ವಿಶ್ವದ ವೇಗದ ಪ್ರೊಸೆಸರ್ ಟ್ಯಾಬ್ಲೆಟ್ ಟೆಗ್ರಾ ನೋಟ್ ಬಿಡುಗಡೆ
ವಿಶ್ವದ ವೇಗದ ಪ್ರೊಸೆಸರ್ ಹೊಂದಿರುವ ಟ್ಯಾಬ್ಲೆಟ್‌ನ್ನು ಮಾರುಕಟ್ಟೆಗೆ ಝೋಲೋ ಬಿಡುಗಡೆ ಮಾಡಿದೆ.ಎನ್ವಿಡಿಯಾ ಕಂಪೆನಿಯ ವೇಗದ ಮೊಬೈಲ್ ಗ್ರಾಫಿಕ್ಸ್ ಪ್ರೊಸೆಸರ್ ಎಂದೇ ಹೆಸರುವಾಸಿಯಾಗಿರುವ ಟೆಗ್ರಾ 4 ಪ್ರೊಸೆಸರ್‌ನ್ನು ಈ ಟ್ಯಾಬ್ಲೆಟ್ ಹೊಂದಿದ್ದು, ಟ್ಯಾಬ್ಲೆಟ್‌ಗೆ 17,999 ಬೆಲೆಯನ್ನು ಝೋಲೋ ನಿಗದಿ ಮಾಡಿದೆ.
ಬಿಲ್ಟ್-ಇನ್ ಸ್ಲೈಡ್ ಕವರ್,ಎನ್ವಿಡಿಯಾ ಡೈರೆಕ್ಟ್ ಸ್ಟೈಲಸ್ ಟೆಕ್ನಾಲಜಿ ಆಧಾರಿತ ಸ್ಟೈಲಸ್ ಪೆನ್,10 ಗಂಟೆಗಳ ಎಚ್ಡಿ ವೀಡಿಯೋ ಪ್ಲೇಬ್ಯಾಕ್ ಬ್ಯಾಟರಿಯನ್ನು ಈ ಝೋಲೋ ಪ್ಲೇ ಟೆಗ್ರಾ ಟ್ಯಾಬ್ಲೆಟ್ ಹೊಂದಿದೆ.ವೈಫೈ,ಬ್ಲೂಟೂತ್,ಜಿಪಿಎಸ್,ಗ್ಲೋನಾಸ್ ಕನೆಕ್ಟಿವಿಟಿ ವಿಶೇಷತೆ ಹೊಂದಿದ್ದು ಸಿಮ್ ಕಾರ್ಡ್ ಸೌಲಭ್ಯವಿಲ್ಲ.ಕ್ಯಾಮೆರಾ ಸಾಮರ್ಥ್ಯ,ವೇಗದ ವೆಬ್ ಬ್ರೌಸಿಂಗ್ ಮಲ್ಟಿ ಟಾಸ್ಕಿಂಗ್ ಮತ್ತು ಗೇಮಿಂಗ್‌ಗಾಗಿ ಟ್ಯಾಬ್ಲೆಟ್‌ನಲ್ಲಿ 72 ಕೋರ್ ಎನ್ವಿಡಿಯಾ ಜೀಫೋರ್ಸ್ ಗ್ರಾಫಿಕ್ಸ್ ಪ್ರೊಸೆಸರ್‌ನ್ನು ಟ್ಯಾಬ್ಲೆಟ್ ಒಳಗೊಂಡಿದೆ
ಟ್ಯಾಬ್ಲೆಟ್ ಜಿಸೆನ್ಸರ್,ಪ್ರಾಕ್ಸಿಮಿಟಿ ಸೆನ್ಸರ್,ಲೈಟ್ ಸೆನ್ಸರ್,ಇ-ಕಂಪಾಸ್,ಪ್ರಾಕ್ಸಿಮಿಟಿ ಸೆನ್ಸರ್,ಗೈರೊ ಸೆನ್ಸರ್,ರೊಟೆಶನ್ ವೆಕ್ಟರ್ ಸೆನ್ಸರ್‌ಗಳನ್ನು ಟ್ಯಾಬ್ಲೆಟ್ ಹೊಂದಿದೆ. ಜೊತೆಗೆ ಸದ್ಯದಲ್ಲೇ ಜೆಲ್ಲಿ ಬೀನ್ 4.3 ಅಪ್‌ಡೆಟ್ ಆಗಲಿದೆ ಎಂದು ಝೋಲೋ ತಿಳಿಸಿದೆ.
ಟ್ಯಾಬ್ಲೆಟ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:ಗ್ಯಾಲರಿ

ಝೋಲೋ ಪ್ಲೇ ಟೆಗ್ರಾ ನೋಟ್:
ವಿಶೇಷತೆ:
7 ಇಂಚಿನ ಎಚ್‌ಡಿ ಐಪಿಎಸ್ ಸ್ಕ್ರೀನ್(1280 x 800 ಪಿಕ್ಸೆಲ್)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
1.8 GHz ಎನ್ವಿಡಿಯಾ ಟೆಗ್ರಾ 4-4 ಪ್ಲಸ್ 1 ಕಾರ್ಟೆಕ್ಸ್-ಎ 15 ಪ್ರೊಸೆಸರ್
72 ಕೋರ್ ಎನ್ವಿಡಿಯಾ ಜೀಫೋರ್ಸ್ ಗ್ರಾಫಿಕ್ ಪ್ರೊಸೆಸರ್
16 GB ಆಂತರಿಕ ಮೆಮೊರಿ
1GB ರ್‍ಯಾಮ್
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್,ಜಿಪಿಎಸ್,ಗ್ಲೋನಾಸ್,ಎಚ್‌ಡಿಎಂಐ
4100 mAh ಬ್ಯಾಟರಿ
ಇದನ್ನೂ ಓದಿ: ವಿಶ್ವದ ವೇಗದ ಪ್ರೊಸೆಸರ್ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು


Click it and Unblock the Notifications