Home
Deal of the day

4000 ಡಿಸ್ಕೌಂಟ್! 64MP + 50MP + 50MP ಕ್ಯಾಮೆರಾಗಳು.. 512GB ಸ್ಟೋರೇಜ್.. iQOO 12 ಬೆಲೆ ಭಾರೀ ಇಳಿಕೆ

ಐಕ್ಯೂ ಕಂಪನಿಯು ತನ್ನ ವಿಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ. ಇತ್ತೀಚೆಗೆ ಭಾರತದಲ್ಲಿ ಮಾರುಕಟ್ಟೆಯಲ್ಲಿ ಐಕ್ಯೂ 13 (iQOO 13) ಫೋನನ್ನು ಬಿಡುಗಡೆ ಮಾಡಿದೆ. ಇದೀಗ, ಐಕ್ಯೂ 12 5G (iQOO 12 5G) ಫೋನಿನ ಬೆಲೆಯನ್ನು ದಿಢೀರನೆ ಕಡಿತ ಮಾಡಿದೆ. ಹೌದು, ಅಮೆಜಾನ್‌ನಲ್ಲಿ ಐಕ್ಯೂ 12 5G ಸ್ಮಾರ್ಟ್‌ಫೋನ್ ಖರೀದಿ ಮೇಲೆ ಶೇ.23 ರಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ. ಜೊತೆಗೆ, ಬ್ಯಾಂಕ್‌ ಆಫರ್‌ ಮತ್ತು ಕ್ಯಾಶ್‌ಬ್ಯಾಕ್ ಸಹ ಸಿಗುತ್ತದೆ. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ ಬನ್ನಿ.

ಐಕ್ಯೂ 12 ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನಿನಲ್ಲಿ 64MP + 50MP + 50MP ಕ್ಯಾಮೆರಾಗಳು ಲಭ್ಯವಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಪ್ರೊಸೆಸರ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಈ ಮೊಬೈಲ್ 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 512GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 120W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಸ್ತುತ, ನೀವು 4000 ರೂ. ರಿಯಾಯಿತಿಯೊಂದಿಗೆ ಈ ಮೊಬೈಲ್ ಖರೀದಿಸಬಹುದು.

iQOO 12 ಬೆಲೆ ಇಳಿಕೆ! 64MP ಕ್ಯಾಮೆರಾ, 512GB ಸ್ಟೋರೇಜ್.. 4000 ಡಿಸ್ಕೌಂಟ್

ಐಕ್ಯೂ 12 ಹೊಸ ಬೆಲೆ ಮತ್ತು ಆಫರ್‌ಗಳು

ಐಕ್ಯೂ 12 ಫೋನಿನ 12GB RAM + 256GB ಸ್ಟೋರೇಜ್ ರೂಪಾಂತರವನ್ನು 45,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. 16GB RAM + 512GB ಸ್ಟೋರೇಜ್ ವೇರಿಯಂಟ್ ಬೆಲೆ 50,999 ರೂ. ಆಗಿದೆ. ಪ್ರಸ್ತುತ, ಅಮೆಜಾನ್‌ನಲ್ಲಿ 12GB RAM ರೂಪಾಂತರದ ಖರೀದಿ ಮೇಲೆ 4,000 ರೂ. ರಿಯಾಯಿತಿ ನೀಡಲಾಗುತ್ತಿದೆ. ನೀವು ಅಮೆಜಾನ್ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ ಈ ಆಫರ್‌ ಪಡೆಯಬಹುದು. ರಿಯಾಯಿತಿಯೊಂದಿಗೆ 41,999 ರೂ.ಗೆ ಈ ಫೋನನ್ನು ಖರೀದಿಸಬಹುದು. ಅಮೆಜಾನ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು.

ಈ ಸುದ್ದಿ ಓದಿದ್ದೀರಾ?: Budget App: ಕೇಂದ್ರ ಬಜೆಟ್ ಮೇಲೆ ಎಲ್ಲರ ಕಣ್ಣು; ಈ ಆಪ್‌ನಲ್ಲಿ ಸಿಗುತ್ತೆ ಎಲ್ಲಾ ಮಾಹಿತಿ; ಈ ರೀತಿ ಡೌನ್‌ಲೋಡ್ ಮಾಡಿ

ಐಕ್ಯೂ 12 ವೈಶಿಷ್ಟ್ಯಗಳು

ದೊಡ್ಡ ಡಿಸ್ಪ್ಲೇ

ಐಕ್ಯೂ 12 5G ಮೊಬೈಲ್ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 144 Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಹಾಗೆಯೇ 3000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಮತ್ತು 1200Hz ಟಚ್ ಸ್ಯಾಂಪ್ಲಿಂಗ್ ದರದ ಬೆಂಬಲ ಪಡೆದಿದೆ.

ಕ್ವಾಲ್ಕಾಮ್‌ ಪ್ರೊಸೆಸರ್

ಐಕ್ಯೂ 12 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 750 ಜಿಪಿಯು ಸಹ ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್‌ 14 ಆಧಾರಿತ Funtouch ಓಎಸ್‌ 14ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 16GB RAM ಮತ್ತು 512GB ಸ್ಟೋರೇಜ್ ಲಭ್ಯವಿದೆ.

iQOO 12 ಬೆಲೆ ಇಳಿಕೆ! 64MP ಕ್ಯಾಮೆರಾ, 512GB ಸ್ಟೋರೇಜ್.. 4000 ಡಿಸ್ಕೌಂಟ್

ಟ್ರಿಪಲ್ ಕ್ಯಾಮೆರಾ ಸೆಟಪ್

ಐಕ್ಯೂ 12 5G ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಮೊಬೈಲ್‌ನಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 64 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಹೊಂದಿದೆ.

ದೊಡ್ಡ ಬ್ಯಾಟರಿ

ಐಕ್ಯೂ 12 ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು, 120W ಚಾರ್ಜಿಂಗ್ ತತ್ರಜ್ಞಾನ ಒದಗಿಸಲಾಗಿದೆ. ಈ ಮೊಬೈಲ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, 4G LTE, ವೈ-ಫೈ 7, ಬ್ಲೂಟೂತ್ 5.4, ಜಿಪಿಎಸ್‌, ಎನ್‌ಎಫ್‌ಸಿ ಮತ್ತು ಯುಎಸ್‌ಬಿ 2.0 ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು

Best Mobiles in India

English summary
23 Present Discount on iQOO 12 with 12GB RAMA in Amazon: check new price, offers, availability, specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+