ಶಿಯೋಮಿಯ ಬಹುನಿರೀಕ್ಷಿತ 'ನೋಟ್‌ಬುಕ್‌ ಏರ್‌ 12.5' ಲಾಂಚ್!.ಫುಲ್‌ ಲೈಟ್‌ವೇಟ್!

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆ ಶಿಯೋಮಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಕಂಪನಿಯ ಹಲವು ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಹಾಗೇ ಹೊಸ ಫೀಚರ್ಸ್‌ಗಳಿಂದ ಕಂಪನಿಯ ಲ್ಯಾಪ್‌ಟಾಪ್‌ಗಳು ಗ್ರಾಹಕರನ್ನು ಆಕರ್ಷಿಸಿದ್ದು, ಇದೀಗ ಶಿಯೋಮಿ ಹೊಸ ನೋಟ್‌ಬುಕ್ ಮಾದರಿಯ ಲ್ಯಾಪ್‌ಟಾಪ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಅಬ್ಬರಿಸಲು ರೆಡಿಯಾಗಿದೆ.

ಶಿಯೋಮಿಯ ಬಹುನಿರೀಕ್ಷಿತ 'ನೋಟ್‌ಬುಕ್‌ ಏರ್‌ 12.5' ಲಾಂಚ್!.ಫುಲ್‌ ಲೈಟ್‌ವೇಟ್!

ಹೌದು, ಶಿಯೋಮಿ ನೋಟ್‌ಬುಕ್‌ ಏರ್‌ 12.5 ಹೆಸರಿನ ಲ್ಯಾಪ್‌ಟಾಪ್‌ ಅನ್ನು ಬಿಡುಗಡೆ ಮಾಡಿದ್ದು, ಈ ನೋಟ್‌ಬುಕ್‌ ಏರ್ ಲ್ಯಾಪ್‌ಟಾಪ್‌ 8ನೇ ತಲೆಮಾರಿನ ಇಂಟಲ್‌ ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಕೇವಲ 1.07ಕಿ.ಗ್ರಾಂ ತೂಕವನ್ನು ಹೊಂದಿ ಭಾರೀ ಗಮನ ಸೆಳೆದಿರುವ ಈ ಲ್ಯಾಪ್‌ಟಾಪ್‌, ಆಪಲ್‌ನ ಮ್ಯಾಕ್‌ಬುಕ್‌ ಮಾದರಿಯ ಲ್ಯಾಪ್‌ಟಾಪ್‌ಗಿಂತ ಕಡಿಮೆ ತೂಕವನ್ನು ಇದು ಹೊಂದಿದೆ.

ಶಿಯೋಮಿಯ ಬಹುನಿರೀಕ್ಷಿತ 'ನೋಟ್‌ಬುಕ್‌ ಏರ್‌ 12.5' ಲಾಂಚ್!.ಫುಲ್‌ ಲೈಟ್‌ವೇಟ್!

ಈ ನೋಟ್‌ಬುಕ್‌ ಏರ್‌ ಲ್ಯಾಪ್‌ಟಾಪ್‌ಗೆ ಅತ್ಯುತ್ತಮ ಬ್ಯಾಟರಿ ಬಾಳಿಕೆ ಸಾಮರ್ಥ್ಯವನ್ನು ಒದಗಿಸುವುದರೊಂದಿಗೆ ಫಾಸ್ಟ್‌ ಚಾರ್ಜರ್‌ ಸೌಲಭ್ಯವನ್ನು ನೀಡಲಾಗಿದೆ. ಕೇವಲ 35 ನಿಮಿಷದಲ್ಲಿ ಲ್ಯಾಪ್‌ಟಾಪ್ ಶೇ.50% ಬ್ಯಾಟರಿ ಚಾರ್ಜ್‌ ಆಗುವ ಶಕ್ತಿಯನ್ನು ಹೊಂದಿದೆ. ಹಾಗಾದರೇ ಶಿಯೋಮಿ ನೋಟ್‌ಬುಕ್‌ ಏರ್‌ ಲ್ಯಾಪ್‌ಟಾಪ್‌ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ನೋಡೋಣ ಬನ್ನಿರಿ.

ಡಿಸೈನ್

ಡಿಸೈನ್

ಅತೀ ಹಗುರವಾದ ರಚನೆಯನ್ನು ಹೊಂದಿರುವ ಈ ಲಾಪ್‌ಟಾಪ್‌ ತೂಕ ಕೇವಲ 1.07ಕಿ.ಗ್ರಾಂ ಆಗಿದ್ದು, ಇದರ ಚಸ್ಸಿ ಸಂಪೂರ್ಣ ಮೆಟಲ್‌ನಿಂದ ರಚಿತವಾಗಿದೆ ಮತ್ತು ಯಾವುದೇ ಲೋಗೋವನ್ನು ಹೊಂದಿಲ್ಲ. ಫುಲ್‌ಸೈಜ್‌ ಬ್ಲ್ಯಾಕ್‌ಲೈಟ್‌ ಕೀ ಬೋರ್ಡ್‌ ಹೊಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಶಿಯೋಮಿ ನೋಟ್‌ಬುಕ್‌ ಏರ್‌ ಲ್ಯಾಪ್‌ಟಾಪ್‌ 1080 x 1920 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 12.5 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಕಂಫರ್ಟ್ ಮಾದರಿಯ ಡಿಸ್‌ಪ್ಲೇ ಎನ್ನಲಾಗುತ್ತಿದ್ದು, ಆದರೆ 13 ಇಂಚಿನ ಗಾತ್ರದಲ್ಲಿ ಇರಲಿದೆ ಎಂದುಕೊಂಡಿದ್ದ ಗ್ರಾಹಕರ ನಿರೀಕ್ಷೆ ಹುಸಿಯಾಗಿದೆ.

ಪ್ರೊಸೆಸರ್‌

ಪ್ರೊಸೆಸರ್‌

8ನೇ ತಲೆಮಾರಿನ ಇಂಟಲ್‌ಕೋರ್‌ Core i5 ಮತ್ತು Core m3 ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಇದರ ಕಾರ್ಯವೈಖರಿಯು ವೇಗವಾಗಿರಲಿದೆ. ವಿಂಡೊಸ್‌ 10 ಹೋಮ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 4GB RAM ಸಾಮರ್ಥ್ಯದೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ 256GB ವರೆಗೂ ವಿಸ್ತರಿಸಿಕೊಳ್ಳುವ ಅವಕಾಶ ನೀಡಲಾಗಿದೆ.

ಬ್ಯಾಟರಿ

ಬ್ಯಾಟರಿ

ಈ ಲ್ಯಾಪ್‌ಟಾಪ್‌ಗೆ ಶಕ್ತಿಯುತ ಬ್ಯಾಟರಿ ಸೌಲಭ್ಯವನ್ನು ಒದಗಿಸಿದ್ದು, ದೀರ್ಘಕಾಲದವರೆಗೆ ಬ್ಯಾಟರಿ ಬಾಳಿಕೆ ಬರಲಿದೆ. ಇದರೊಂದಿಗೆ ಫಾಸ್ಟ್‌ ಚಾರ್ಜಿಂಗ್ ಸೌಕರ್ಯವನ್ನು ನೀಡಲಾಗಿದ್ದು, ಕೇವಲ 35ನಿಮಿಷದಲ್ಲಿ ಲ್ಯಾಪ್‌ಟಾಪ್‌ ಅರ್ಧದಷ್ಟು ಚಾರ್ಜ್ ಪಡೆದುಕೊಳ್ಳುತ್ತದೆ ಎನ್ನಲಾಗುತ್ತಿದೆ.

ಸೌಂಡ್‌ ಮತ್ತು ಇತರೆ ಆಯ್ಕೆಗಳು

ಸೌಂಡ್‌ ಮತ್ತು ಇತರೆ ಆಯ್ಕೆಗಳು

ಈ ಲ್ಯಾಪ್‌ಟಾಪ್‌ ಮೂರು ಹರ್ಮನ್ ಸ್ಪೀಕರ್ಸ್‌ಗಳನ್ನು ಒಳಗೊಂಡಿದ್ದು, DTS ಸೌಂಡ್‌ ಆಯ್ಕೆಯನ್ನು ಹೊಂದಿದೆ. ಇದರೊಂದಿಗೆ 3.5mm ಆಡಿಯೊ ಜಾಕ್, ಯುಎಸ್‌ಬಿ Type-C ಪೋರ್ಟ್‌, ಎಚ್‌ಡಿಎಮ್‌ಐ ಪೋರ್ಟ್‌ ಮತ್ತು ಯುಎಸ್‌ಬಿ 3.0 ಪೋರ್ಟ್‌ ಸೌಲಭ್ಯಗಳನ್ನು ನೀಡಲಾಗಿದೆ.

ಬಣ್ಣ ಮತ್ತು ಲಭ್ಯತೆ

ಬಣ್ಣ ಮತ್ತು ಲಭ್ಯತೆ

ಸಿಲ್ವರ್‌ ಮತ್ತು ಗೋಲ್ಡ್‌ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿರುವ ಶಿಯೋಮಿ ನೋಟ್‌ಬುಕ್‌ ಏರ್‌ 12.5 ಲ್ಯಾಪ್‌ಟಾಪ್‌, ಇದೇ ಮಾರ್ಚ್‌ 28ರಂದು ಚೀನಾದಲ್ಲಿ ಸೇಲ್ ಆರಂಭಿಸಲಿದೆ. ಆದರೆ ಭಾರತಕ್ಕೆ ಯಾವಾಗ ಎಂಟ್ರಿ ಕೊಡಲಿದೆ ಎಂಬುದರ ಬಗ್ಗೆ ಕಂಪನಿ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

ವೇರಿಯಂಟ್ ಮತ್ತು ಬೆಲೆ

ವೇರಿಯಂಟ್ ಮತ್ತು ಬೆಲೆ

ಶಿಯೋಮಿ ನೋಟ್‌ಬುಕ್‌ ಏರ್‌ 12.5 ಲ್ಯಾಪ್‌ಟಾಪ್ ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿದ್ದು, ಇಂಟಲ್‌ಕೋರ್‌ m3 ಸಿಪಿಯು ಮತ್ತು 128GB SSD ಸಾಮರ್ಥ್ಯ ವೇರಿಯಂಟ್ ಬೆಲೆಯು CNY 3,599 (ಅಂದಾಜು 38,400ರೂ.ಗಳು), ಇಂಟಲ್‌ಕೋರ್‌ m3 ಸಿಪಿಯು ಮತ್ತು 256GB SSD ವೇರಿಯಂಟ್ ದರವು CNY 3,999 (ಅಂದಾಜು 42,700ರೂ.ಗಳು) ಮತ್ತು ಇಂಟಲ್‌ಕೋರ್‌ i5 ಮತ್ತು 256GB SSD ವೇರಿಯಂಟ್ ಬೆಲೆಯು CNY 4,299(ಅಂದಾಜು 45,900ರೂ.ಗಳು)

Best Mobiles in India

English summary
Xiaomi Mi Notebook Air 12.5 (2019) launched with 8th generation and 3,599 Yuan (~$536) starting price.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X