Subscribe to Gizbot

ಆ್ಯಪಲ್ ಮ್ಯಾಕ್ ಬುಕ್ಕಿನಲ್ಲಿ ಹಿಡನ್ ಫೋಲ್ಡರ್ ತೆರೆಯುವುದು ಹೇಗೆ?

Written By:

ಎಲ್ಲಾ ಆಪರೇಟಿಂಗ್ ವ್ಯವಸ್ಥೆಗಳ ರೀತಿಯಲ್ಲಿಯೇ ಆ್ಯಪಲ್ ಮ್ಯಾಕ್ ಒ.ಎಸ್ ನಲ್ಲಿ ಕೂಡ ಸೂಕ್ಷ್ಮ ಮತ್ತು ಖಾಸಗಿ ಮಾಹಿತಿಯನ್ನು ಸಂರಕ್ಷಿಸಲು ಫೋಲ್ಡರನ್ನು ಕಾಣಿಸದಂತೆ ಮಾಡಬಹುದು. ಆದರೆ ಹೈಡ್ ಮಾಡಿದ ಫೋಲ್ಡರನ್ನು ಮತ್ತೆ ಅನ್ ಹೈಡ್ ಮಾಡುವುದು ಮ್ಯಾಕ್ ಬುಕ್ಕಿನಲ್ಲಿ ಕಷ್ಟದ ಕೆಲಸ.

ಆ್ಯಪಲ್ ಮ್ಯಾಕ್ ಬುಕ್ಕಿನಲ್ಲಿ ಹಿಡನ್ ಫೋಲ್ಡರ್ ತೆರೆಯುವುದು ಹೇಗೆ?

ತಲೆ ಕೆಡಿಸಿಕೊಳ್ಳಬೇಡಿ, ಇದಕ್ಕಿರುವ ಪರಿಹಾರವನ್ನು ನಾವಿಲ್ಲಿ ತಿಳಿಸಿದ್ದೀವಿ. ಹಿಡನ್ ಫೋಲ್ಡರನ್ನು ತೆರೆಯಲು ನೀವು ಮಾಡಬೇಕಾದ ಕೆಲವು ಕೆಲಸಗಳನ್ನಿಲ್ಲಿ ಪಟ್ಟಿ ಮಾಡಿದ್ದೀವಿ, ನೋಡಿ.

ಓದಿರಿ: ಟಾಟಾ ಡೊಕೊಮೊ ಗ್ರಾಹಕರು ಅನ್‌ಲಿಮಿಟೆಡ್‌ ಉಚಿತ 3G ಡಾಟಾ ಪಡೆಯುವುದು ಹೇಗೆ?

ಆ್ಯಪಲ್ ಮ್ಯಾಕ್ ಬುಕ್ಕಿನಲ್ಲಿ ಹಿಡನ್ ಫೋಲ್ಡರ್ ತೆರೆಯುವುದು ಹೇಗೆ?

ವಿಧಾನ 1: ಗೋ ಮೆನು ಉಪಯೋಗಿಸಿ.

ಹಿಡನ್ ಫೋಲ್ಡರುಗಳನ್ನು ತೆರೆಯಲು ಮೊದಲು ಫೈಂಡರಿನಲ್ಲಿರುವ 'ಗೋ' ಮೆನುಗೆ ಹೋಗಿ 'ಗೋ ಟು ಫೋಲ್ಡರ್' ಮೇಲೆ ಕ್ಲಿಕ್ಕಿಸಿ.

ಈಗ ಹಿಡನ್ ಫೋಲ್ಡರ್ ನ ಪಾಥ್ ಹಾಕಿ. ಉದಾಹರಣೆಗೆ, ಗಿಜ್ಬಾಟ್ ಎನ್ನುವ ಫೋಲ್ಡರನ್ನು ತೆರೆಯಬೇಕಿದ್ದರೆ ~/Dezktop/gizbot ಎಂದು ಟೈಪಿಸಿ. ನಿಮ್ಮ ಹಿಡನ್ ಫೋಲ್ಡರ್ ಒಂದು ವೇಳೆ ಡಾಕ್ಯುಮೆಂಟ್ಸ್ ನಲ್ಲಿದ್ದರೆ, ~/Documents/gizbot ಎಂದು ಟೈಪಿಸಿ. ಅಷ್ಟೇ!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆ್ಯಪಲ್ ಮ್ಯಾಕ್ ಬುಕ್ಕಿನಲ್ಲಿ ಹಿಡನ್ ಫೋಲ್ಡರ್ ತೆರೆಯುವುದು ಹೇಗೆ?

ವಿಧಾನ 2: ಟರ್ಮಿನಲ್ ಉಪಯೋಗಿಸಿ.

ನಿಮ್ಮ ಫೋಲ್ಡರ್ ಇರುವ ಜಾಗ ನಿಮಗೆ ಗೊತ್ತಿಲ್ಲದೇ ಹೋದರೆ ಈ ವಿಧಾನವನ್ನು ಪಾಲಿಸಿ. ಟರ್ಮಿನಲ್ ತೆರೆಯಿರಿ ಮತ್ತು ಕೆಳಗೆ ಈ ಕಮ್ಯಾಂಡನ್ನು ಬರೆಯಿರಿ.

defaults write com.apple.finder

AppleShowallfiles YES.

killall finder

ಸೂಚನೆ: ಒಂದು ಸಾರಿಗೆ ಒಂದು ಕಮ್ಯಾಂಡನ್ನು ಮಾತ್ರ ಉಪಯೋಗಿಸಿ ಮತ್ತು ಪ್ರತಿ ಬಾರಿ ಎಂಟರ್ ಒತ್ತಿರಿ. ಒಮ್ಮೆ ಇದನ್ನು ಮಾಡಿದ ಮೇಲೆ, ನಿಮ್ಮ ಫೈಂಡರ್ ಒಮ್ಮೆ ಮರೆಯಾಗಿ ಮತ್ತೆ ಮೂಡುತ್ತದೆ. ನಿಮ್ಮ ಫೈಂಡರ್ ಮತ್ತೆ ಮೂಡಿದ ನಂತರ ಎಲ್ಲಾ ಹಿಡನ್ ಫೋಲ್ಡರ್ ಗಳು ಕಾಣಿಸುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Read more about:
English summary
Just like any other operating system, Apple's macOS also allows its users to hide the folders with sensitive and personal information. However, it's not as easy as it is on other operating systems to unhide them on the Mac.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot