ಫುಲ್ ಡಿಮ್ಯಾಂಡ್! 6000mAh ಬ್ಯಾಟರಿ.. 256GB ಸ್ಟೋರೇಜ್.. 37% ರಿಯಾಯಿತಿ; ಯಾವ ಫೋನ್?
ಸ್ಯಾಮ್‌ಸಂಗ್ ಅಭಿಮಾನಿಗಳಿಗೆ ಇಲ್ಲದೆ ಬಂಪರ್ ಆಫರ್. ನೀವು ಕಡಿಮೆ ಬೆಲೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ M35 5G (Samsung Galaxy M35 5G) ಫೋನನ್ನು ಆರ್ಡರ್ ಮಾಡಬಹುದು. ಹೌದು, ಅಮೆಜಾನ್‌ನಲ್ಲಿ ಈ ಫೋನಿನ ಖರೀದಿ ಮೇಲೆ ಶೇ.37 ರಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ. ಜೊತೆಗೆ ಬ್ಯಾಂಕ್ ಡಿಸ್ಕೌಂಟ್ ಮತ್ತು ಎಕ್ಸ್‌ಚೇಂಜ್ ಆಫರ್ ಸಹ ನೀಡಲಾಗುತ್ತಿದೆ. ಸ್ಯಾಮ್‌ಸಂಗ್ ಪ್ರಿಯರು ಮುಗಿಬಿದ್ದು ಈ ಫೋನನ್ನು ಖರೀದಿಸುತ್ತಿದ್ದಾರೆ. ಈ ಫೋನಿನ ಮೂಲ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ನೀವು, ಸ್ಯಾಮ್‌ಸಂಗ್‌ನ 5G ಫೋನ್ ಖರೀದಿಸಲು ಬಯಸಿದರೆ ಮತ್ತು ನಿಮ್ಮ ಬಜೆಟ್ ಕಡಿಮೆಯಿದ್ದರೆ, ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ M35 5G ಉತ್ತಮ ಆಯ್ಕೆಯಾಗಿದೆ. ಈ ಫೋನಿನ ವಿಶೇಷತೆಗಳನ್ನು ನೋಡುವುದಾದರೆ, ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಇದು Exynos 1380 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ 6.6 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನ್ 128GB ಸ್ಟೋರೇಜ್, 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಮತ್ತು 25W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M35 5G ಹೊಸ ಬೆಲೆ ಮತ್ತು ಆಫರ್
ಸ್ಯಾಮ್‌ಸಂಗ್ ಗ್ಯಾಲಕ್ಸಿ M35 5G ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. 6GB RAM + 128GB ಸ್ಟೋರೇಜ್ ರೂಪಾಂತರವನ್ನು 19,999 ರೂ. ಬಿಡುಗಡೆಯಾಗಿದೆ. 8GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆ 21,499 ರೂ. ಆಗಿದೆ. ಹಾಗೆಯೇ 8GB RAM + 256GB ಸ್ಟೋರೇಜ್ ಆಯ್ಕೆಯು 24,499 ರೂ.ಗೆ ಲಭ್ಯವಿದೆ. ಈ ಮೊಬೈಲ್ ಮೂರು ಬಣ್ಣಗಳಲ್ಲಿ ಬರುತ್ತದೆ. ನೀವು ಡೇ ಬ್ರೇಕ್ ಬ್ಲೂ, ಮೂನ್ ಲೈಟ್ ಬ್ಲೂ ಮತ್ತು ಥಂಡರ್ ಗ್ರೇ ಬಣ್ಣಗಳಲ್ಲಿ ಖರೀದಿಸಬಹುದು.
ಪ್ರಸ್ತುತ, ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ M35 5G ಫೋನಿನ 8GB RAM + 128GB ರೂಪಾಂತರದ ಬೆಲೆ 18,499 ರೂ.ಗೆ ಲಭ್ಯವಿದೆ. ಕಂಪನಿಯು ಈ ಫೋನಿನ ಬೆಲೆಯನ್ನು 2000 ರೂ.ಗಳಷ್ಟು ಕಡಿಮೆ ಮಾಡಿದೆ. ನೀವು ರಿಯಾಯಿತಿಯೊಂದಿಗೆ 16,499 ರೂ.ಗಳ ಬಜೆಟ್ ಒಳಗೆ ಲಭ್ಯವಿದೆ. ಈ ಬೆಲೆಯಲ್ಲಿ ಖರೀದಿಸಲು ಯಾವುದೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಅಗತ್ಯವಿಲ್ಲ. ಜೊತೆಗೆ 495 ರೂ. ಬ್ಯಾಂಕ್ ರಿಯಾಯಿತಿ ಮತ್ತು 15,550 ರೂ. ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. ಅಮೆಜಾನ್ ಸೈಟ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ M35 5G ವೈಶಿಷ್ಟ್ಯಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ M35 5G ಸ್ಮಾರ್ಟ್‌ಫೋನ್ 6.6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 1080×2340 ಪಿಕ್ಸೆಲ್‌ಗಳ ರೆಸಲ್ಯೂಶನ್, 120 Hz ರಿಫ್ರೆಶ್ ದರ ಮತ್ತು 1,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್+ ರಕ್ಷಣೆಯನ್ನು ಹೊಂದಿದೆ. ಈ ಮೊಬೈಲ್ Exynos 1380 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದು ಗ್ರಾಫಿಕ್ಸ್‌ಗಾಗಿ ಮಾಲಿ G68 MP5 ಜಿಪಿಯು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ ಒನ್ ಯುಐ 6 ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M35 5G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ, 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಮೊಬೈಲ್ 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಸ್ಯಾಮ್‌ಸಂಗ್ ಫೋನ್ 6GB, 8GB RAM ಮತ್ತು 128GB, 256GB ಸ್ಟೋರೇಜ್ ಆಯ್ಕೆ ಹೊಂದಿದೆ. ಮೈಕ್ರೊ ಎಸ್‌ಡಿ ಕಾರ್ಡ್‌ನ ಸಹಾಯದಿಂದ ಸ್ಟೋರೇಜ್ ಅನ್ನು 1TB ವರೆಗೆ ವಿಸ್ತರಿಸಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ M35 5G ಮೊಬೈಲ್ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 25W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ. ಹಾಗೆಯೇ ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಸಹ ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ 5G SA /NSA, ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ 5.3, ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








