ಭಾರತದಲ್ಲಿ ಡಿಸೆಂಬರ್‌ನಲ್ಲಿ ಖರೀದಿಸಬಹುದಾದ ಟಾಪ್‌ 5 ಬೆಸ್ಟ್‌ ಲ್ಯಾಪ್‌ಟಾಪ್‌ಗಳು

ಉತ್ತಮ ಫೀಚರ್, ಉತ್ತಮ ಬ್ರ್ಯಾಂಡ್‌, ಅತ್ಯಾಕರ್ಷಕ ವಿನ್ಯಾಸ ಇರುವ 2016 ಟಾಪ್‌ 5 ಲ್ಯಾಪ್‌ಟಾಪ್‌ಗಳು ಯಾವುವು ಎಂದು ತಿಳಿಯಿರಿ.

By Suneel
|

ಬರುವ ಹೊಸ ವರ್ಷದೊಳಗೆ ಒಂದು ಲ್ಯಾಪ್‌ಟಾಪ್‌(Laptops) ಖರೀದಿಸಿಬಿಡಬೇಕು. ಒಳ್ಳೆ ಬ್ರ್ಯಾಂಡ್, ಅತೀ ಮುಖ್ಯವಾದ ಫೀಚರ್‌ಗಳು ಹಾಗೆ ಬೆಲೆಯು ಸಹ ಸ್ವಲ್ಪ ಕಡಿಮೆ ಇರಬೇಕು. ಈ ರೀತಿ ಚಿಂತಿಸುತ್ತಾ ಹೊಸ ವರ್ಷದಲ್ಲಿ ಲ್ಯಾಪ್‌ಟಾಪ್‌ ಖರೀದಿಸಲು ಹಲವು ಜನರು ಪ್ಲಾನ್‌ ಮಾಡುತ್ತಿರುತ್ತಾರೆ. ಅಂತಹವರಿಗಾಗಿಯೇ ಗಿಜ್‌ಬಾಟ್‌ ಇಂದು 2016 ಟಾಪ್‌ 5 ಲ್ಯಾಪ್‌ಟಾಪ್‌ಗಳ ಬಗ್ಗೆ ಸಲಹೆ ನೀಡುತ್ತಿದೆ.

ನೀವು ಬಯಸುವ ಉತ್ತಮ ಬ್ರ್ಯಾಂಡ್‌, ಅತೀ ಕಡಿಮೆ ಬೆಲೆಯಲ್ಲಿ, ಅತ್ಯುತ್ತಮ ಫೀಚರ್‌ಗಳನ್ನು ಹೊಂದಿರುವ ಬಜೆಟ್ ಲ್ಯಾಪ್‌ಟಾಪ್‌, ಮೈನ್‌ಸ್ಟ್ರೀಮ್ ಲ್ಯಾಪ್‌ಟಾಪ್‌, ಅಲ್ಟ್ರಾಬುಕ್ ಲ್ಯಾಪ್‌ಟಾಪ್‌ ಮತ್ತು ಬ್ಯುಸಿನೆಸ್ ಲ್ಯಾಪ್‌ಟಾಪ್‌ಗಳು ಯಾವುವು ಎಂದು ಇಲ್ಲಿ ತಿಳಿಯಬಹುದು. ಹಾಗೆ ಅವುಗಳ ವಿಶೇಷ ಫೀಚರ್‌ಗಳನ್ನು ಸಹ ತಿಳಿಯಬಹುದು.

ಆ್ಯಪಲ್ ಮ್ಯಾಕ್ ಬುಕ್ಕಿನಲ್ಲಿ ಹಿಡನ್ ಫೋಲ್ಡರ್ ತೆರೆಯುವುದು ಹೇಗೆ?

 ಡೆಲ್‌ ಎಕ್ಸ್‌ಪಿಎಸ್ 13 (Dell XPS 13)

ಡೆಲ್‌ ಎಕ್ಸ್‌ಪಿಎಸ್ 13 (Dell XPS 13)

'ಡೆಲ್‌ ಎಕ್ಸ್‌ಪಿಎಸ್ 13' ಜಗತ್ತಿನಾದ್ಯಂತ ಹೆಚ್ಚು ಪ್ರಖ್ಯಾತ ಲ್ಯಾಪ್‌ಟಾಪ್‌ ಎಂಬ ಹೆಗ್ಗಳಿಕೆ ಪಡೆದಿದ್ದು, ಇಂದು ಭಾರತದಲ್ಲೂ ಸಹ ತನ್ನ ಗೌರವ ಮುಂದುವರೆಸುತ್ತಿದೆ. ಲ್ಯಾಪ್‌ಟಾಪ್‌ ಎಕ್ಸ್‌ಫಿನಿಟಿ ಡಿಸ್‌ಪ್ಲೇ ಹೊಂದಿದ್ದು 2016 ಬೆಸ್ಟ್‌ ಲ್ಯಾಪ್‌ಟಾಪ್‌. ಲ್ಯಾಪ್‌ಟಾಪ್‌ ಮಷಿನ್ ಅಲ್ಯೂಮಿನಿಯಂನಿಂದ ಅಭಿವೃದ್ದಿಗೊಂಡಿತ್ತು, ಜೊತೆಗೆ ಕಾರ್ಬನ್‌ ಫೈಬರ್ ಪಾಮ್‌ ಮತ್ತು ಗ್ಲಾಸ್‌ ಟ್ರ್ಯಾಕ್‌ಪ್ಯಾಡ್ ಹೊಂದಿದೆ.

ಲ್ಯಾಪ್‌ಟಾಪ್‌ 5 ನೇ ಜೆನೆರೇಷನ್ ಇಂಟೆಲ್ ಕೋರ್ i5 ಪ್ರೊಸೆಸರ್, ಮತ್ತು ಡೆಲ್‌ ಎಕ್ಸ್‌ಪಿಎಸ್ ವಿಂಡೋಸ್ ಚಾಲಿತವಾಗಿದೆ. ಭಾರತದಲ್ಲಿ ಪ್ರಸ್ತುತದ ಬೆಸ್ಟ್‌ ಡೆಲ್‌ ಎಕ್ಸ್‌ಪಿಎಸ್ 13 ಲ್ಯಾಪ್‌ಟಾಪ್‌ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ರೂ.1,28,350 ಕ್ಕೆ ಖರೀದಿಸಬಹುದು.

ಎಚ್‌ಪಿ ಸ್ಪೆಕ್ಟರ್ 360 (HP Spectre 360)

ಎಚ್‌ಪಿ ಸ್ಪೆಕ್ಟರ್ 360 (HP Spectre 360)

ತುಂಬಾ ಸ್ಲಿಮ್‌ ಮತ್ತು ಲೇಟೆಸ್ಟ್ ಜೆನೆರೇಷನ್‌ ಹಾರ್ಡ್‌ವೇರ್‌ನಿಂದ 2016 ರ ಬೆಸ್ಟ್‌ ಲ್ಯಾಪ್‌ಟಾಪ್‌ ಎಂದು 'ಎಚ್‌ಪಿ ಸ್ಪೆಕ್ಟರ್' ಹೆಸರು ಗಳಿಸಿದೆ. ಉತ್ತಮ ವಿನ್ಯಾಸದಲ್ಲಿ ಅಭಿವೃದ್ದಿಪಡಿಸಲಾದ ಸ್ಪೆಕ್ಟರ್ 360, ಡೆಲ್‌ ಎಕ್ಸ್‌ಪಿಎಸ್ 13 ಡಿಸ್‌ಪ್ಲೇ ಅನ್ನು ಸರಿಸುಮಾರು ಹೊಂದಿದೆ. 13.3 ಟಚ್ ಸ್ಕ್ರೀನ್ ಡಿಸ್‌ಪ್ಲೇ ಜೊತೆಗೆ 2560x1440 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಡಿಸ್‌ಪ್ಲೇ ಅನ್ನು ಟ್ಯಾಬ್ಲೆಟ್‌ ರೀತಿಗೆ ಪೂರ್ಣವಾಗಿ ರೋಟೇಟ್‌ ಮಾಡಬಹುದು.

ಎಚ್‌ಪಿ ಸ್ಪೆಕ್ಟರ್ 360 ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ರೂ.1,34,900 ಕ್ಕೆ ಖರೀದಿಸಬಹುದು.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಪಲ್‌ ಮ್ಯಾಕ್‌ಬುಕ್‌ ಏರ್‌ 13 (Apple MacBook, Air 13)

ಆಪಲ್‌ ಮ್ಯಾಕ್‌ಬುಕ್‌ ಏರ್‌ 13 (Apple MacBook, Air 13)

ಮೇಲೆ ತಿಳಿಸಿದ ಎರಡು ಲ್ಯಾಪ್‌ಟಾಪ್‌ಗಳಿಗಿಂತ ಅತಿ ಕಡಿಮೆ ಬೆಲೆಯಲ್ಲಿ 'ಆಪಲ್‌ ಮ್ಯಾಕ್‌ಬುಕ್‌ ಏರ್‌ 13 ' ಲ್ಯಾಪ್‌ಟಾಪ್‌ ಖರೀದಿಸಬಹುದು. ಆಫಲ್‌ ಮ್ಯಾಕ್‌ಬುಕ್‌ ಸದಾಕಾಲ ಪ್ರಖ್ಯಾತವಾಗೇ ಇರುತ್ತದೆ. 5 ನೇ ಜೆನೆರೇಷನ್ ಇಂಟೆಲ್ ಕೋರ್ i5 ಪ್ರೊಸೆಸರ್ ಜೊತೆಗೆ 4GB RAM ಮತ್ತು 256GB ಪಿಸಿ ಫ್ಲ್ಯಾಶ್‌ ಸ್ಟೋರೇಜ್‌ ಹೊಂದಿದೆ. ಅತ್ಯುತ್ತಮವಾದ ಕೀಬೋರ್ಡ್ ಮತ್ತು ಟ್ರ್ಯಾಕ್‌ಪ್ಯಾಡ್‌ ಅನ್ನು ಆಫರ್‌ ಮಾಡುತ್ತಿದ್ದು, ಒಂದು ಬಾರಿ ಚಾರ್ಜ್‌ ಮಾಡುವುದರಿಂದ 11 ಗಂಟೆಗಳ ಸಮಯ ಬ್ಯಾಟರಿ ಸಾಮರ್ಥ್ಯ ಒದಗಿಸುತ್ತದೆ.

ಆಪಲ್‌ ಮ್ಯಾಕ್‌ಬುಕ್‌ ಏರ್‌ 13 ಅನ್ನು ಅಮೆಜಾನ್‌ನಲ್ಲಿ 63,999 ರೂಗೆ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ 69,000 ರೂಗೆ ಖರೀದಿಸಬಹುದು.

 ಆಸಸ್ UX305LA-FB055T (Asus UX305LA-FB055T)

ಆಸಸ್ UX305LA-FB055T (Asus UX305LA-FB055T)

UX305FA, ಲ್ಯಾಪ್‌ಟಾಪ್‌ ಫ್ಯಾನ್‌ಲೆಸ್ ಕೋರ್ ಎಂ ಪ್ರೊಸೆಸರ್ ಚಾಲಿತ ಫೀಚರ್ ಹೊಂದಿದೆ. ಆಸಸ್ 2016 ರ ಟಾಪ್‌ 10 ಉತ್ತಮ ಲ್ಯಾಪ್‌ಟಾಪ್‌ಗಳ ಪಟ್ಟಿಗೆ ಆಸಸ್ UX305LA-FB055T ಸೇರಿಸಿದೆ. ಇದು 5 ನೇ ಜೆನೆರೇಷನ್ ಇಂಟೆಲ್ ಕೋರ್ i7 ಪ್ರೊಸೆಸರ್ ಜೊತೆಗೆ 8GB RAM ಹೊಂದಿದೆ. 13.3 ಇಂಚಿನ ಡಿಸ್‌ಪ್ಲೇ ಜೊತೆಗೆ 3200 x 1800p ರೆಸಲ್ಯೂಶನ್ ಹೊಂದಿದೆ. ಆನ್‌ ಬೋರ್ಡ್ 6 ಸೆಲ್‌ ಬ್ಯಾಟರಿ ಹೊಂದಿದ್ದು, 12 ಗಂಟೆಗಳ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಸಂಪೂರ್ಣ ಲ್ಯಾಪ್‌ಟಾಪ್ ಕೇವಲ 1.3kg ತೂಕ ಹೊಂದಿದೆ ಎಂದು ಆಸಸ್ ಹೇಳಿದೆ.

'ಆಸಸ್ UX305LA-FB055T' ಲ್ಯಾಪ್‌ಟಾಪ್‌ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ರೂ.93333 ಕ್ಕೆ ಖರೀದಿಸಬಹುದು.

ಎಚ್‌ಪಿ ಎನ್‌ವಿ 14-joo8tx (HP Envy 14-joo8tx)

ಎಚ್‌ಪಿ ಎನ್‌ವಿ 14-joo8tx (HP Envy 14-joo8tx)

'ಎಚ್‌ಪಿ ಎನ್‌ವಿ 14-joo8tx' ಸೀರೀಸ್‌ನ ಲ್ಯಾಪ್‌ಟಾಪ್‌ ಅತ್ಯುತ್ತಮ ಬ್ಯಾಲೆನ್ಸ್ ಹೊಂದಿದೆ. 14 ಇಂಚಿನ ಲ್ಯಾಪ್‌ಟಾಪ್‌ 2kg ತೂಕವಿದೆ. ಇಂಟೆಲ್‌ ಕೋರ್ i7 ಪ್ರೊಸೆಸರ್ ಜೊತೆಗೆ 12GB RAM ಹೊಂದಿದೆ. ಎನ್ವಿಡಿಯಾ ಜೀಫೋರ್ಸ್ GTX 950M 4GB DDR3 GPU ಗ್ರಾಫಿಕ್ಸ್ ಸಾಮರ್ಥ್ಯ ಹೊಂದಿದ್ದು, 1TB ಹಾರ್ಡ್‌ಡಿಸ್ಕ್‌ ಡ್ರೈವ್ ಹೊಂದಿದೆ.
'ಎಚ್‌ಪಿ ಎನ್‌ವಿ 14-joo8tx' ಲ್ಯಾಪ್‌ಟಾಪ್‌ ಅನ್ನು ಸ್ನಾಪ್‌ಡೀಲ್‌ನಲ್ಲಿ ರೂ.86,990 ಕ್ಕೆ ಖರೀದಿಸಬಹುದು.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Top 5 Best Laptops to Buy in India for December 2016. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X