Home
ಕಂಪ್ಯೂಟರ್‌‌

ಶಿಯೋಮಿಯ ಹೊಸ ಹೆಜ್ಜೆ!..ರಿಲೀಸ್‌ಗೆ ಸಜ್ಜಾದ 'ನೋಟ್‌ಬುಕ್‌ ಏರ್'.!

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪನಿ ಶಿಯೋಮಿ ತನ್ನ ಮಾರುಕಟ್ಟೆಯ ವ್ಯಾಪ್ತಿಯನ್ನು ವಿಸ್ತಾರಿಸಿಕೊಳ್ಳುತ್ತಿದ್ದು, ಸ್ಮಾರ್ಟ್‌ಫೋನ್‌ ಅಲ್ಲದೇ ಇತರೆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ. ಇದೀಗ ಸಂಸ್ಥೆಯು ಹೊಸ ಹೆಜ್ಜೆಯೊಂದನ್ನು ಇಟ್ಟಿದ್ದು, ತನ್ನ ಗ್ರಾಹಕರಿಗೆ ಮತ್ತೆ ಸಂತಸ ನೀಡಲು ಮುಂದಾಗಿದೆ.

ಶಿಯೋಮಿಯ ಹೊಸ ಹೆಜ್ಜೆ!..ರಿಲೀಸ್‌ಗೆ ಸಜ್ಜಾದ 'ನೋಟ್‌ಬುಕ್‌ ಏರ್'.!

ಹೌದು, ಶಿಯೋಮಿ ಕಂಪನಿಯು 'ಮಿ ನೋಟ್‌ಬುಕ್ ಏರ್‌' ಹೆಸರಿನ ಹೊಸ ಲ್ಯಾಪ್‌ಟಾಪ್‌ ಒಂದನ್ನು ಲಾಂಚ್‌ ಇದೇ ಮಾರ್ಚ್‌ 26ರಂದು (ಇಂದು) ಚೀನಾದಲ್ಲಿ ರಿಲೀಸ್‌ ಮಾಡಲಿದೆ.‌ ಹೊಸ 'ಮಿ ನೋಟ್‌ಬುಕ್‌ ಏರ್‌' ಲ್ಯಾಪ್‌ಟಾಪ್ ಅತೀ ಹಗುರವಾದ ರಚನೆ ಹೊಂದಿದ್ದು, 1.07 ಕಿ.ಗ್ರಾಂ ತೂಕ ಹೊಂದಿರಲಿದೆ. ಆಪಲ್‌ನ ಮ್ಯಾಕ್‌ಬುಕ್‌ ಲ್ಯಾಪ್‌ಟಾಪ್‌ಗಿಂತ ಕಡಿಮೆ ತೂಕ ಇದಾಗಿದೆ ಎನ್ನಲಾಗುತ್ತಿದೆ.

ಶಿಯೋಮಿಯ ಹೊಸ ಹೆಜ್ಜೆ!..ರಿಲೀಸ್‌ಗೆ ಸಜ್ಜಾದ 'ನೋಟ್‌ಬುಕ್‌ ಏರ್'.!

ಕಂಪನಿಯು ಕಳೆದ ವರ್ಷ ಚೀನಾದಲ್ಲಿ i3/i5/i7 ಪ್ರೊಸೆಸರ್‌ ಸಾಮರ್ಥ್ಯ ನೋಟ್‌ಬುಕ್‌ ಮಾದರಿಯ ಲಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದ್ದು, ಅವು 15.6 ಮತ್ತು 13.3 ಇಂಚಿನ ಗಾತ್ರಗಳಲ್ಲಿ ಇದ್ದವು. ಹಾಗಾದರೇ ಲೀಕ್ ಮಾಹಿತಿ ಪ್ರಕಾರ ಶಿಯೋಮಿ ಬಿಡುಗಡೆ ಮಾಡಲಿರುವ ನೋಟ್‌ಬುಕ್‌ ಏರ್‌ ಕುರಿತಾಗಿ ಇನ್ನಷ್ಟು ವಿಶೇಷ ಮಾಹಿತಿಯ ತಿಳಿಯಲು ಮುಂದೆ ಓದಿರಿ.

ಲೈಟ್‌ವೇಟ್‌

ಲೈಟ್‌ವೇಟ್‌

ಶಿಯೋಮಿ ಹೊಸ ನೋಟ್‌ಬುಕ್‌ ಮಾದರಿಯ ಲ್ಯಾಪ್‌ಟಾಪ್‌ ಅತೀ ಹಗುರವಾದ ರಚನೆಯನ್ನು ಹೊಂದಿರಲಿದ್ದು, ಇದರ ತೂಕ ಕೇವಲ 1.07 ಕಿ.ಗ್ರಾಂ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಆಪಲ್‌ ಕಂಪನಿಯ ಮ್ಯಾಕ್‌ಬುಕ್‌ ಏರ್‌ ತೂಕ 1.25ಕಿ.ಗ್ರಾಂ ಆಗಿದ್ದು, ಹಾಗೇ ಹುವಾಯಿ ಮೇಟ್‌ಬುಕ್‌ 1.3ಕಿ.ಗ್ರಾಂ ತೂಕವನ್ನು ಹೊಂದಿವೆ.

ಪೈಪೋಟಿ

ಪೈಪೋಟಿ

ಶಿಯೋಮಿ ಕಂಪನಿಯು ಹುವಾಯಿ ಮೇಟ್‌ಬುಕ್‌ ಮಾದರಿಯ ಲ್ಯಾಪ್‌ಟಾಪ್‌ಗಳಿಗೆ ಹಾಗೂ ಇತರೆ ಪ್ರಮುಖ ಕಂಪನಿಗಳ ಲ್ಯಾಪ್‌ಟಾಪ್‌ಗಳಿಗೆ ಪೈಪೋಟಿ ನೀಡಲಿದ್ದು, ಗ್ರಾಹಕರ ಗಮನ ಸೆಳೆಯಲು ತನ್ನ ಹೊಸ ನೋಟ್‌ಬುಕ್‌ ಏರ್‌ನಲ್ಲಿ ನೂತನ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ.

ಪ್ರೊಸೆಸರ್

ಪ್ರೊಸೆಸರ್

ಶಿಯೋಮಿ ಈ ಹಿಂದಿನ ತನ್ನ ನೋಟ್‌ಬುಕ್‌ ಮಾದರಿಗಳಲ್ಲಿ i3/i5/i7 ಪ್ರೊಸೆಸರ್ ಅನ್ನು ಪರಿಚಯಿಸಿದೆ. ಇದೀಗ ಹೊಸ ನೋಟ್‌ಬುಕ್‌ ಏರ್‌ ಲ್ಯಾಪ್‌ಟಾಪ್‌ನಲ್ಲಿ 8ನೇ ತಲೆಮಾರಿನ ಇಂಟೆಲ್‌ಕೋರ್‌ ಪ್ರೊಸೆಸರ್‌ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗುತ್ತಿದ್ದು, ಇದರೊಂದಿಗೆ RAM ಮತ್ತು SSD ಆಯ್ಕೆಗಳಲ್ಲಿ ಅಪ್‌ಗ್ರೇಡ್‌ ಮಾಡಿರಲಿದೆ.

ಲಭ್ಯತೆ

ಲಭ್ಯತೆ

ಶಿಯೋಮಿಯ ಹೊಸ 'ಮಿ ನೋಟ್‌ಬುಕ್‌ ಏರ್‌ ಲ್ಯಾಪ್‌ಟಾಪ್' ಇದೇ ಮಾರ್ಚ್‌ 26ರಂದು ಚೀನಾದ ಮಾರುಕಟ್ಟೆ ಪ್ರವೇಶಿಸಲಿದೆ. ಆದರೆ ಈ ಉತ್ಪನ್ನ ಭಾರತಕ್ಕೆ ಯಾವಾಗ ಎಂಟ್ರಿ ಕೊಡಲಿದೆ ಎನ್ನುವ ಕುರಿತು ಕಂಪನಿಯು ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.

Best Mobiles in India

English summary
Xiaomi is all set to launch its new Mi Notebook Air on March 26 in China. It is expected to be lighter in weight as compared to the MacBook Air.to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+