ಆಪಲ್ ಮ್ಯಾಕ್‌ಬುಕ್‌ಗೆ ಸ್ಪರ್ಧೆಯೊಡ್ಡಲಿದೆ ಮಿ ನೋಟ್ ಬುಕ್ ಪ್ರೋ!!

ಸ್ಮಾರ್ಟ್‌ಫೋನ್ ಮಾರುಕಟ್ಟೆಯಂತೆ ಇಲ್ಲಿಯೂ ಶಿಯೋಮಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಆಪಲ್ ನೋಟ್‌ಬುಕ್ ಮಾದರಿಯಲ್ಲಿ ಈ ಬಾರಿ ನೋಟ್‌ ಬುಕ್ ಪ್ರೋ ಲಾಂಚ್ ಮಾಡಿದೆ.

|

ಶಿಯೋಮಿ ಮಿ ನೋಟ್ ಬುಕ್ ಪ್ರೋ ಲಾಂಚ್ ಆಗಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಟಾಪ್ ಕಂಪನಿಯ ನೋಟ್‌ಬುಕ್‌ಗಳಿಗೆ ನಡುಕ ಶುರುವಾಗಿದೆ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಂತೆ ಇಲ್ಲಿಯೂ ಶಿಯೋಮಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಆಪಲ್ ನೋಟ್‌ಬುಕ್ ಮಾದರಿಯಲ್ಲಿ ಈ ಬಾರಿ ನೋಟ್‌ ಬುಕ್ ಪ್ರೋ ಲಾಂಚ್ ಮಾಡಿದೆ.

ಆಪಲ್ ಮ್ಯಾಕ್‌ಬುಕ್‌ಗೆ ಸ್ಪರ್ಧೆಯೊಡ್ಡಲಿದೆ ಮಿ ನೋಟ್ ಬುಕ್ ಪ್ರೋ!!

ಓದಿರಿ: ಕರ್ನಾಟಕದಲ್ಲಿ ಮೊದಲ ಬಲಿ ಪಡೆದ ಬ್ಲೂ ವೇಲ್: ನಿಮ್ಮ ಮಕ್ಕಳ ರಕ್ಷಿಸುವುದು ಹೇಗೆ..?

ಮಿ ನೋಟ್ ಬುಕ್‌ ಪ್ರೋ ಅನ್ನು ಪ್ರೋ ಬಳಕೆದಾರರಿಗಾಗಿಯೇ ನಿರ್ಮಿಸಲಾಗಿದೆ ಎನ್ನಲಾಗಿದೆ. ಚೀನಾ ಮೂಲದ ಶಿಯೋಮಿ ಈಗಾಗಲೇ ಸ್ಮಾರ್ಟ್‌ಫೋನ್ ಮೂಲಕ ಜನರ ಮನ ಗೆದ್ದಿದ್ದು, ಈ ಬಾರಿ ನೋಟ್‌ಬುಕ್ ಮೂಲಕ ಜನರ ಹತ್ತಿರಕ್ಕೆ ಬಂದಿದೆ.

15.6 ಇಂಚಿನ ನೋಟ್‌ಬುಕ್:

15.6 ಇಂಚಿನ ನೋಟ್‌ಬುಕ್:

ಶಿಯೋಮಿ ಮಿ ನೋಟ್ ಬುಕ್‌ ಪ್ರೋ 15.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 1920x1080 ಪಿಕ್ಸಲ್ ಗುಣಮಟ್ಟದಿಂದ ಕೂಡಿದೆ. ನೋಡಲು ಉತ್ತಮವಾಗಿದೆ. ಕೆಲಸ ಮಾಡುವ ಸಂದರ್ಭದಲ್ಲಿ ಕಣ್ಣಿಗೆ ಶ್ರಮವಾಗುವುದಿಲ್ಲ.

ಕೊರ್ i7 ಪ್ರೋಸೆಸರ್:

ಕೊರ್ i7 ಪ್ರೋಸೆಸರ್:

ಶಿಯೋಮಿ ಮಿ ನೋಟ್ ಬುಕ್‌ ಪ್ರೋನಲ್ಲಿ ಕೋರ್ i7 ಪ್ರೋಸೆಸರ್ ಅಳವಡಿಸಿದ್ದು, 16GB RAM ಇದರಲ್ಲಿದೆ. ಜೊತೆಗೆ 1TB SSD ಇಂಟರ್ನಲ್ ಮೆಮೊರಿಯನ್ನು ಕಾಣಬಹುದು. ಅಲ್ಲದೇ NVIDA MX 150 ಗ್ರಾಪಿಕ್ ಕಾರ್ಡ್ ಇದೆ.

ಯೂನಿ ಬಾರಿ ವಿನ್ಯಾಸ:

ಯೂನಿ ಬಾರಿ ವಿನ್ಯಾಸ:

ಮಿ ನೋಟ್ ಬುಕ್‌ ಪ್ರೋ ಯೂನಿ ಬಾಡಿ ವಿನ್ಯಾಸವನ್ನು ಹೊಂದಿದ್ದು, 2 ಕೆಜಿ ಭಾರವನ್ನು ಹೊಂದಿದೆ. USB 3.0 ಪೋರ್ಟ್ ಇದೆ. HDM ಪೋರ್ಟ್ ಸಹ ಇದೆ. ಇದರಲ್ಲಿ ಡಾಲ್ಬಿ ಆಡಿಯೋ ಸಿಸ್ಟಮ್ ಸಹ ಇದೆ.

ವಿಂಡೋಸ್ 10 ಪ್ರೋ:

ವಿಂಡೋಸ್ 10 ಪ್ರೋ:

ಇದಲ್ಲದೇ ಮಿ ನೋಟ್ ಬುಕ್‌ ಪ್ರೋ ವಿಂಡೋಸ್ 10 ಪ್ರೋ ನಲ್ಲಿ ಕಾರ್ಯನಿರ್ವಹಿಸಲಿದ್ದು, ವೇಗದ ಚಾರ್ಜಿಂಗ್ ಹೊಂದಿದೆ. ಇದರ ಬೆಲೆಯೂ ಸರಿ ಸುಮಾರು 60,000 ಆಗಲಿದೆ.

Best Mobiles in India

English summary
The Xiaomi Mi Notebook Pro can be configured with Intel's latest Core i7 processor, up to 16GB RAM and 1TB SSD storage. The notebook features a minimalistic aluminium unibody design and uses a custom cooling feature. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X