Home
Deal of the day

ಈಗಲೇ ಖರೀದಿಸಿ..! 3,950 ಬೆಲೆ ಕುಸಿತ.. ಕಡಿಮೆ ಬೆಲೆಗೆ OPPO 5G ಫೋನ್.. ಫೀಚರ್ಸ್ ಬಗ್ಗೆ ಕೇಳಂಗಿಲ್ಲ

ಒಪ್ಪೋ ಕಂಪನಿಯ 'F' ಸರಣಿಯ ಫೋನ್‌ಗಳು ಭಾರೀ ಬೇಡಿಕೆ ಪಡೆದಿವೆ. ಈ ಪೈಕಿ ಒಪ್ಪೋ F27 ಪ್ರೊ+ 5G (OPPO F27 Pro+ 5G) ಕೂಡ ಒಂದಾಗಿದೆ. ಪ್ರಸ್ತುತ, ಕಂಪನಿಯು ಈ ಫೋನಿನ ಬೆಲೆಯನ್ನು 3,950 ರೂ. ಇಳಿಕೆ ಮಾಡಿದೆ. ಹೌದು, ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಶೇ.21 ರಷ್ಟು ರಿಯಾಯಿತಿ ದರದೊಂದಿಗೆ ಈ ಒಪ್ಪೋ ಮೊಬೈಲ್ ಮಾರಾಟವಾಗುತ್ತಿದೆ. ಒಪ್ಪೋ ಪ್ರಿಯರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಬನ್ನಿ, ಈ ಫೋನಿನ ಬಿಡುಗಡೆ ಬೆಲೆ, ಆಫರ್ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಒಪ್ಪೋ F27 ಪ್ರೊ+ 5G ಮೊಬೈಲ್ ಪ್ರೀಮಿಯಂ ವೀಗನ್ ಲೆದರ್ ಪ್ಯಾನಲ್ ಹೊಂದಿದೆ. ಈ ಫೋನಿನಲ್ಲಿ 6.7 ಇಂಚಿನ 3D ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ ಲಭ್ಯವಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ 64 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಒಳಗೊಂಡಿದೆ. ಹಾಗೆಯೇ 5000mAh ಬ್ಯಾಟರಿ ಮತ್ತು 67W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಮಧ್ಯಮ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ. ಇದೀಗ, ಮಾರುಕಟ್ಟೆ ಬೆಲೆಗಿಂತ ಬೆಲೆ ಕಡಿಮೆ ಮತ್ತು ಬ್ಯಾಂಕ್ ರಿಯಾಯಿತಿಗಳೊಂದಿಗೆ ಮಾರಾಟವಾಗುತ್ತಿದೆ.

ಈಗಲೇ ಖರೀದಿಸಿ..! 3,950 ಬೆಲೆ ಕುಸಿತ.. ಕಡಿಮೆ ಬೆಲೆಗೆ OPPO 5G ಫೋನ್

ಒಪ್ಪೋ F27 ಪ್ರೊ ಪ್ಲಸ್ 5G ಮೊಬೈಲ್ ಆಪಲ್ ಮತ್ತು ಸ್ಯಾಮ್‌ಸಂಗ್ ಫೋನ್‌ಗಳಿಗೆ ನೇರ ಪೈಪೋಟಿ ನೀಡುತ್ತದೆ. ಇವುಗಳಿಗೆ ಹೋಲಿಸಬಹುದಾದ ಗುಣಮಟ್ಟವನ್ನು ಒದಗಿಸಲು ನಿರೋಧಕ ಮತ್ತು ಸಂರಕ್ಷಿತವಾಗಿದೆ. ಅದರಂತೆ, ಈ ಒಪ್ಪೋ ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP69, IP68 ಮತ್ತು IP66 ರೇಟಿಂಗ್‌ಗಳನ್ನು ಹೊಂದಿದೆ. ಇದು ಮಿಲಿಟರಿ ದರ್ಜೆಯ ಬಾಳಿಕೆ ಒದಗಿಸಲು MIL-STD-810H ಪ್ರಮಾಣೀಕರಣ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ನೊಂದಿಗೆ ಬರುತ್ತದೆ. ಈ ಫೋನಿನ ರಿಯಾಯಿತಿ ಬೆಲೆ ತಿಳಿಯಲು ಮುಂದೆ ಓದಿ.

ಒಪ್ಪೋ F27 ಪ್ರೊ+ 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಒಪ್ಪೋ F27 ಪ್ರೊ+ 5G ಸ್ಮಾರ್ಟ್‌ಫೋನ್ 6.7 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು ಫುಲ್ ಹೆಚ್‌ಡಿ ಪ್ಲಸ್ 3D ಬಾಗಿದ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2412 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಇದರೊಂದಿಗೆ 950 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, 120Hz ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರದ ಬೆಂಬಲ ಹೊಂದಿದೆ. ಈ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಮಾತ್ರವಲ್ಲದೆ, ಸ್ಪ್ಲಾಶ್ ಟಚ್ ಕಂಟ್ರೋಲ್‌ನೊಂದಿಗೆ ಬರುತ್ತದೆ.

ಮೀಡಿಯಾಟೆಕ್ ಪ್ರೊಸೆಸರ್

ಒಪ್ಪೋ F27 ಪ್ರೊ ಪ್ಲಸ್ 5G ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 7050 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 6 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 15 ಓಎಸ್‌ ಆಧಾರಿತ ColorOS 14 ಜೊತೆಗೆ ಕೆಲಸ ಮಾಡುತ್ತದೆ. ಈ ಮೊಬೈಲ್ ಗ್ರಾಫಿಕ್ಸ್‌ಗಾಗಿ, ಮಾಲಿ G68 ಜಿಪಿಯು ಸಹ ಹೊಂದಿದೆ. ಈ ಒಪ್ಪೋ F27 ಪ್ರೊ ಪ್ಲಸ್ ಮೊಬಯಳ್ 8GB RAM + 128GB ಸ್ಟೋರೇಜ್ ಮೆಮೊರಿ ಮತ್ತು 8GB RAM + 256GB ಸ್ಟೋರೇಜ್ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್

ಒಪ್ಪೋ F27 ಪ್ರೊ+ 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ಎರಡನೇ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅಳವಡಿಸಲಾಗಿದೆ.

ಬ್ಯಾಟರಿ ಬ್ಯಾಕಪ್ ಸೂಪರ್

ಒಪ್ಪೋ F27 ಪ್ರೊ+ 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಫೋನಿನಲ್ಲಿ 67W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದು ಎಐ (AI) ಎರೇಸರ್, ಎಐ ಸ್ಮಾರ್ಟ್ ಇಮೇಜ್ ಮ್ಯಾಟಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಒಪ್ಪೋ F27 ಪ್ರೊ+ 5G ಹೊಸ ಬೆಲೆ ಮತ್ತು ಆಫರ್

ಒಪ್ಪೋ F27 ಪ್ರೊ+ 5G ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರವನ್ನು 27,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ಇದು ಅಮೆಜಾನ್‌ನಲ್ಲಿ 2,000 ರೂ.ಗಳ ಬೆಲೆ ಇಳಿಕೆಯೊಂದಿಗೆ ಲಭ್ಯವಿದೆ. ನೀವು ಹೆಚ್ಚುವರಿಯಾಗಿ 1,950 ರೂ. ಬ್ಯಾಂಕ್ ರಿಯಾಯಿತಿಯ ಲಾಭ ಪಡೆಯಬಹುದು. ಒಟ್ಟು 3,950 ರೂ. ಉಳಿತಾಯ ಮಾಡಬಹುಡು. ಇದರೊಂದಿಗೆ ನೀವು 24,049 ರೂ.ಗೆ ಈ ಫೋನನ್ನು ಖರೀದಿಸಬಹುದು.

Best Mobiles in India

English summary
21 Percent Discount on OPPO F27 Pro+ 5G with 8GB RAM in amazon: Check Price, Offers, Specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+