Subscribe to Gizbot

ಯುನಿಕೋಡ್ ಎಂದರೇನು?..ಅಷ್ಟಕ್ಕೂ ಈ ಯುನಿಕೋಡ್ ಉಪಯೋಗವೇನಿದೆ?

Written By:

ನಿಮ್ಮ ಮನೆಯ ಕಂಪ್ಯೂಟರ್‌ನಲ್ಲಿ ಒಂದು ಕಡತವೊಂದನ್ನು ತಯಾರಿಸಿ ಫ್ಲಾಪಿ ಡಿಸ್ಕ್‌ನಲ್ಲಿ ತುಂಬಿಸಿ ಅದರ ಲೇಸರ್ ಮುದ್ರಣಕ್ಕೆ ಯಾವುದಾದರು ಡಿ.ಟಿ.ಪಿ. ಕೇಂದ್ರಕ್ಕೆ ತೆಗೆದುಕೊಂದು ಹೋಗಿ. ಆತ ನಿಮ್ಮನ್ನು ಖಂಡಿತವಾಗಿ ಕೇಳುವ ಪ್ರಶ್ನೆಯೆಂದರೆ ನೀವು ಯಾವ ತಂತ್ರಾಂಶ ತಯಾರಿಸಿ ಕಡತವನ್ನು ತಯಾರು ಮಾಡಿದ್ದೀರಾ ಎಂಬುದು ಅಲ್ಲವೇ?.

ಹಾಗಾಯೇ, ನಮ್ಮ ಭಾಷೆಗಳ ಜೊತೆ, ಚೀನಾ, ಜಪಾನ್, ಹೀಗೆ ನೂರಾರು ಭಾಷೆಗಳಿಗೆ ಇಂದಿನ ಆಧುನಿಯ ಕಂಪ್ಯೂಟರ್ ಯುಗ ಸ್ಥಾನ ಕಲ್ಪಿಸಿ ಕೊಟ್ಟಿದೆ. ಕನ್ನಡ ಭಾಷೆಯಲ್ಲಿರುವ ಒಂದು ಕಡತವು ಜಪಾನಿಗೆ ತೆರಳಿರುತ್ತದೆ. ಅವರಿಗೆ ಇದು ಯಾವ ಭಾಷೆಯಲ್ಲಿದೆ ಎಂದು ತಿಳಿಯುವುದು ಹೇಗೆ? ವಿಶ್ವಕ್ಕೆಲ್ಲ ಒಂದೇ ಸಂಕೇತ ಬೇಕಲ್ಲವೇ? ಇದುವೇ ಯುನಿಕೋಡ್ (Unicode)!

ಯುನಿಕೋಡ್ ಎಂದರೇನು?..ಅಷ್ಟಕ್ಕೂ ಈ ಯುನಿಕೋಡ್ ಉಪಯೋಗವೇನಿದೆ?

ಹೌದು, ಇಷ್ಟು ಸರಳವಾಗಿ ತಿಳಿಯಬಹುದಾದ ವಿಷಯ ಹಲವರಿಗೆ ತಿಳಿದಿಲ್ಲ.! ಪ್ರಪಂಚಕ್ಕೆಲ್ಲಾ ಒಂದೇ ಸಂಕೇತ ವಿಧಾನ ಇರತಕ್ಕದ್ದು. ಪ್ರಪಂಚದ ಪ್ರತಿ ಭಾಷೆಯ ಪ್ರತಿಯೊಂದು ಅಕ್ಷರಕ್ಕೂ ತನ್ನದೇ ಆದ ಪ್ರತ್ಯೇಕ ಸಂಕೇತ ಇರಬೇಕು ಎಂಬ ಈ ಎಲ್ಲ ಬೇಕುಗಳಿಗೆ ಉತ್ತರವೇ ಯುನಿಕೋಡ್. ಈ ಯುನಿಕೋಡ್‌ನಲ್ಲಿ ಪ್ರತಿ ಭಾಷೆಗೂ ತನ್ನದೇ ಆದ ಸಂಕೇತಶ್ರೇಣಿ ಇದೆ.!

ಯುನಿಕೋಡ್ ಎಂದರೇನು?..ಅಷ್ಟಕ್ಕೂ ಈ ಯುನಿಕೋಡ್ ಉಪಯೋಗವೇನಿದೆ?

ಯುನಿಕೋಡ್ ವಿಧಾನದಲ್ಲಿ ಮಾಹಿತಿ ಸಂಗ್ರಹಣೆ ಮಾಡಿದರೆ ಒಂದೇ ಕಡತದಲ್ಲಿ ಪ್ರಪಂಚದ ಎಲ್ಲ ಭಾಷೆಗಳಲ್ಲಿ ಮಾಹಿತಿಯನ್ನು ಶೇಖರಣೆ ಮಾಡಲು ಸಾಧ್ಯ. ಗ್ರಂಥಾಲಯವೊಂದರಲ್ಲಿ ಭಾರತದ ಎಲ್ಲ ಭಾಷೆಯ ಪುಸ್ತಕಗಳಿದ್ದಲ್ಲಿ ಅವುಗಳ ಡೇಟಾಬೇಸ್ ತಯಾರಿಸಬೇಕಾದರೆ ಯುನಿಕೋಡ್ ವಿಧಾನದಿಂದ ಮಾತ್ರ ಸಾಧ್ಯ ಎಂಬುದು ತಿಳಿದಿರಲಿ.

ಓದಿರಿ: ಕಂಪ್ಯೂಟರ್ ಡೆಡ್ ಆದರೆ ನಾವೇ ಸರಿಪಡಿಸಿಕೊಳ್ಳುವುದು ಹೇಗೆ?

English summary
Unicode is a character encoding standard that has widespread acceptance. Microsoft software uses Unicode at its core.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot