Subscribe to Gizbot

6,990 ರೂ. ದರದಲ್ಲಿ ಝಿಂಕ್‌ ಝಡ್‌99 ಟ್ಯಾಬ್ಲೆಟ್‌ ಬಿಡುಗಡೆ

Posted By: Super
6,990 ರೂ. ದರದಲ್ಲಿ ಝಿಂಕ್‌ ಝಡ್‌99 ಟ್ಯಾಬ್ಲೆಟ್‌ ಬಿಡುಗಡೆ
ಈಗಂತೂ ಟ್ಯಾಬ್ಲೆಟ್‌ಗಳಿಗೆ ಬಾರೀ ಡಿಮಾಂಡ್‌ ಶುರುವಾಗಿಬಿಟ್ಟಿದೆ ಪ್ರತಿಯೊಬ್ಬರಿಗೂ ಕೂಡಾ ಒಂದು ಟ್ಯಾಬ್ಲೆಟ್‌ ಖರೀದಿಸುವ ಆಸೆ ಇದ್ದೇ ಇರುತ್ತದೆ ಎಂದು ಹೇಳ ಬಹುದು. ಈ ರೀತಿ ದಿನೇ ದಿನೇ ಟ್ಯಾಬ್ಲೆಟ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಸ್ಥಳೀಯ ಹಾಗೂ ಜಾಗತಿಕ ತಯಾರಕರುಗಳು ಒಂದರ ನಂತರ ಒಂದರಂತೆ ಭಾರತೀಯ ಮಾರುಕಟ್ಟೆ ಟ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಅದೂ ಕೂಡ ಕೈಗೆಟಕುವ ದರದಲ್ಲಿ ಆಂಡ್ರಾಯ್ಡ್ ಚಾಲಿತ ಟ್ಯಾಬ್ಲೆಟ್‌ಗಳಂತೂ ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಟ್ಯಾಬ್ಲೆಟ್‌ಗಳು ಲಭ್ಯವಿದ್ದು ಗ್ರಾಹಕರನ್ನು ಕೈಬೀಸಿ ತನ್ನತ ಸೆಳೆಯುತ್ತಿದೆ.

ಈ ಸಾಲಿಗೆ ಸ್ಥಳಿಯ ಟ್ಯಾಬ್ಲೆಟ್‌ ತಯಾರಿಕಾ ಸಂಸ್ಥೆಯಾದಂತಹ ಝಿಂಕ್‌ ತನ್ನಯ ನೂತನ ಆಂಡ್ರಾಯ್ಡ್‌ ಚಾಲಿತ ಝಡ್‌99 2ಜಿ ಟ್ಯಾಬ್ಲೆಟ್‌ ಅನ್ನು ರೂ. 6,990 ಬಿಡುಗಡೆ ಮಾಡಿದೆ. ಈ ಟ್ಯಾಬ್ಲೆಟ್‌ನ ಪ್ರಮುಖ ವಿಶೇಷತೆ ಎಂದರೆ ವಾಯ್ಸ್‌ ಕಾಲಿಂಗ್‌ ಫೀಚರ್‌ ಕೂಡಾ ನೀಡಲಾಗಿದ್ದು ವಿಡಿಯೋ ಕಾಲಿಂಗ್‌ ಕೂಡಾ ಮಾಡಬಹುದಾಗಿದೆ.

ಹಾಗಿದ್ದಲ್ಲಿ ಬನ್ನಿ ಇದೀಗ ತಾನೆ ಮಾರುಕಟ್ಟೆ ಪ್ರವೇಶಿಸಿರುವ ಝಿಂಕ್‌ ಝಡ್‌99 ಆಂಡ್ರಾಯ್ಡ್‌ ಐಸಿಎಸ್‌ ಟ್ಯಾಬ್ಲೆಟ್‌ನಲ್ಲಿ ಏನೆಲ್ಲಾ ಫೀಚರ್ಸ್‌ ನೀಡಲಾಗಿದೆ ಎಂಬುದನ್ನು ಮೊದಲು ನೋಡಿ ಬರೋಣ.

ವಿಶೇಷತೆ:

ದರ್ಶಕ: ಝಿಂಕ್‌ ಝಡ್‌99 ಟ್ಯಾಬ್ಲೆಟ್‌ನಲ್ಲಿ 7 ಇಂಚಿನ ಟಿಎಫ್‌ಟಿ ಎಲ್‌ಸಿಡಿ 5 ಪಾಯಿಂಟ್‌ ಮಲ್ಟಿ-ಟಚ್‌ ಕೆಪಾಸಿಟೀವ್‌ ಟಚ್‌ಸ್ಕ್ರೀನ್‌ ದರ್ಶಕ ಹಾಗೂ 800 x 480 ಪಿಕ್ಸೆಲ್‌ ರೆಸೆಲ್ಯೂಷನ್‌ ನೀಡಲಾಗಿದೆ.

ಪ್ರೊಸೆಸರ್‌: 1.2 GHz ಪ್ರೊಸೆಸರ್‌ನೊಂದಿಗ ಮೇಲ್‌ 400 3ಡಿ ಜಿಪಿಯು ನೀಡಲಾಗಿದೆ.

ಆಪರೇಟಿಂಗ್‌ ಸಿಸ್ಟಂ: ಬಜೆಟ್‌ ಟ್ಯಾಬ್ಲೆಟ್‌ ಆದ್ದರಿಂದ ಆಂಡ್ರಾಯ್ಡ್‌ 4.0 ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ ನೀಡಲಾಗಿದೆ.

ಕ್ಯಾಮೆರಾ: ಝಿಂಕ್‌ ಝಡ್‌99 2ಜಿ ಟ್ಯಾಬ್ಲೆಟ್‌ನಲ್ಲಿ ಎರಡೂ ಬದಿಯ ಅಂದರೆ ಮುಂಬದಿಯಲ್ಲಿ ಹಾಗೂ ಹಿಂಬದಿಯಲ್ಲಿ 0.3 ಎಂಪಿ ಕ್ಯಾಮೆರಾ ನೀಡಲಾಗಿದೆ.

ಸ್ಟೋರೇಜ್‌: ಈ ವಿಚಾರದಲ್ಲಿ 512 ಎಂಬಿ RAM, 4 ಜಿಬಿ ಆನ್‌ಬೋರ್ಡ್ ಸ್ಟೋರೇಜ್‌ ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್‌ಸ್ಲಾಟ್‌ ಮೂಲಕ 32 ಜಿಬಿ ವರೆಗೆ ಮೆಮೊರಿ ವಿಸ್ತರಿಸ ಬಹುದಾಗಿದೆ.

ಕನೆಕ್ಟಿವಿಟಿ: ಇನ್‌ ಬಿಲ್ಟ್‌ ವೈ-ಫೈ, GPRS/EDGE, ಮೈಕ್ರೋ ಯುಎಸ್‌ಬಿ ಯುಎಸ್‌ಬಿ ಹಾಗೂ ಡಾಂಗಲ್‌ ಮೂಲಕ 3ಜಿ ಕನೆಕ್ಟಿವಿಟಿ ಫೀಚರ್ಸ್‌ ನೀಡಲಾಗಿದೆ.

ಬ್ಯಾಟರಿ: 3,000 mAh ಬ್ಯಾಟರಿ ನೀಡಲಾಗಿದ್ದು ಉತ್ತಮ ಬ್ಯಾಕಪ್‌ ಹೊಂದಿದೆ.

ಹೆಚ್ಚುವರಿ ಫೀಚರ್ಸ್‌

ಇದಲ್ಲದೆ ಝಿಂಕ್‌ ಝಡ್‌99 2ಜಿ ಟ್ಯಾಬ್ಲೆಟ್‌ನಲ್ಲಿ ಬಿಗಗಫ್ಲಿಕ್ಸ್‌, ಸ್ಕೈಪ್‌, ವಾಟ್ಸ್‌ ಆಪ್‌, ಎಂಎಸ್‌ಎನ್‌, ಆಲ್ಡಿಕೋ ಇ-ಬುಕ್‌ ರೇಡರ್‌ ಹಾಗೂ ಅಡೋಬ್‌ ರೇಡರ್‌ ಫೀಚರ್ಸ್‌ ನೀಡಲಾಗಿದೆ.

ದರ ಹಾಗೂ ಲಭ್ಯತೆ

ಖರೀದಿಸುವುದಾರೆ ಝಿಂಕ್‌ ಝಡ್‌99 2ಜಿ ಟ್ಯಾಬ್ಲೆಟ್‌ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ರೂ. 6,990 ದರದಲ್ಲಿ ಲಭ್ಯವಿದೆ.

Read In English...

ಟಾಪ್‌ 5 ಆಂಡ್ರಾಯ್ಡ್‌ ಜೆಲ್ಲಿ ಬೀನ್‌ ಟ್ಯಾಬ್ಲೆಟ್ಸ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot