Vivo: ಮತ್ತೆ ಬೆಲೆ ಕುಸಿತ! 50MP ಕ್ಯಾಮೆರಾ.. 5000mAh ಬ್ಯಾಟರಿ.. ಸಸ್ತಾ ಬೆಲೆಗೆ ಸೇಲ್; ಯಾವ ಫೋನ್?
ವಿವೋ ಬಜೆಟ್ ಬೆಲೆಯ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಕಮಾಲ್ ಮಾಡುತ್ತಿದೆ. ಗ್ರಾಹಕರು ಸಹ ವಿವೋ ಮೊಬೈಲ್‌ಗಳನ್ನು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಈ ನಡುವೆಯೇ ವಿವೋ ತನ್ನ ಸೊಗಸಾದ 5G ಫೋನಿನ ಬೆಲೆಯನ್ನು ಮತ್ತೆ ಇಳಿಕೆ ಮಾಡಿದೆ. ಹೌದು, ವಿವೋ Y28 5G (Vivo Y28 5G) ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ರಿಯಾಯಿತಿ ದರದಲ್ಲಿ ಖರೀದಿಸಬಹುದು. ಡಿಸ್ಕೌಂಟ್ ಜೊತೆಗೆ ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ. ಈ ವಿವೋ Y28 5G ಫೋನಿಗೆ ಯಾವೆಲ್ಲಾ ಆಫರ್ ಲಭ್ಯವಿದೆ ಮತ್ತು ವಿಶೇಷತೆಗಳೇನು? ಎನ್ನುವುದನ್ನು ತಿಳಿಯೋಣ ಬನ್ನಿ.
ವಿವೋ Y28 5G ಅನ್ನು ಕಳೆದ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಈ ಕಡಿಮೆ ಬಜೆಟ್ ಫೋನಿನ ಬೆಲೆ ಕೇವಲ 13,999 ರೂ. ಆಗಿದೆ. ಇದೀಗ, ಭಾರೀ ರಿಯಾಯಿತಿಯನ್ನು ಪಡೆದಿದೆ. ಈ ಫೋನಿನ ವಿಶೇಷತೆಗಳೆಂದರೆ, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ 6.56 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಇದಲ್ಲದೆ, ಈ ಫೋನಿನಲ್ಲಿ 8GB RAM, 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳು ಲಭ್ಯವಿದೆ. ಈ ಮೊಬೈಲ್‌ನ ಹೊಸ ಬೆಲೆ ತಿಳಿಯಲು ಮುಂದೆ ಓದಿ.

ವಿವೋ Y28 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ವಿವೋ Y28 5G ಸ್ಮಾರ್ಟ್‌ಫೋನ್ 6.56 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು ವಾಟರ್ ಡ್ರಾಪ್ ಎಲ್‌ಸಿಡಿ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 1,612 × 720 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಇದರೊಂದಿಗೆ 90Hz ರಿಫ್ರೆಶ್ ದರ ಮತ್ತು 840 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ವಿವೋ Y28 5G ಫೋನಿನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಆಕ್ಟಾ-ಕೋರ್ ಪ್ರೊಸೆಸರ್ ಅಳವಡಿಸಲಾಗಿದೆ. ಇದನ್ನು 7 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ನಲ್ಲಿ ನಿರ್ಮಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 13 ಮತ್ತು ಫಂಟೌಚ್ ಓಎಸ್ 13 ನೊಂದಿಗೆ ಕೆಲಸ ಮಾಡುತ್ತದೆ. ಈ ವಿವೋ 5G ಫೋನ್ 8GB ವಿಸ್ತೃತ RAM ವೈಶಿಷ್ಟ್ಯವನ್ನು ಹೊಂದಿದೆ. ಈ ವೈಶಿಷ್ಟ್ಯವನ್ನು ಬಳಸಿಕೊಂಡು, ಫೋನಿನ 8GB RAM ಅನ್ನು 16GB RAM ವರೆಗೆ ವಿಸ್ತರಿಸಬಹುದು.
ಕ್ಯಾಮೆರಾ ಸೆಟಪ್
ವಿವೋ Y28 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ವಿವೋ Y28 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ತ್ವರಿತವಾಗಿ ಚಾರ್ಜ್ ಮಾಡಲು, 15W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಈ ಫೋನ್ 7 5G ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ. ಭದ್ರತೆಗಾಗಿ, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಹೊಂದಿದೆ. ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ ಈ ಫೋನಿಗೆ IP54 ರೇಟಿಂಗ್ ನೀಡಲಾಗಿದೆ.

ವಿವೋ Y28 5G ಬೆಲೆ ಮತ್ತು ಆಫರ್
4GB RAM + 128GB ಸ್ಟೋರೇಜ್ ಬೆಲೆ = 13,999 ರೂ.
6GB RAM + 128GB ಸ್ಟೋರೇಜ್ ಬೆಲೆ = 15,499 ರೂ.
8GB RAM + 128GB ಸ್ಟೋರೇಜ್ ಬೆಲೆ = 16,999 ರೂ.
ವಿವೋ Y28 5G ಫೋನನ್ನು ಮೂರು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಫ್ಲಿಪ್‌ಕಾರ್ಟ್‌ನಲ್ಲಿ 4GB RAM + 128GB ಸ್ಟೋರೇಜ್ ಹೊಂದಿರುವ ಫೋನಿಗೆ ಶೇ.37 ರಷ್ಟು ರಿಯಾಯಿತಿ ಲಭ್ಯವಿದೆ. ನೀವು ಪ್ರಸ್ತುತ ಕೇವಲ 11,285 ರೂ.ಗೆ ಖರೀದಿಸಬಹುದು. ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಈ ಫೋನ್ ಖರೀದಿಸಿದರೆ, ಶೇ. 5 ರಷ್ಟು ಕ್ಯಾಶ್‌ಬ್ಯಾಕ್ ಆಫರ್ ಸಹ ನೀಡಲಾಗುತ್ತಿದೆ. ನೀವು ಈ ಫೋನನ್ನು ಇನ್ನಷ್ಟು ಅಗ್ಗದ ಬೆಲೆಗೆ ಕೊಳ್ಳಬಹುದು.


Click it and Unblock the Notifications








