ಡಿಎಮ್ಐ ಹಾಗೂ ಮಿನಿ ಡಿಸ್‌ಪ್ಲೇಯನ್ನು ಇದು ಪಡೆದುಕೊಂಡಿದ್ದು, ಪೋರ್ಟ್ ವೀಡಿಯೊ ಔಟ್‌ಪುಟ್ಸ್ ಅನ್ನು ಹೊಂದಿದೆ ನಾಲ್ಕು 3.0 ಪೋರ್ಟ್‌ಗಳನ್ನು ಒಳಗೊಂಡಿದ್ದು, 16 ಜಿಬಿ ಮೆಮೊರಿಯನ್ನು ಹೊಂದಿದೆ.

ಇಂಟೆಲ್ ಕೋರ್

ಇಂಟೆಲ್ ಕೋರ್

ಅಲಿನ್ ವೆರ್ ಆಲ್ಫಾ ಇಂಟೆಲ್ ಕೋರ್ i3, i5, ಅಥವಾ i7 ಪ್ರೊಸೆಸರ್‌ನೊಂದಿಗೆ ಬಂದಿದ್ದು, 4ಜಿಬಿ ಅಥವಾ 8ಜಿಬಿ RAM ಅನ್ನು ಈ ಕಂಪ್ಯೂಟರ್‌ನಲ್ಲಿ ನಿಮಗೆ ಕಾಣಬಹುದು. 860+ 2 ಜಿಬಿ ಗ್ರಾಫಿಕ್ಸ್ ಕಾರ್ಡ್ಸ್‌ ಅಂತೆಯೇ 500 ಜಿಬಿ, 1 ಟಿಬಿ, ಅಥವಾ 2ಟಿಬಿ ಸಾಟಾ ಹಾರ್ಡ್ ಡ್ರೈವ್ ಅನ್ನು ಒಳಗೊಂಡಿದೆ.

ಹೆಚ್ಚು ಹಗುರ

ಹೆಚ್ಚು ಹಗುರ

ಇದು ಹೆಚ್ಚು ಹಗುರವಾಗಿದ್ದು ಲೀನಕ್ಸ್‌ನಲ್ಲಿ ಚಾಲನೆಯಾಗುತ್ತದೆ.

ಬ್ಲ್ಯೂಟೂತ್, ವೈಫೈ

ಬ್ಲ್ಯೂಟೂತ್, ವೈಫೈ

ಚಿಪ್ 1GHZ ಅಲ್‌ವಿನ್ನರ್ ಆರ್8 ಕೋರ್ಟೆಕ್ಸ್ ಏ8 ಪ್ರೊಸೆಸರ್‌ನೊಂದಿಗೆ ಚಾಲನೆಗೊಳ್ಳುತ್ತಿದ್ದು ಮಾಲಿ 400 ಗ್ರಾಫಿಕ್ಸ್, 512 ಎಮ್‌ಬಿ RAM, 4 ಜಿಬಿ ಸಂಗ್ರಹಣೆ ಮತ್ತು ಬಿಲ್ಟ್ ಇನ್ ಬ್ಲ್ಯೂಟೂತ್, ವೈಫೈ ಅನ್ನು ಒಳಗೊಂಡಿದೆ.

ಇಂಟೆಲ್ ಎನ್‌ಯುಸಿ

ಇಂಟೆಲ್ ಎನ್‌ಯುಸಿ

ಇಂಟೆಲ್ ಎನ್‌ಯುಸಿ ಇಂಟೆಲ್ ಕೋರ್ i3, i5, ಅಥವಾ i7 ಪ್ರೊಸೆಸರ್‌ನೊಂದಿಗೆ ಬಂದಿದ್ದು ಯುಎಸ್‌ಬಿ 3.0, HDMI, ಮಿನಿ HDMI, ಅಥವಾ ಡಿಸ್‌ಪ್ಲೇ ಪೋರ್ಟ್ ಅನ್ನು ಒಳಗೊಂಡಿದೆ.

ಪೆಂಟಿಯಮ್ ಪ್ರೊಸೆಸರ್

ಪೆಂಟಿಯಮ್ ಪ್ರೊಸೆಸರ್

ಇಂಟೆಲ್‌ನಿಂದ ಪೆಂಟಿಯಮ್ ಪ್ರೊಸೆಸರ್ ಅನ್ನು ಈ ಕಂಪ್ಯೂಟರ್ ಪಡೆದುಕೊಂಡಿದ್ದು 8 ಜಿಬಿ ಮೆಮೊರಿಯನ್ನು ಒಳಗೊಂಡಿದೆ. ವೈರ್‌ಲೆಸ್ ಚಾರ್ಜಿಂಗ್ ಕೂಡ ಇದು ಹೊಂದಿದೆ. ಇಂಟಿಗ್ರೇಟೆಡ್ ಸ್ಪೀಕರ್ ಅನ್ನು ಇದು ಒಳಗೊಂಡಿದ್ದು 500 ಜಿಬಿ/1 ಟಿಬಿ ಹಾರ್ಡ್ ಡ್ರೈವ್ ಮಾಡ್ಯುಲ್‌ಗಳನ್ನು ಇದು ಪಡೆದುಕೊಂಡಿದೆ.

ಏಸಸ್ ಕ್ರೋಮ್ ಬಾಕ್ಸ್

ಏಸಸ್ ಕ್ರೋಮ್ ಬಾಕ್ಸ್

ಏಸಸ್ ಕ್ರೋಮ್ ಬಾಕ್ಸ್ 4.88x4.88x1.65 ಇಂಚುಗಳನ್ನು ಪಡೆದುಕೊಂಡಿದ್ದು $160 ಬೆಲೆಯಲ್ಲಿದೆ. ವಿಂಡೋಸ್ ಸಾಫ್ಟ್‌ವೇರ್ ಕಾಂಪಿಟೇಬಲ್ ಆಗದೇ ಇದ್ದರೂ ಗೂಗಲ್ ಓಎಸ್ ಇದರಲ್ಲಿ ಚಾಲನೆಗೊಳ್ಳಲಿದೆ.

ಎಚ್‌ಪಿ ಸ್ಟ್ರೀಮ್ ಮಿನಿ ಪಿಸಿ

ಎಚ್‌ಪಿ ಸ್ಟ್ರೀಮ್ ಮಿನಿ ಪಿಸಿ

ಎಚ್‌ಪಿ ಸ್ಟ್ರೀಮ್ ಮಿನಿ ಪಿಸಿ ಮಾಡೆಸ್ಟ್ ಇಂಟೆಲ್ ಸೆಲರಾನ್ 2957U ಪ್ರೊಸೆಸರ್ ಅನ್ನು ಒಳಗೊಂಡಿದ್ದು, 2 ಜಿಬಿ ಮೆಮೊರಿಯನ್ನು ಪಡೆದುಕೊಂಡಿದೆ. 32 ಜಿಬಿ M.2 SSD ಇದರಲ್ಲಿದೆ. ವಿಂಡೋಸ್ 8.1 ಇದರಲ್ಲಿ ಚಾಲನೆಯಾಗುತ್ತಿದೆ. 5.73 x 5.70 x 2.06 ಇಂಚುಗಳ ಗಾತ್ರವನ್ನು ಇದು ಹೊಂದಿದ್ದು $180 ಇದಕ್ಕಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see Tiny computers that fit the palm of hand.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot