Subscribe to Gizbot

ಬಿಯರ್ ಕ್ಯಾನ್ ಬಳಸಿ ವೈಫೈ ಬಲಪಡಿಸಿ

Written By:

ನಿಮ್ಮ ಮನೆಯಲ್ಲಿರುವ ವೈಫೈ ನೆಟ್‌ವರ್ಕ್ ನಿಧಾನವಾಗಿ ಕಾರ್ಯನಿರ್ವಹಿಸುತ್ತಿದೆಯೇ? ಹಾಗಿದ್ದರೆ ಚಿಂತಿಸದೇ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಸಲಹೆಗಳನ್ನು ಪಾಲಿಸಿದರೆ ಸಾಕು. ವೈಫೈ ರೂಟರ್ ಸೆಟ್ಟಿಂಗ್ ಬಗ್ಗೆ ಹೆಚ್ಚಿನವರು ತಲೆಕೆಡಿಸಿಕೊಳ್ಳುವುದೇ ಇಲ್ಲ. ಸರ್ವೀಸ್ ಪ್ರೊವೈಡರ್‌ಗಳು ಇದನ್ನು ಹೊಂದಿಸುತ್ತಾರೆ ಮತ್ತು ದೀರ್ಘಸಮಯದವರೆಗೆ ಇದು ಹೀಗೆಯೇ ಇರುತ್ತದೆ.

ಓದಿರಿ: ಫೋನ್ ಓವರ್ ಹೀಟ್‌ಗೆ ಪರಿಹಾರ ಇಲ್ಲಿದೆ

ಆದರೆ ಬೀರ್ ಕ್ಯಾನ್ ಅನ್ನು ಬಳಸಿಕೊಂಡು ವೈಫೈ ಸಿಗ್ನಲ್ ಅನ್ನು ಬಲಪಡಿಸುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ. ಸಾಮಾನ್ಯ ಬೀರ್ ಕ್ಯಾನ್ ನಿಮ್ಮ ಮನೆಯ ವೈಫೈ ರೂಟರ್ ಅನ್ನು ಬಲಪಡಿಸುತ್ತದೆ. ಹಾಗಿದ್ದರೆ ಇದನ್ನು ಅನುಸರಿಸುವ ಹಂತಗಳೇನು ಎಂಬುದನ್ನು ಇಂದಿಲ್ಲಿ ನಾವು ನೀಡುತ್ತಿದ್ದು ಅದನ್ನು ನೀವು ಕಲಿತುಕೊಳ್ಳಬಹುದಾಗಿದೆ.

ಓದಿರಿ: ಫೋನ್ ಹ್ಯಾಂಗಿಂಗ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ: 1

ಹಂತ: 1

ಬೀರ್ ಕ್ಯಾನ್, ಕತ್ತರಿ ಮತ್ತು ಹರಿತವಾದ ಚಾಕು ಇವಿಷ್ಟು ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳಿ.

ಹಂತ: 2

ಹಂತ: 2

ಕ್ಯಾನ್ ಅನ್ನು ಕ್ಲೀನ್ ಮಾಡಿಕೊಳ್ಳಿ. ಯಾವುದೇ ಬೀರ್ ಉಳಿದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಹಂತ: 3

ಹಂತ: 3

ರಿಂಗ್ ಅನ್ನು ಸಂಪೂರ್ಣವಾಗಿ ಕ್ಯಾನ್‌ನಿಂದ ಬೇರ್ಪಡಿಸಿ.

ಹಂತ:4

ಹಂತ:4

ಕ್ಯಾನ್‌ನ ಕೊನೆಯ ಭಾಗವನ್ನು ಕತ್ತರಿಸಿಕೊಳ್ಳಿ ಈ ಭಾಗದಲ್ಲಿ ಯಾವುದೇ ಓಪನಿಂಗ್ ಇರಬಾರದು. ಇದಕ್ಕಾಗಿ ಹರಿತವಾದ ಚಾಕುವನ್ನು ಬಳಸಿಕೊಳ್ಳಿ.

ಹಂತ:5

ಹಂತ:5

ಅಂತ್ಯಭಾಗವನ್ನು ಸಂಪೂರ್ಣವಾಗಿ ಕತ್ತರಿಸಿಕೊಳ್ಳಿ. ಸ್ವಲ್ಪ ಭಾಗ ಮೆಟಲ್ ಅನ್ನು ಹಾಗೆಯೇ ಬಿಡಿ.

ಹಂತ:6

ಹಂತ:6

ನೇರವಾಗಿ ಕ್ಯಾನ್‌ನ ಮಧ್ಯಭಾಗವನ್ನು ಕತ್ತರಿಸಿಕೊಳ್ಳಿ, ಇದಕ್ಕೆ ವಿರುದ್ಧವಾಗಿ ಮೆಟಲ್ ಅಟ್ಯಾಚ್ ಆಗಿರಲಿ.

ಹಂತ:7

ಹಂತ:7

ಮೆಟಲ್ ಅನ್ನು ಬೆಂಡ್ ಮಾಡುವ ಮೂಲಕ ಮಧ್ಯಭಾಗವನ್ನು ತೆರೆಯಿರಿ ಡಿಶ್ ಆಕಾರದಲ್ಲಿ ಇದನ್ನು ಸಿದ್ಧಪಡಿಸಿಕೊಳ್ಳಿ.

ಹಂತ:8

ಹಂತ:8

ನಿಮ್ಮ ರೂಟರ್‌ನಲ್ಲಿ ಸಂಪೂರ್ಣವಾದ ವೈಫೈ ಬೂಸ್ಟರ್ ಅನ್ನು ಪ್ಲೇಸ್ ಮಾಡಿ. ಆಂಟೆನಾ ಈ ಓಪನಿಂಗ್ ಇರುವಲ್ಲಿಂದ ಹೊರಬರುವಂತೆ ನೀವು ನೋಡಿಕೊಳ್ಳಬೇಕು.

ಹಂತ:9

ಹಂತ:9

ಕ್ಯಾನ್‌ನ ಬೇಸ್ ಅನ್ನು ರೂಟರ್‌ಗೆ ಅಂಟಿಸಿ ಇದಕ್ಕಾಗಿ ಸಣ್ಣ ಪೋಸ್ಟರ್ ಟ್ಯಾಕ್‌ನ ತುಂಡನ್ನು ಬಳಸಿಕೊಳ್ಳಿ

ಹಂತ:10

ನಿಮ್ಮ ವೈಫೈ ಎಷ್ಟು ಸಮರ್ಥವಾಗಿದೆ ಎಂಬುದನ್ನು ಕಂಡುಕೊಳ್ಳುವ ಸಮಯ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The ordinary beer can will boast signal strength of your home Wi-Fi router up to 10mbps. The video shows how to prepare the beer can to boast the signals. Here are the steps to follow, and also the video in the slider below.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot