Subscribe to Gizbot

10,000 ರೂ.ದರದ ಲೇಟೆಸ್ಟ್‌ ಮೈಕ್ರೋಮ್ಯಾಕ್ಸ್‌ ಟ್ಯಾಬ್ಲೆಟ್ಸ್‌

Posted By: Vijeth
<ul id="pagination-digg"><li class="next"><a href="/computer/top-5-latest-micromax-android-ics-tablets-below-rs-10000-2-2.html">Next »</a></li></ul>

10,000 ರೂ.ದರದ ಲೇಟೆಸ್ಟ್‌ ಮೈಕ್ರೋಮ್ಯಾಕ್ಸ್‌ ಟ್ಯಾಬ್ಲೆಟ್ಸ್‌
ಭಾರತೀಯ ಮೂಲದ ತಾಂತ್ರಿಕ ಉಪಕರಣಗಳ ತಯಾರಿಕಾ ಸಂಸ್ಥೆಯಾದ ಮೈಕ್ರೋಮ್ಯಾಕ್ಸ್‌ ಭಾರತೀಯ ಟ್ಯಾಬ್ಲೆಟ್‌ ಮಾರುಕಟ್ಟೆಯಲ್ಲಿ 2012 ರ 2Q ನ ಅಂತ್ಯದ ವೇಳೆಗೆ ಉಳಿದ ಎಲ್ಲಾ ಟ್ಯಾಬ್ಲೆಟ್‌ ತಯಾರಕರು ಗಳಿಗಿಂತಲೂ ಶೇ.8.4% ರಷ್ಟು ಅಧಿಕ ಶೇರ್ಸ್‌ಗಳನ್ನು ಪಡೆಯುವ ಮೂಲಕ ದಿಗ್ಗಜ ಸಂಸ್ಥೆಗಳಾದ ಸ್ಯಾಮ್ಸಂಗ್‌ ಹಾಗೂ ಆಪಲ್‌ಗಳನ್ನು ಹಿಂದಿಕ್ಕಿ ಮೊದಲನೇ ಸ್ಥಾನ ಅಲಂಕರಿಸಿದೆ. ಸ್ಯಾಮ್ಸಂಗ್‌ ಶೇ.13.3% ಹಾಗೂ ಆಪಲ್‌ ಶೇ.12.3% ರಷ್ಟು ಶೇರ್ಸ್‌ಗಳ ಮೂಲಕ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡಿವೆ.

ಈಗಾಗಲೇ ಭಾರತೀಯ ಬಜೆಟ್‌ ಟ್ಯಾಬ್ಲೆಟ್‌ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿರುವ ಮೈಕ್ರೋಮ್ಯಾಕ್ಸ್‌ ಸಂಸ್ಥೆಯು ಕಳೆದ ಎರಡು ತಿಂಗಳುಗಳಿಂದ ಅಗ್ಗದ ಬೆಲೆಯಲ್ಲಿ ತರಾವರಿಯ ಆಂಡ್ರಾಯ್ಡ್‌ ಟ್ಯಾಬ್ಲೆಟ್ಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ, ಅಂದಹಾಗೆ ನೀವೂ ಕೂಡ ಕಡಿಮೆ ಬೆಲೆಯಲ್ಲಿ ಆಂಡ್ರಾಯ್ಡ್ ಟ್ಯಾಬ್ಲೆಟ್‌ ಖರೀದಿಸ ಬೇಕೆಂದಿದ್ದೀರಾ ಹಾಗಿದ್ದಲ್ಲಿ ಮೈಕ್ರೋಮ್ಯಾಕ್ಸ್‌ ಈಗಾಗಲೇ ಹೊರತಂದಿರುವ 10,000 ರೂ. ದರದಲ್ಲಿನ ಟಾಪ್‌ 5 ಟ್ಯಾಬ್ಲೆಟ್ಸ್‌ಗಳ ಪಟ್ಟಿಯನ್ನು ಗಿಜ್ಬಾಟ್‌ ನಿಮಗಾಗಿ ತಂದಿದೆ ಒಮ್ಮೆ ಓದಿ ನೋಡಿ.

<ul id="pagination-digg"><li class="next"><a href="/computer/top-5-latest-micromax-android-ics-tablets-below-rs-10000-2-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot